Swaagatam

स्वागतम्

Wednesday, March 4, 2009

ಹಿಂದೂಗಳಿಗೆ ದಾರಿಯೊಂದೇ

ಒಂದೋ ಜನ ಗಣ ಮನ ಹಾಡುವುದನ್ನು ನಿಲ್ಲಿಸಬೇಕು ಅಥವಾ ಜನ ಗಣ ಮನ ಎಂಬುದರ ಪರ್ಯಾಯಪದವಾದ ತ್ರಿವರ್ಣಧ್ವಜದ ಒಡೆತನವನ್ನು ಒಪ್ಪದವರಿಗೆ ಈ ದೇಶದಲ್ಲಿ ಜಾಗವಿಲ್ಲ(ವಾಸಿಸುವ ಯಾವುದೇ ಹಕ್ಕಿಲ್ಲ) ಎಂಬುದನ್ನು ನಿಶ್ಚಯ ಮಾಡಬೇಕು.

ಜಮ್ಮು - ಕಾಶ್ಮೀರದ ಸಮಸ್ಯೆಯ ವರ್ತಮಾನ ಸ್ಥಿತಿಯು ಒಂದೇ ಸಂದೇಶವನ್ನು ನೀಡುತ್ತಿದೆ - ಈ ಸಂಘರ್ಷ ನಡೆಯುತ್ತಿರುವುದು ದೇಶಭಕ್ತಿ ಮತ್ತು ದೇಶದ್ರೋಹದ ನಡುವೆ. ಭಾರತದ ತ್ರಿವರ್ಣಧ್ವಜದೆದುರಿಗೆ ಪಾಕಿಸ್ಥಾನದ ಹಸಿರು ಧ್ವಜವನ್ನು ಹಾರಿಸಲಾಗಿದೆ. ಆದ್ದರಿಂದ, ಈ ಸಮಸ್ಯೆಯನ್ನು ಬಗೆಹರಿಸುವಲ್ಲಿ ದ್ವಂದ್ವ ನೀತಿ ಅನುಸರಿಸಬಾರದು. ಭೂಮಿ ನೀಡಲು ಮೂರು ವರ್ಷ ಹಿಂದೆಮುಂದೆ ನೋಡಿದ ಸರ್ಕಾರ ಮೂರೇ ದಿನದಲ್ಲಿ ಅದನ್ನು ಹಿಂಪಡೆದಿದ್ದೇಕೆ ? ಎಂಬ ಪ್ರಶ್ನೆಗೆ ಇವತ್ತಿಗೂ ಉತ್ತರ ದೊರಕಿಲ್ಲ. ಇದು ಯಾವುದೇ ಸ್ಥಾನೀಯ ಸೌಲಭ್ಯ - ಅಸೌಲಭ್ಯಗಳ ಕೂಗಲ್ಲ. ಇದು ಭಾರತದಲ್ಲಿ ಕಾಶ್ಮೀರವನ್ನು ಉಳಿಸುವ ಸಂಘರ್ಷ. ಈ ದೃಷ್ಟಿಯಿಂದ ಹನ್ನೊಂದು ಅಂಶಗಳ ಪರಿಹಾರ ಮಾರ್ಗ ಇಂತಿದೆ -

೧. ಜಮ್ಮು - ಕಾಶ್ಮೀರ ಹಿಂದೂ, ಮುಸ್ಲಿಂ, ಬೌದ್ಧ, ಮುಂತಾದ ಎಲ್ಲ ಭಾರತೀಯರ ಸ್ವತ್ತು. ಆದ್ದರಿಂದ, ಯಾವುದೇ ಸಮಸ್ಯೆಯನ್ನು ಧಾರ್ಮಿಕವಾಗಿಸಬಾರದು, ಸಾಂಪ್ರದಾಯಿಕವಾಗಿಸಬಾರದು.

೨. ಜಮ್ಮು, ಕಣಿವೆ ಮತ್ತು ಲಢಾಕ್ - ಇವುಗಳಲ್ಲಿ ಕ್ಷೇತ್ರೀಯ ಅಸಮತೋಲನವಿದೆ. ಮತ್ತು ಅನುದಾನದ ವಿಷಯದಲ್ಲಿ ಭೇದಭಾವ ಮಾಡಲಾಗುತ್ತದೆ. ಇದನ್ನು ಏಕಮತದಿಂದ ಎಲ್ಲರೂ ವಿರೋಧಿಸಬೇಕು ಮತ್ತು ಇದು ನಿಲ್ಲಬೇಕು. ಆದ್ದರಿಂದ, ವಿಧಾನಸಭಾಕ್ಷೇತ್ರಗಳ ಮರುರೇಖಾಂಕನ ಆಗಬೇಕು.

೩. ಶ್ರೀ ಅಮರನಾಥ ಶ್ರೈನ್ ಬೋರ್ಡನ್ನು ರೂಪಿಸಿದ್ದು ಸರ್ಕಾರವೇ. ಭೂಮಿಯೂ ಸರ್ಕಾರದ್ದೇ. ಸರ್ಕಾರವು ಹೊರಡಿಸಿದ ಆದೇಶದ ಮೇರೆಗೇ ಅದನ್ನು ಶ್ರೀ ಅಮರನಾಥ ಶ್ರೈನ್ ಬೋರ್ಡ್‌ಗೆ ನೀಡಲಾಗಿತ್ತು. ಈ ಭೂಮಿಯನ್ನು ತಕ್ಷಣ ಶ್ರೀ ಅಮರನಾಥ ಶ್ರೈನ್ ಬೋರ್ಡ್‌ಗೆ ಹಸ್ತಾಂತರಿಸಬೇಕು ಮತ್ತು ಯಾತೆಯ ಸಂಪೂರ್ಣ ಜವಾಬ್ದಾರಿಯನ್ನು ಶ್ರೀ ಅಮರನಾಥ ಶ್ರೈನ್ ಬೋರ್ಡ್‌ಗೆ ವಹಿಸಬೇಕು.

೪. ಜಮ್ಮು - ಕಾಶ್ಮೀರದ ಪ್ರತಿಯೊಂದು ಪ್ರದೇಶಕ್ಕೂ ಸಮಾನವಾದ ಅನುಪಾತದಲ್ಲಿ ಒಂದು ಲಕ್ಷ ಹೊಸ ಉದ್ಯೋಗ ಸೃಷ್ಟಿಯನ್ನು ಘೋಷಿಸಬೇಕು.

೫. ಜಮ್ಮು, ಕಣಿವೆ ಮತ್ತು ಲಢಾಕ್ ಕ್ಷೇತ್ರಗಳಲ್ಲಿ ಗ್ರಾಮೀಣ ವಿಕಾಸದ ಮಹತ್ವಾಕಾಂಕ್ಷೀ ಯೋಜನೆಗಳನ್ನು ರಾಷ್ಟ್ರೀಯ ಮೇಲ್ವಿಚಾರಣೆ ಮತ್ತು ದೇಶದ ವಿಭಿನ್ನ ಭಾಗಗಳಿಂದ ಆಮಂತ್ರಿಸಲ್ಪಟ್ಟ ಸ್ವಯಂಸೇವಾ ಸಂಘಟನೆಗಳ ಮುಖಾಂತರ ಮಾಡಿಸಬೇಕು.

೬. ಜಮ್ಮು - ಕಾಶ್ಮೀರದ ಸರ್ಕಾರಿ ನೌಕರರನ್ನು ದೇಶದ ಬೇರೆ ಬೇರೆ ಭಾಗಗಳಲ್ಲಿ ಐದು ವರ್ಷ ಕಡ್ಡಾಯವಾಗಿ ನಿಯೋಜಿಸಬೇಕು. ಮತ್ತು ದೇಶದ ಬೇರೆ ಬೇರೆ ಭಾಗಗಳ ನೌಕರರನ್ನು ಜಮ್ಮು - ಕಾಶ್ಮೀರದ ಸರ್ಕಾರಿ ಕೆಲಸಗಳಲ್ಲಿ ಅನಿವಾರ್ಯವಾಗಿ ನಿಯುಕ್ತಿ ಮಾಡಬೇಕು.

೭. ಈ ವರ್ಷ ೨ ಅಕ್ಟೋಬರ್, ಗಾಂಧೀ ಜಯಂತಿಯಿಂದ ಡಾ. ಮನಮೋಹನ್ ಸಿಂಗ್‌ರವರ ನೇತೃತ್ವದಲ್ಲಿ ಶರಣಾರ್ಥಿಗಳಾದ ಕಾಶ್ಮೀರೀ ಹಿಂದೂಗಳು ವಾಪಸಾಗಬೇಕು. ಈ ಯಾತ್ರೆಗೆ ಗುರು ತೇಗ್ ಬಹಾದುರ್ ಯಾತ್ರೆ ಎಂದು ಹೆಸರಿಡಬೇಕು. ಏಕೆಂದರೆ, ಅವರೇ ಎಲ್ಲರಿಗಿಂತ ಮೊದಲು ತಮ್ಮ ಬಲಿದಾನದಿಂದ ಕಾಶ್ಮೀರಿ ಪಂಡಿತರ ಅತ್ಯಾಚಾರವನ್ನು ರಕ್ಷಿಸಿದ್ದರು.

೮. ಕಾಶ್ಮೀರದ ಪ್ರತಿಯೊಂದು ಶಾಲೆಯ ಪಠ್ಯದಲ್ಲಿ ಸರ್ವಪಂಥ ಸಮಭಾವವನ್ನು ಹೆಚ್ಚಿಸುವ ಪಾಠಗಳನ್ನು ಸೇರಿಸಬೇಕು. ಮತ್ತು ಕಾಶ್ಮೀರದಿಂದ ಅರುಣಾಚಲ, ಅಂಡಮಾನ್, ಕನ್ಯಾಕುಮಾರಿ ಮತ್ತು ದ್ವಾರಕಾದವರೆಗೆ ಹರಡಿರುವ ವಿಶಾಲ ಭಾರತದ ಬಗೆಗೆ ಆತ್ಮೀಯತೆಯನ್ನು ಮೂಡಿಸಲು ಅಭಿಯಾನ ನಡೆಸಬೇಕು. ಅದರಲ್ಲಿ ದೇಶದ ವಿವಿಧ ಭಾಗಗಳಿಂದ ಮಕ್ಕಳು ಕಾಶ್ಮೀರಕ್ಕೆ ಬರಬೇಕು ಮತ್ತು ಈ ಮೂಲಕ ಕಾಶ್ಮೀರದ ಮಕ್ಕಳು ದೇಶದ ವಿವಿಧ ಭಾಗಗಳ ಮಕ್ಕಳ ಜೊತೆ ಬೆರೆಯುವ ಅವಕಾಶವನ್ನು ಕಲ್ಪಿಸಬೇಕು, ಅವರು ಅಲ್ಲಿ ಓಡಾಡಬೇಕು - ಇದು ನಿಶ್ಶುಲ್ಕವಾಗಿ ನಡೆಯಬೇಕು.

೯. ಜಮ್ಮು - ಕಾಶ್ಮೀರದ ಬಗೆಗೆ ಸಂವಿಧಾನದಲ್ಲಿರುವ ಪಕ್ಷಪಾತ ಧೋರಣೆ - ಎರಡು ಧ್ವಜಗಳು ಮತ್ತು ಹೆಚ್ಚಿನ ಕೇಂದ್ರೀಯ ಕಾನೂನುಗಳು ಅಲ್ಲಿ ಅನ್ವಯವಾಗದಿರುವುದು. ಅಲ್ಲಿ ಭಾರತೀಯತೆಯು ಸ್ಥಿರವಾಗಿ ಉಳಿಯಲು ಇವೆಲ್ಲವೂ ನಿಲ್ಲಬೇಕು. ಆದ್ದರಿಂದ, ಜಮ್ಮು - ಕಾಶ್ಮೀರದ ಪ್ರಾಮಾಣಿಕ ವಿಕಾಸ ಮತ್ತು ರಾಷ್ಟ್ರೀಯತೆಯ ಭಾವವನ್ನು ಉದ್ದೀಪನಗೊಳಿಸಲು ೩೭೦ನೇ ಕಲಮವನ್ನು ಕೂಡಲೇ ನಿಲ್ಲಿಸಬೇಕು.

೧೦. ಭಾರತೀಯ ಸಂಸತ್ತು ೨೨ ಫೆಬ್ರವರಿ ೧೯೯೪ರಲ್ಲಿ ಮಂಡಿಸಿದ ಈ ಕೆಳಗಿನ ಪ್ರಸ್ತಾವವನ್ನು ಜಮ್ಮು - ಕಾಶ್ಮೀರದ ಪ್ರತಿಯೊಂದು ಶಾಲೆ, ಸರ್ಕಾರಿ ಕಛೇರಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕಾಣುವಂತೆ ಇಡುವುದು ಅನಿವಾರ್ಯವಾಗಬೇಕು. ಅದು ಇಂತಿದೆ - ಜಮ್ಮು - ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ ಮತ್ತು ಅಂಗವಾಗಿಯೇ ಇರುತ್ತದೆ. ಇದನ್ನು ಭಾರತದಿಂದ ಬೇರೆಯಾಗಿಸುವ ಯಾವುದೇ ಪ್ರಯತ್ನವನ್ನು ಬಲವಾಗಿ ದಮನಗೊಳಿಸಲಾಗುವುದು. ಭಾತರವು ತನ್ನ ಏಕತೆ, ಪ್ರಭುತ್ವ ಮತ್ತು ಭೌಗೋಳಿಕ ಅಖಂಡತೆಯ ವಿರುದ್ಧದ ಪ್ರತಿಯೊಂದು ಪ್ರಯತ್ನಕ್ಕೂ ದೃಢವಾಗಿ ಪ್ರತಿರೋಧ ಒಡ್ಡುವ ಇಚ್ಛಾಶಕ್ತಿ ಮತ್ತು ಕ್ಷಮತೆ ಇದೆ. ಮತ್ತು ಪಾಕಿಸ್ಥಾನವು ಆಕ್ರಮಿಸಿರುವ ಭಾರತದ ಜಮ್ಮು - ಕಾಶ್ಮೀರ ರಾಜ್ಯದ ಆ ಪ್ರದೇಶಗಳನ್ನು ವಾಪಸ್ ನೀಡುವಂತೆ ಆಗ್ರಹಿಸುತ್ತದೆ.

ಇದು ಪ್ರತಿಯೊಂದು ರಾಜಕೀಯ ಪಕ್ಷದಿಂದ ಅಂಗಿಕರಿಸಲ್ಪಟ್ಟಿದೆ ಮತ್ತು ಸರ್ವಾನುಮತದಿಂದ ಇದರ ಮಂಡನೆಯಾಗಿದೆ.

೧೧. ಜಮ್ಮು - ಕಾಶ್ಮೀರದ ಪ್ರತ್ಯೇಕತೆಯ ಮತ್ತು ಅಸಂತೋಷದ ನೆಪದಲ್ಲಿ ಶ್ರೀನಗರ ರಾಜಕೀಯ ನಾಯಕರ ಅತಿಯಾದ ಭ್ರಷ್ಟಾಚಾರ ಮತ್ತು ದೆಹಲಿಯ ಕೇಂದ್ರ ಸರ್ಕಾರದ ತುಷ್ಟೀಕರಣ ನೀತಿಯಿಂದ ಅವರಿಗೆ ರಕ್ಷಣೆ ಸಿಗುತ್ತಿದೆ. ಜಮ್ಮು - ಕಾಶ್ಮೀರದ ಹೊಸ ಯುವ ಮತ್ತು ಪ್ರಾಮಾಣಿಕ ರಾಜನೀತಿಜ್ಞರ ಉದಯವಾಗಲು ಅಲ್ಲಿನ ಸೇನೆಗೆ ಒಂದು ವರ್ಷದಲ್ಲಿ ಎಲ್ಲ ಭಯೋತ್ಪಾದಕರ ಮತ್ತು ಅವರ ಅವರ ಅನಧಿಕೃತ ಅಡ್ಡೆಗಳ ಮೇಲೆ ದಾಳಿ ಮಾಡಿ ಯಾವುದೇ ಮಮಕಾರವಿಲ್ಲದೇ ನಾಶಮಾಡುವ ಆಧಿಕಾರ ನೀಡಬೇಕು. ಪುಟಿನ್ ಚೆಚೆನ್ಯಾ ಮತ್ತು ಜಾರ್ಜಿಯಾಗಳಲ್ಲಿ ಮಾಡಿದ್ದೂ ಇದನ್ನೇ. ಮತ್ತು ಶೇಷಭಾರತದ ನಾಗರಿಕರಿಗೆ, ವಿಶೇಷವಾಗಿ ಮಾಜಿ ಸೈನಿಕರಿಗೆ ಮನೆ ಕಟ್ಟಲು ಅನುವಾಗುವಂತೆ ಜಮ್ಮು - ಕಾಶ್ಮೀರದಲ್ಲಿ ಭೂಮಿ ನೀಡಬೇಕು.

ಎಲ್ಲಿಯವೆರೆಗೆ ಜಮ್ಮು - ಕಾಶ್ಮೀರದ ನಾಗರಿಕರಲ್ಲಿ ಭಾರತೀಯರಾಗಬೇಕೆಂಬ ಭಾವನೆಯನ್ನು ನಾವು ಬೆಳೆಸುವುದಿಲ್ಲವೋ, ಅಲ್ಲಿಯವೆರೆಗೆ ಅವರು ಭಾರತೀಯ ನಾಗರಿಕರ ಕರ್ತವ್ಯ ಪಾಲನೆ ಮಾಡಬೇಕೆಂದು ಹೇಗೆ ತಾನೇ ನಿರೀಕ್ಷಿಸಲಾದೀತು ? ಕಳೆದ ೬ ದಶಕಗಳಲ್ಲಿ ಜಮ್ಮು - ಕಾಶ್ಮೀರಕ್ಕೆ ೩೦೦ ಲಕ್ಷ ಕೋಟಿ ಸಿಕ್ಕಿದೆ. ಕಳೆದ ೫ ವರ್ಷಗಳಲ್ಲಿ ಮುಫ್ತಿಯವರ ಸರ್ಕಾರವು ಕೇಂದ್ರ ಸರ್ಕಾರದಿಂದ ೮೭,೦೦೦ ಕೋಟಿ ರುಪಾಯಿ ಕೊಡಿಸಿದ್ದಾರೆ. ಅಲ್ಲಿನ ನೇತಾರರು ಮತ್ತು ಶಾಸಕರೆಲ್ಲರೂ ಮುಸ್ಲಮರೇ. ಹಾಗಾದರೆ, ಶಿಕಾರಿ ಯಾರಿಗಾಗಿ ? ಎಲ್ಲಿಯವರೆಗೆ ಭ್ರಷ್ಟ ಮತ್ತು ರಾಷ್ಟ್ರವಿರೋಧಿ ನಾಯಕರ ಕಪಿಮುಷ್ಟಿಯಿಂದ ಬಿಡಿಸಿ ಜನ ಗಣ ಮನ ಎಂದು ಹಾಡಿಸುವ ಪ್ರಾಮಾಣಿಕ ಮತ್ತು ಕಠೋರ ನೇತೃತ್ವ ಸಿಗುವುದಿಲ್ಲವೋ, ಅಲ್ಲಿಯವೆರಗೂ ಪರಿಸ್ಥಿತಿ ನಿಭಾಯಿಸುವುದು ಕಷ್ಟವೇ ಆದೀತು.

(ಹಿಂದೀ ಮೂಲ - ತರುಣ್ ವಿಜಯ್)

No comments: