Swaagatam

स्वागतम्

Saturday, October 4, 2008

ಟಿಬೆಟ್‌ಗೂ ಕಾಶ್ಮೀರಕ್ಕೂ ವ್ಯತ್ಯಾಸವೇ ಇಲ್ಲವೇ ?

ಟಿಬೇಟ್‌ನಲ್ಲಿ ಭಾರತೀಯ ನಿಷ್ಠೆಯಾದ ಟಿಬೇಟಿಯನ್ ಬೌದ್ಧಧರ್ಮವನ್ನು ಕಮ್ಯುನಿಸಂ ನಾಶಗೊಳಿಸುತ್ತಿದೆ. ಇಸ್ಲಾಂ ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಶ್ರದ್ಧೆಯಾದ ಹಿಂದುತ್ವವವನ್ನು ನಾಶಗೊಳಿಸುತ್ತಿದೆ. ಆದರೆ ಯಾವುದೇ ನೆಲೆಯಲ್ಲಿ ಈ ಎರಡು ಘಟನೆಗಳ ನಡುವಿನ ಹೋಲಿಕೆ ಭ್ರಮೆಯಿಂದ ಕೂಡಿದ್ದು ಮತ್ತು ಸಂಪೂರ್ಣವಾಗಿ ಬಹಿಷ್ಕರಿಸಬೇಕಾದಂತಹದ್ದು.

ಭಾರತದ ಆಂಗ್ಲ ಪತ್ರಿಕೆಗಳಲ್ಲಿ ತಡವಾಗಿ ಚೈನಾ ನಡೆಸುತ್ತಿರುವ ಅಮಾನುಷ ಮಾರಣಹೋಮದ ಬಗೆಗೆ ಮತ್ತು ಟಿಬೇಟ್‌ನಲ್ಲಿನ ಭಯೋತ್ಪಾದನೆಯ ಸಾಮ್ರಾಜ್ಯದ ಬಗೆಗೆ ಸಂಪಾದಕೀಯಗಳು ಮತ್ತು ಲೇಖನಗಳು ಮೂಡಿಬಂದವು. ಆದರೆ ಕೆಲವು ಪತ್ರಿಕೆಗಳು ದಮನಗೊಂಡ ಟಿಬೇಟಿಯನ್ನರ ವಿರುದ್ಧದ ದೇಶವ್ಯಾಪಿ ಭಯೋತ್ಪಾದನೆಯ ಆಚರಣೆಯನ್ನು ಬೆಂಬಲಿಸಿದವು.

ಮಾಧ್ಯಮಗಳು ಭಾರತದ ಸ್ವಘೋಷಿತ ಬುದ್ಧಿಮತ್ತೆಯ ಸೋಲನ್ನು ಪ್ರತಿಬಿಂಬಿಸುತ್ತಿವೆ. ಅವರ ವರದಿಗಳು ಎಷ್ಟು ವಿರೂಪವಾಗಿವೆಯೆಂದರೆ ಭಾರತದ ಸಮಾಜದಲ್ಲಿ ಹುಚ್ಚರಂತೆ, ಹೊರಗಿನವರಂತೆ ಗುರುತಿಸ್ಪಡುವ ವಾಮಪಂಥೀಯರನ್ನು ಅವರು ಮಧ್ಯಸ್ಥರು ಎಂದು ಗುರುತಿಸ್ಪಟ್ಟಿದ್ದಾರೆ. ದೌರ್ಭಾಗ್ಯವೆಂದರೆ ನಿಜವಾದ ಮಧ್ಯಸ್ಥರನ್ನು ಹುಚ್ಚರಂತೆ ನಡೆಸಿಕೊಳ್ಳಲಾಗುತ್ತಿದೆ ಮತ್ತು ಬಲಪಂಥೀಯ, ಫ್ಯಾಸಿಸ್ಟ್, ನಾಜಿ ಎಂದು ಗುರುತಿಸಲ್ಪಡುತ್ತಿದ್ದಾರೆ.

ಆದ್ದರಿಂದ ಈ ಮಾಧ್ಯಮಗಳ ವರದಿಯನ್ನು ನಾವು ಲಘುವಾಗಿ ತೆಗೆದುಕೊಳ್ಳಬಹುದು. ಇವರಲ್ಲಿ ಹೆಚ್ಚಿನವರು ಚೈನಾವನ್ನು ಬೆಂಬಲಿಸುತ್ತಾರೆ. ಅದಕ್ಕೆ ಕಾರಣ ಚೈನಾದ ಬಗೆಗಿನ ಅತ್ಯಂತ ಹೆಚ್ಚಾದ ಸಂಭ್ರಮ ಮತ್ತು ದೃಢವಾದ ನಿಷ್ಠೆ. ಇದು ಉಂಟಾದುದು ಚೈನಾದೇಶದೊಳಗಿನ ಒಳ್ಳೆಯ ಜಾಗಗಳ ದರ್ಶನದಿಂದ ಮತ್ತು ಹೆಚ್ಚಾದ ಹಣದಿಂದ.

ಆದರೆ ಅವರು ತಮ್ಮ ತಾರ್ಕಿಕ ಅಪಸಿದ್ಧಾಂತದಿಂದ ಜನರನ್ನು ಹೀಗೆ ಹೆದರಿಸುತ್ತಾರೆ : ಯಾರೋ ಕೆಲವರು ಮಾಡುವ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಪ್ರತಿಕ್ರಯಿಸಲು ಭಾರತಕ್ಕೆ ಯಾವುದೇ ಹಕ್ಕಿಲ್ಲ. ಇದು ತಪ್ಪು. ವಾಸ್ತವವೆಂದರೆ ಚೈನಾದ ಬಗ್ಗೆ ಭಾರತ ಸರ್ಕಾರವು ಮಾಡುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಪ್ರತಿಭಟಿಸುವ ಅಥವಾ ಟೀಕಿಸುವ ಯಾವುದೇ ಭಾರತೀಯನನ್ನು ತಡೆಯಲು ಸಾಧ್ಯವಿಲ್ಲ. ದುಷ್ಟರನ್ನು ನಿಗ್ರಹಿಸಬೇಕಾಗಿದೆ.

ಇಲ್ಲಿ ಕೆಲವು ಯೋಗ್ಯ ಉಕ್ತಿಗಳಿವೆ : ದುಷ್ಟ ಶಕ್ತಿಗಳ ವಿಜೃಂಭಣೆಗೆ ಸಜ್ಜನರ ನಿಷ್ಕ್ರಿಯತೆಯೇ ಕಾರಣ ಎಂದು ಬ್ರಿಟಿಷರಾದ ಎಡ್‌ಮಂಡ್ ಬರ್ಕ್‌ರವರು ಹೇಳಿದ್ದಾರೆ.

ಜರ್ಮನ್ನರಾದ ಮಾರ್ಟಿನ್ ನೀಮೆಲ್ಲರ್‌ರವರು ನಾಜಿಗಳ ಬಗೆಗೆ ಪ್ರತಿಕ್ರಯಿಸುತ್ತಾ ಹೀಗೆ ಹೇಳಿದ್ದಾರೆ - ಅವರು ಕಮ್ಯುನಿಷ್ಟರಿಗಾಗಿ ಬಂದರು. ಆದರೆ ನಾನು ಕಮ್ಯುನಿಷ್ಟನಲ್ಲವಾದ್ದರಿಂದ ಮಾತನಾಡಲಿಲ್ಲ. ಅನಂತರ ಅವರು ಸಮಾಜವಾದಿಗಳಿಗಾಗಿ ಮತ್ತು ವಾಣಿಜ್ಯಸಂಘಗಳ ಮಾಲೀಕರಿಗಾಗಿ ಬಂದರು. ನಾನು ಎರಡೂ ಅಲ್ಲವಾದ್ದರಿಂದ ಮಾತನಾಡದೇ ಉಳಿದೆ. ಆಮೇಲೆ ಯಹೂದ್ಯರಿಗಾಗಿ ಅವರು ಬಂದರು. ನಾನು ಯಹೂದ್ಯನಲ್ಲವಾದ್ದರಿಂದ ದೂರವುಳಿದೆ. ಆದರೆ ಅವರು ನನಗಾಗಿ ಬಂದಾಗ ನನ್ನ ಪರವಾಗಿ ಮಾತನಾಡುವವರು ಯಾರೂ ಉಳಿದಿರಲಿಲ್ಲ.

ಆದುದರಿಂದ ನಿಂದ್ಯವಾದ ಮಾನವಹಕ್ಕುಗಳ ಉಲ್ಲಂಘನೆಯ ವಿರುದ್ಧ ಮಾತನಾಡುವುದು ಯಾರ ದೃಷ್ಟಿಯಲ್ಲಾದರೂ ಸರಿಯಾದ ಕ್ರಮವೇ. ವಾಗಾಡಂಬರದಿಂದ ಜನರನ್ನು ಸುಮ್ಮನಾಗಿಸಲು ಪ್ರಯತ್ನಪಡುವವರು ಬೇರೆಯವರನ್ನು ಮೂರ್ಖರನ್ನಾಗಿಸಲು ಪ್ರಯತ್ನಪಡುತ್ತಾರೆ ಮತ್ತು ನಿಂದಿಸುತ್ತಾರೆ. ಅವರನ್ನು ನಾವು ಕಡೆಗಣಿಸಬೇಕು ಮತ್ತು ಅವರನ್ನು ನೋಡಿ ನಾವು ನಗಬೇಕು.

ಆದರೆ ನಾನು ಕಂಡುಕೊಂಡ ಇನ್ನೂ ಘೋರ ಅಂಶವೆಂದರೆ ಇದರಲ್ಲಿ ಭಾಗಿಯಾಗಿರುವವರು ಜಿನ್‌ಹುವಾದ ಯಥಾವತ್‌ಪ್ರಚಾರದಲ್ಲಿ ಅಗ್ರಗಣ್ಯವಾಗಿರುವ ಭಾರತದ ಪ್ರಮುಖ ದಿನಪತ್ರಿಕೆಯ ಸಂಪಾದಕರು ಮತ್ತು ಒಬ್ಬ ನಿವೃತ್ತ ಅಧಿಕಾರಿ. ಈ ಮಾನ್ಯರು ಮಾಡಿದ ಪ್ರತಿಜ್ಞೆಯೆಂದರೆ ಭಾರತವು ಟಿಬೇಟ್‌ನ ಬಗ್ಗೆ ಏನೂ ಹೇಳಬಾರದು. ಏಕೆಂದರೆ, ಟಿಬೇಟ್ ಜಮ್ಮ-ಕಾಶ್ಮೀರದಂತಿದೆ ಎಂಬುದು ಅವರ ವಾದ. ಇದನ್ನು ನಾವು ಗಮನಿಸಬೇಕು. ಅವರು ಹೇಳುವುದು ವಾಸ್ತವವವಾಗಿ ಸರಿಯಾಗಲು ಸಾಕು, ಆದರೆ ಸಂಪೂರ್ಣ ಸುಳ್ಳು ಕಾರಣಗಳಿಂದ.

ಅವರ ತುಲನೆ ಹೀಗಿದೆ :

ಟಿಬೇಟಿನಲ್ಲಿ ಹ್ಯಾನ್ ಚೈನೀಸರೆಂಬ ಹೊರಗಿನವರ ಗುಂಪು ಅಲ್ಲಿನ ಸ್ಥಾನೀಯ ಟಿಬೇಟಿಯನ್ನರನ್ನು ಆಕ್ರಮಿಸಿ ದಮನಗೊಳಿಸುತ್ತಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಹೊರಗಿನ ಮುಸ್ಲಿಮರು ಸ್ಥಾನೀಯ ಹಿಂದೂಗಳನ್ನು ಆಕ್ರಮಿಸಿ ದಮನಗೊಳಿಸುತ್ತಿದ್ದಾರೆ.

ಟಿಬೇಟಿನಲ್ಲಿ ಹ್ಯಾನ್ ಚೈನೀಸರು ಟಿಬೇಟಿಯನ್ನರನ್ನು ಕೊಂದು ಸಾಂಪ್ರದಾಯಿಕತೆಯನ್ನು ನಾಶಗೊಳಿಸುತ್ತಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಮುಸ್ಲಿಮರು ಹಿಂದೂಗಳನ್ನು ಕೊಂದು ಸಾಂಪ್ರದಾಯಿಕತೆಯನ್ನು ನಾಶಗೊಳಿಸುತ್ತಿದ್ದಾರೆ.

ಟಿಬೇಟಿನಲ್ಲಿ ಹ್ಯಾನ್ ಚೈನೀಸರು ನಾಗರಿಕತೆಯ ಮಾರಣಹೋಮವನ್ನು ನಡೆಸುತ್ತಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಮುಸ್ಲಿಮರು ನಾಗರಿಕತೆಯ ಮಾರಣಹೋಮವನ್ನು ನಡೆಸುತ್ತಿದ್ದಾರೆ.

ಟಿಬೇಟ್‌ನಲ್ಲಿ ಭಾರತೀಯ ಶ್ರದ್ಧೆಯಾದ ಅಲ್ಲಿನ ಬೌದ್ಧಧರ್ಮವನ್ನು ಕಮ್ಯುನಿಸಂ ನಾಶಗೊಳಿಸುತ್ತಿದೆ. ಜಮ್ಮು- ಕಾಶ್ಮೀರದಲ್ಲಿ ಭಾರತೀಯ ಶ್ರದ್ಧೆಯಾದ ಹಿಂದುತ್ವವವನ್ನು ಇಸ್ಲಾಂ ನಾಶಗೊಳಿಸುತ್ತಿದೆ.

ಆದ್ದರಿಂದ, ಭಾರತೀಯ ಶ್ರದ್ಧೆಗಳ ನಾಶ ಪರಮತ ಅಸಹಿಷ್ಣು ಮತಗಳ ಕರ್ತವ್ಯವೆಂದು ಎಲ್ಲರೂ ತಿಳಿದು ಮೌನವಾಗಿದ್ದಾರೆ.

ಈ ಸಮಾನವಾದ ಅಂಶಗಳಿಂದ ಟಿಬೇಟ್ ಮತ್ತು ಜಮ್ಮು-ಕಾಶ್ಮೀರಗಳ ಮಧ್ಯೆ ಅದ್ಭುತವಾದ ಸಾಮ್ಯವಿದೆ.

ಈ ಮಾಧ್ಯಮ ತಜ್ಞರ ಕಿರುಚಾಟ ನಿಜವಾದುದೇ. ಕಾಂಗ್ರೆಸ್ ಸರ್ಕಾರವು ಜಮ್ಮು-ಕಾಶ್ಮೀರದ ಹಿಂದೂಗಳ ಸಾಂಪ್ರದಾಯಿಕ ಮಾರಣಹೋಮವನ್ನು ನಿಂತು ನೋಡಿದರೆ, ಈಗಿನ ಯು.ಪಿ.ಎ. ಸರ್ಕಾರವೂ ಟಿಬೇಟ್‌ನಲ್ಲಿ ನಡೆಯುತ್ತಿರುವ ಸಾಂಪ್ರದಾಯಿಕ ಮಾರಣಹೋಮವನ್ನು ನಿಂತು ನೋಡಲಿದೆ. ಆದ್ದರಿಂದ, ಈ ಐದೂ ಅಂಶಗಳಿಂದ ಆದ ಸಾದೃಶ್ಯವು ಅದ್ಭುತವಾದುದು.

ಆದರೆ, ಒಂದು ವ್ಯತ್ಯಾಸವಿದೆ. ಮುಸ್ಲಿಂ ಆಕ್ರಮಣಕಾರನಾದ ಭಕ್ತಿಯಾರ್ ಖಿಲ್ಜಿ ಕ್ರಿ. ಶ. ೧೧೯೨ರಲ್ಲಿ ನಳಂದಾ ವಿಶ್ವವಿದ್ಯಾಲಯವನ್ನು ಸುಟ್ಟನು. ಮತ್ತು ತಾನು ಕಂಡ ಪ್ರತಿಯೊಬ್ಬ ಬೌದ್ಧ ಸನ್ಯಾಸಿಯನ್ನೂ ಕೊಂದನು. ಆದರೆ ಅಲ್ಲಿಂದ ಹೇಗೋ ತಪ್ಪಿಸಿಕೊಂಡ ಕೆಲವು ಬೌದ್ಧ ಸನ್ಯಾಸಿಗಳಿಂದ ಸ್ಥಾಪತವಾದದ್ದೇ ಟಿಬೇಟ್‌ನ ಬೌದ್ಧಧರ್ಮ. ಅವನು ಮಾಡಿದ್ದು ಜ್ಞಾನಭಂಡಾರದ ನಾಶವಾದ್ದರಿಂದ ಅದು ಮಾನವತೆಯ ವಿರುದ್ಧದ ಅತ್ಯಂತ ಹೇಯ ಕೃತ್ಯ. ಹಿಂದುತ್ವ, ವಿಶೇಷವಾಗಿ ಕಾಶ್ಮೀರದ ಶೈವಧರ್ಮ ಅನಾದಿಕಾಲದಿಂದಲೂ ಆ ಪ್ರದೇಶದ ನಿಷ್ಠೆಯಾಗಿತ್ತು.

ವಿಡಂಬನೆಯೆಂದರೆ, ಭಕ್ತಿಯಾರ್ ಖಿಲ್ಜಿ ಶುರುಮಾಡಿದ ಕೆಲಸವನ್ನು ಹ್ಯಾನ್ ಚೈನೀಸರು ಪೂರ್ತಿಮಾಡುತ್ತಿದ್ದಾರೆ. ಹಾಗೆಯೇ, ಕಮ್ಯುನಿಷ್ಟ್ ಚೈನಾ ಮತ್ತು ಪಾಕಿಸ್ಥಾನದ ನಡುವಿನ ಸಂಬಂಧವು ಎ.ಕ್ಯು.ಖಾನ್‌ರವರ ಪರಮಾಣು ವ್ಯಾಪಾರದಿಂದ ಮತ್ತೊಮ್ಮೆ ಸಾಬೀತಾಯಿತು. ಮುಸ್ಲಿಮರೆಡೆಗಿನ ಕಮ್ಯುನಿಷ್ಟರ ಸೆಳೆತ ತಡೆಯಲಸಾಧ್ಯವಾಗಿದೆ. ಆದರೆ ಅದೇ ಕಮ್ಯುನಿಷ್ಟರೆಡೆಗೆ ಮುಸ್ಲಿಮರ ಸೆಳೆತವಿದೆ ಎಂದು ಹೇಳಲಾಗದು. ಏಕೆಂದರೆ, ಸಮಯಸಾಧಕರಾದ ಅವರು ತಮ್ಮ ಕೆಲಸ ಆಗುವವರೆಗೆ ಚೀನೀಯರನ್ನು ಬೆಂಬಲಿಸುತ್ತಾರೆ. ಆದರೆ ತಮ್ಮ ಕೆಲಸವಾದ ಮೇಲೆ ಅವರು ದೈವವಿರೋಧಿಗಳಾದ ಕಮ್ಯುನಿಷ್ಟರನ್ನು ನಾಶಗೊಳಿಸುತ್ತಾರೆ. ಚೈನಾದಲ್ಲಿ ನಡೆಯುತ್ತಿರುವ ಉಘಿರ್‌ಗಳ ರಾಷ್ಟ್ರೀಯತೆಯ ದಮನದ ಬಗೆಗೆ ಚೈನಾ ಮತ್ತು ಪಾಕಿಸ್ಥಾನಗಳ ಮಧ್ಯೆ ರಹಸ್ಯವಾದ ಒಪ್ಪಂದವಿದೆ.

ಆದರೆ, ಚೈನಾದಲ್ಲಿ ನಡೆಯುತ್ತಿರುವ ಮುಸ್ಲಿಂ ಉಘಿರ್‌ಗಳ ವಿಷಯ ಬಂದಾಗ, ಪಾಕಿಸ್ಥಾನವು ತಾನು ಇಸ್ಲಾಮಿಕ್ ಬಾಂಬ್ನ ಜನಕನೆಂಬ ವಿಷಯವನ್ನು ಅದು ಹೇಗೋ ಮರೆತುಬಿಟ್ಟಿರುವುದು ಆಶ್ಚರ್ಯವನ್ನುಂಟುಮಾಡುತ್ತದೆ. ಅದಕ್ಕೆ ಕಾರಣ ಹೀಗಿರಬಹುದು - ಚೈನಾ ಮಾಡಿದ ಸಹಾಯದಿಂದಲೇ ಪಾಕಿಸ್ಥಾನವು ಅಣುಬಾಂಬ್ ತಯಾರಿಸಲು ಸಾಧ್ಯವಾದದ್ದು.

ಈಗಿನ ಒಲಿಂಪಿಕ್ಸ್‌ನಲ್ಲಿ ಭಯೋತ್ಪಾದಕ ಕೃತ್ಯಗಳನ್ನು ಎಸಗವ ಬಗ್ಗೆ ಚಿಂತನೆ ನಡೆಸುತ್ತಿರುವ ಉಘಿರ್‌ಗಳನ್ನು ಚೈನಾ ದಮನಮಾಡಲು ಶುರುಮಾಡಿದ ಮೇಲೆ ನನ್ನ ಪ್ರಿಯ ಮಾಧ್ಯಮತಜ್ಞರ ಇಬ್ಬಂದಿತನವನ್ನು ಎದುರುನೋಡುತ್ತಿದ್ದೇನೆ. ಮಾಧ್ಯಮದವರು ಯಾರ ಮಾತನ್ನು ಕೇಳಿಯಾರು ? - ಹ್ಯಾನ್ ಚೈನೀಯರು, ಉಘಿರ್‌ಗಳು, ಕಮ್ಯುನಿಷ್ಟರು ಅಥವಾ ಮುಸ್ಲಿಮರು ? ನಿಸ್ಸಂಶಯವಾಗಿ ಅವರು ತಮಗೆ ಹಣ ನೀಡುವವರನ್ನೇ ಬೆಂಬಲಿಸುತ್ತಾರೆ.

ಟಿಬೇಟ್ ಮತ್ತು ಕಾಶ್ಮೀರ - ಇವೆರಡೂ ಸಮಸ್ಯೆಗಳ ಪರಿಹಾರಕ್ಕೆ ಒಂದೇ ದಾರಿ : ಸಾಂಪ್ರದಾಯಿಕ ನಾಶ ಮತ್ತು ಸಾಮೂಹಿಕ ಮಾರಣಹೋಮದಿಂದ ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ಪ್ರಜಾಪೀಡಕರಿಗೆ ಚೆನ್ನಾಗಿ ಮನದಟ್ಟು ಮಾಡಬೇಕು. ಆದ್ದರಿಂದ, ಭಾರತವು ಎಂದಿಗೂ ಜಮ್ಮು-ಕಾಶ್ಮೀರವನ್ನು ಬಿಟ್ಟುಕೊಡುವುದಿಲ್ಲ ಎಂಬುದನ್ನು ಮುಸ್ಲಿಮರಿಗೆ ತಿಳಿಹೇಳಬೇಕು. ಹಾಗೆಯೇ, ಟಿಬೇಟ್‌ನ ಚೈತನ್ಯವು ಎಂದೂ ನಾಶವಾಗದೆಂದು ಹ್ಯಾನ್ ಚೈನೀಸರಿಗೆ ಮನದಟ್ಟು ಮಾಡಬೇಕು.

ಈಗ ಚೈನಾದವರು ಅಜೇಯರಂತೆ ಕಾಣುತ್ತಿದ್ದಾರೆ. ಅವರು ೨೦೦೮ರ ಒಲಿಂಪಿಕ್ಸನ್ನು ತಮ್ಮ ಲಾಭಕ್ಕಾಗಿ ಬಳಸುತ್ತಿದ್ದಾರೆ. ಜಪಾನ್ ಮತ್ತು ಕೋರಿಯಾಗಳೂ ಹಿಂದೆ ಹೀಗೇ ಮಾಡಿದ್ದವು. ಆದರೆ, ಒಂದು ವ್ಯತ್ಯಾಸವಿದೆ. ಆಗಿನ ಕಾಲಕ್ಕೆ ಅವು ದಮನಕಾರಿ ರಾಜ್ಯಗಳಾಗಿರಲಿಲ್ಲ, ಈಗ ಭಾರತವಿರುವಂತೆ. ಈ ಸಮಸ್ಯೆಯನ್ನು ಪರಿಹರಿಸಲು ಪ್ರಜಾಪ್ರಭುತ್ವಕ್ಕೆ ತನ್ನದೇ ಆದ ದಾರಿಯಿದೆ, ಸಾಮ್ರಾಜ್ಯವಾದಕ್ಕಿಲ್ಲ. ಇಂದು ಹ್ಯಾನ್ ಸಾಮ್ರಾಜ್ಯವು ತನ್ನ ಶಿಖರದ ಉತ್ತುಂಗದಲ್ಲಿರಬಹುದು. ಆದರೆ, ಇನ್ನು ಮುಂದೆ ಅದರೆ ವಿನಾಶ ಶುರುವಾಗಲಿದೆ.

ನಾವು ನೆನಪಿಡಬೇಕಾದ ಅಂಶವೆಂದರೆ ಅಮ್ಡೋ ಮತ್ತು ಖಾಮ್ ಪ್ರದೇಶಗಳನ್ನು ಹೊಂದಿರುವ ಐತಿಹಾಸಿಕ ಸ್ವತಂತ್ರ ದೇಶವಾದ ಟಿಬೇಟ್‌ನ ಮೂರನೆಯ ಒಂದು ಭಾಗದ ಭೂಮಿಯು ಹ್ಯಾನ್ ಚೈನೀಸರ ಹಿಡಿತದಲ್ಲಿದೆ. ವಾಸ್ತವವಾಗಿ ೬೦ ಶೇಕಡಾ ಭೂಮಿಯು ಸಾಂಪ್ರದಾಯಿಕ ಅಲ್ಪಸಂಖ್ಯಾತರಿಗೆ ಸೇರಿದೆ. ಸೋವಿಯತ್ ಒಕ್ಕೂಟದ ಅಧಿಕಾರ ಕೊನೆಗೊಂಡಂತೆ ಹ್ಯಾನ್ ಚೈನೀಸರ ಅಧಿಕಾರವು ನಾಶವಾಗಬಹುದು.

ಇದರ ಬಗೆಗೆ ಕೆಲವು ಐತಿಹಾಸಿಕ ಸಾಮ್ಯಗಳಿವೆ. ೧೯೩೬ರಲ್ಲಿ ನಾಜಿರಾಷ್ಟ್ರ ತನ್ನ ಉತ್ತುಂಗ ಶಿಖರದಲ್ಲಿದ್ದಾಗ ಬರ್ಲಿನ್‌ನಲ್ಲಿ ಒಲಿಂಪಿಕ್ಸ್ ನಡೆಯಿತು. ಆದರೆ ಹತ್ತು ವರ್ಷ ಕಳೆಯುವಷ್ಟರಲ್ಲಿ ನಾಜಿಗಳು ಹೇಳಹೆಸರಿಲ್ಲದಂತಾಗಿದ್ದರು. ೧೯೮೪ರಲ್ಲಿ ಒಲಿಂಪಿಕ್ಸ್ ಮಾಸ್ಕೋದಲ್ಲಿ ನಡೆದಾಗ ಸೋವಿಯತ್ ಒಕ್ಕೂಟವು ನಾಶವಾಗದ ಸಾಮ್ರಾಜ್ಯವಾಗಿ ತಲೆಯೆತ್ತಿ ನಿಂತಿತ್ತು. ಏಳೇ ವರ್ಷಗಳಲ್ಲಿ ಆ ಸಾಮ್ರಾಜ್ಯ ಇಲ್ಲವಾಯಿತು. ೨೦೦೮ರಲ್ಲಿ ಮಂಚೂರಿಗಳು, ಮಂಗೋಲಿಯನ್ನರು, ಉಘಿರ್‌ಗಳು ಮತ್ತು ಟಿಬೆಟಿಯನ್ನರನ್ನು ನಿಗ್ರಹಿಸುತ್ತಿರುವ ಹ್ಯಾನ್ ಚೈನೀಸರು ಜಗತ್ತಿನ ಒಡೆಯರಂತೆ ಕಾಣುತ್ತಿದ್ದಾರೆ. ಮುಂದಿನ ಹತ್ತು ವರ್ಷಗಳಲ್ಲಿ ಇವರ ಸ್ಥಿತಿ ಏನಾದೀತೆಂದು ನೋಡಬೇಕಾಗಿದೆ.

ಆದರೆ ಇನ್ನೊಂದು ವಿಷಯದಲ್ಲಿ ಟಿಬೇಟ್ ಮತ್ತು ಜಮ್ಮು - ಕಾಶ್ಮೀರದ ಮಧ್ಯೆ ವ್ಯತ್ಯಾಸವಿದೆ : ಟಿಬೇಟ್‌ನ ಗಲಾಟೆಯಿಂದ ಹ್ಯಾನ್ ಚೈನೀಸರ ಸಾಮ್ರಾಜ್ಯ ಪತನವಾಗಬಹುದು. ಆದರೆ, ಜಮ್ಮು-ಕಾಶ್ಮೀರದ ಗಲಾಟೆಯು ಭಾರತದ ಆತ್ಮಸ್ಥೈರ್ಯವನ್ನು ಯಾವುದೇ ರೀತಿ ಹಾನಿ ಮಾಡಲಾರದು.

(ಆಂಗ್ಲ ಮೂಲ - ರಾಜೀವ್ ಶ್ರೀನಿವಾಸನ್)