Swaagatam

स्वागतम्

Saturday, March 14, 2009

ನಾನೇ ಭಾರತ !

ಭಾರತವು ಸೂಪರ್ ಪವರ್ ಆಗುವುದೆಂಬ ಕಲರವ ಎಲ್ಲೆಡೆ ಕೇಳಿಬರುತ್ತಿದೆ. ಆದರೆ ಸೂಪರ್ ಪವರ್‌ಗಳು ರಾಷ್ಟ್ರೀಯತೆಯ ಬಗೆಗೆ ಭ್ರಮೆಯನ್ನು ಹೊಂದಿವೆಯೇ ? ಅಥವಾ ತಮ್ಮ ಹಿಂದುಳಿದ ನಾಗರೀಕತೆಯನ್ನು ಬದಲಾಯಿಸಲು ಬೇರೆಯವರಿಗೆ ಆಹ್ವಾನ ನೀಡುವುದು ಎಂದರ್ಥವೇ ? ಸೂಪರ್ ಪವರ್ ಆದ ಯಾವುದಾದರೂ ದೇಶವು ಯಾವತ್ತಾದರೂ ತನ್ನ ಪ್ರಜೆಗಳನ್ನು ವಿದೇಶೀ ಒಪ್ಪಂದದ ಏಜೆಂಟರಾಗಿ ಬಳಸಿಕೊಳ್ಳಲು ಅನವು ಮಾಡಿಕೊಡುತ್ತದೆಯೇ ? ಇಲ್ಲ. ಆದರೆ, ಭಾರತವು ಉದಾರವಾಗಿ ವಿದೇಶೀ ಒಪ್ಪಂದಗಳನ್ನು ಒಪ್ಪಿಕೊಳ್ಳುತ್ತಿದೆ. ಇದರಿಂದ ಭಾರತವವನ್ನು ಅವರು ವಿಭಕ್ತವಾಗೇ ಕಾಣುತ್ತಾರೆ. ಆದರೆ ಸೂಪರ್ ಪವರ್‌ಗಳು ಅಂದರೆ ತಪ್ಪು ತಿಳುವಳಿಕೆ ಎಂದರ್ಥವೇ ?
ಮುಂಬಯಿಯ ಮಾರಣಹೋಮವು ನಮ್ಮ ರಾಷ್ಟ್ರೀಯ ಚಾರಿತ್ರ್ಯದ ಒಡಕುಗಳನ್ನು ನೋವಿನಿಂದಲೇ ಜಾಹೀರುಗೊಳಿಸುತ್ತದೆ. ಕೇಂದ್ರವು ಅಸ್ಥಿರ ಮತ್ತು ಉದ್ದೇಶರಹಿತ ಅಸ್ತಿತ್ತ್ವದಿಂದ ಕೂಡಿದೆ. ಇಲ್ಲಿ ಪಾರಸ್ಪರಿಕ ಮತ್ತು ಅಂತಾರಾಷ್ಟ್ರಿಯ ಹಿತಾಸಕ್ತಿಗಳನ್ನು ಹೊಂದಿರುವ ಈ ನಾವು ಎಂದರೆ ಯಾರು ? ಈ ಭಾರತೀಯತೆಯನ್ನು ಹೇಗೆ ವ್ಯಾಖ್ಯಾನಿಸಬೇಕು ? ಭಾರತೀಯತೆಯೆಂದರೆ ಸಂಕುಚಿತ ಅಸ್ತಿತ್ವ ಹಾಗೂ ಆಂತರಿಕ ಹಿತಾಸಕ್ತಿ ಮಾತ್ರವೇ ? ಅಥವಾ ಅದು ತ್ಯಾಗಕ್ಕೆ ಮಾತ್ರ ಸೀಮಿತವೇ ? ಅದು ಬಾಲಿವುಡ್‌ನ ಪ್ರಸಿದ್ಧ ಸಂಸ್ಕೃತಿಯಲ್ಲದೆಯೇ ? ಅಥವಾ ಕ್ರಿಕೆಟ್‌ನಲ್ಲಿದೆಯೇ ? ಅಥವಾ ಅದು ಇನ್ನೂ ಆಳವಾಗಿದೆಯೇ ? ಈ ರಾಷ್ಟ್ರೀಯ ಅಸ್ತಿತ್ವದ ಯೋಜನೆಯು ಈಗಿನ ಅತ್ಯಂತ ಆವಶ್ಯಕತೆಯಾಗಿದೆ ಮತ್ತು ಅದನ್ನು ನಾವು ಒತ್ತಾಯವಾಗಿ ಸ್ಥಾಪಿಸಬೇಕಿದೆ.

ರಾಷ್ಟ್ರೀಯ ಅಸ್ತಿತ್ವದ ಆವಶ್ಯಕತೆ :

ವೈಯಕ್ತಿಕ ಗುರಿಯನ್ನು ಬೆನ್ನಟ್ಟುವಲ್ಲಿ ಭಾರತೀಯರು ತೀವ್ರ ಸ್ಫರ್ಧಾಶೀಲರು. ಆದರೆ, ನಾವು ಪಾಲುದಾರರಾಗಿಗುವ ರಾಷ್ಟ್ರೀಯ ಸತ್ವದ ವಿಷಯದಲ್ಲಿ ಮಾತ್ರ ನಮಗೆ ಐಕಮತ್ಯವಿಲ್ಲ. ಆದ್ದರಿಂದಲೇ, ಪ್ರಜೆ ಮತ್ತು ರಾಷ್ಟ್ರದ ಮಧ್ಯೆ ಆಳವಾದ ಮಾನಸಿಕ ಬಾಂಧವ್ಯವಿಲ್ಲ. ಶರೀರಕ್ಕೆ ರೋಗ ನಿರೋಧಕ ಶಕ್ತಿ ಇರುವಂತೆ ರಾಷ್ಟ್ರದ ಹಿತ ಕಾಪಾಡಲು ರಾಷ್ಟ್ರೀಯ ಅಸ್ತಿತ್ವದ ಆವಶ್ಯಕತೆ ಇರುತ್ತದೆ. ಶರೀರದ ಮೇಲೆ ಒತ್ತಡ ಹೆಚ್ಚಾದಾಗ, ಅದು ಆಂತರಿಕ ಮತ್ತು ಬಾಹ್ಯ ಆಕ್ರಮಣಗಳಿಗೆ ಈಡಾಗಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತಾ ಸಾವಿಗೆ ಈಡಾಗುತ್ತದೆ. ಹಾಗೆಯೇ, ಒಂದು ರಾಷ್ಟ್ರವು - ಅಸ್ತಿತ್ವದ ಅಭಾವ, ಅಸ್ತಿತ್ವಗಳ ಪರಸ್ಪರ ಘರ್ಷಣೆ ಅಥವಾ ಇನ್ನಿಲ್ಲದ ಗೊಂದಲಗಳು ಉಂಟಾದಾಗ ಒತ್ತಡ ಹೆಚ್ಚಾಗಿ ಒಡೆಯಬಹುದು. ಶರೀರದ ರೋಗ ನಿರೋಧಕ ಶಕ್ತಿಗೆ ನವ ತಾರುಣ್ಯವನ್ನು ಹೇಗೆ ಮತ್ತೆ ಮತ್ತೆ ನೀಡಬೇಕೋ, ಹಾಗೆಯೇ ಒಂದು ರಾಷ್ಟ್ರದ ರಾಜಕೀಯ ಏಕತೆಗೆ ಸತ್ವಯುತ ಐಕ್ಯಶಾಲಿ ಆತ್ಮದ ಆವಶ್ಯಕತೆ ಇದೆ.
ಪ್ರಮುಖ ರಾಷ್ಟ್ರಗಳು ದೂರದೃಷ್ಟಿಯಿಂದ ರಾಷ್ಟವನ್ನು ಕಟ್ಟಲು - ಕಲ್ಪಿತ ಕಥೆ, ಇತಿಹಾಸ, ನಾಯಕರು, ಮತ, ಸಿದ್ಧಾಂತ, ಭಾಷೆ, ಮತ್ತು ಚಿಹ್ನೆ ಮುಂತಾದ ಸಾಧನಗಳನ್ನು ಬಳಸುತ್ತಾರೆ. ಆಂತರಿಕ ಮತಭೇದಗಳಿದ್ದರೂ ಅಮೆರಿಕನ್ನರಿಗೆ ಅವರ ಪೂರ್ವಜರು ಸಂಪಾದಿಸಿದ ಸ್ವತ್ತಿನ ಬಗೆಗೆ ಅಪಾರ ಅಭಿಮಾನವಿದೆ. ಮತ್ತು ಅವರು ತಮ್ಮ ಪೂರ್ವಜರ ಮತ್ತು ತ್ಯಾಗೀ ಸೈನಿಕರ ನೆನಪಿಗಾಗಿ ಅದ್ಭುತವಾದ ಸ್ಮಾರಕಗಳನ್ನು ಕಟ್ಟಿಸಿದ್ದಾರೆ. ೧೮೫೭ರ ಅಥವಾ ೧೯೫೧ರ ಯುದ್ಧಕ್ಕೆ ಗೌರವ ಸೂಚಿಸುವ ಅಥವಾ ಶಿವಾಜಿ, ವಿಜಯನಗರ ಸಾಮ್ರಾಜ್ಯ, ಅಶೋಕ ಮುಂತಾದವರನ್ನು ನೆನಪಿಸುವ ಹಾಗೂ ಭಾರತದ ನಾಗರೀಕತೆಯನ್ನು ಶಾಂತಿಪೂರ್ಣವಾಗಿ ಜಗತ್ತಿಗೆ ಪಸರಿಸಿದ ಬಗೆಗೆ ದೆಹಲಿಯಲ್ಲಿ ಉಲ್ಲೇಖವೆಲ್ಲಿದೆ ? ಜಗತ್ತಿನಲ್ಲಿ ಭಾರತದ ವಿಶಿಷ್ಟ ಸ್ಥಾನವನ್ನು ಸೂಚಿಸುವ ಮ್ಯೂಸಿಯಂಗಳೆಲ್ಲಿವೆ ?

ವಿಘಟಿತ ಶಕ್ತಿಗಳು :

ಭಾರತದ ಆಂತರಿಕ ರಾಜಕೀಯವನ್ನು ಮುರುಕು ಧ್ವನಿಗಳೇ ಆಳುತ್ತಿವೆ - ರಾಜ್ ಠಾಕ್ರೆಯಿಂದ ಹಿಡಿದು ಕರುಣಾನಿಧಿಯವೆರೆಗೆ. ಮಮತಾ ಬ್ಯಾನರ್ಜಿಯಿಂದ ಮೀಸಲಾತಿಯವೆರೆಗೆ. ಅಲ್ಲಿಂದ ವಿದೇಶೀ ಮತಾಂತರದ ಏಜೆಂಟರವರೆಗೆ.
ಸಾಮಾಜಿಕ ಅಸಮಾನತೆ - ಅದು ಭಾರತದಲ್ಲಾಗಲೀ ಅಥವಾ ವಿದೇಶದಲ್ಲೇ ಆಗಲೀ, ಅದಕ್ಕೆ ಪರಿಣಾಮಕಾರಿಯಾದ ಚಿಕಿತ್ಸೆ ನೀಡಬೇಕು. ರೋಗ ಯಾವುದೆಂದು ನಿರ್ಣಯಿಸದೇ ಸರಿಯಾದ ಚಿಕಿತ್ಸೆ ನೀಡಲಾಗದು. ಭಾರತಕ್ಕೆ ನಾಗರೀಕತೆ ಎಂಬುದೇ ಇರಲಿಲ್ಲವೆಂದು ವಸಾಹತುಶಾಹಿಯ ಕಾಲದಿಂದಲೂ ಅನೇಕ ಪ್ರಭಾವಿ ವಿದ್ವಾಂಸರು ಭಾಷಣ ಮಾಡುತ್ತಾ ಬಂದಿದ್ದಾರೆ. ಆಕ್ರಮಣಕಾರರಿಂದ ಭಾರತವು ನಾಗರೀಕವಾಯಿತು. ಭಾರತೀಯತೆಯ ಬಗೆಗಿನ ಹುಟುಕಾಟ ವ್ಯರ್ಥ. ಏಕೆಂದರೆ ಭಾರತವು ಒಂದು ರಾಷ್ಟ್ರವೇ ಆಗಿರಲಿಲ್ಲ. ರೋಮಿಲಾ ಥಾಪರ್‌ನಂತಹ ಪ್ರಸಿದ್ಧ ಇತಿಹಾಸಕಾರರು ಭಾರತದ ವಿವಿಧತೆ ಸತ್ವರಹಿತ ಎಂಬ ನಿರ್ಣಯ ನೀಡುತ್ತಾರೆ. ಉದ್ದಿನ ವಡೆಯಂತೆ ಮಧ್ಯೆ ಶೂನ್ಯ ಇದೆ. ಅದರ ಪರಿಧಿಯಲ್ಲಿ ಮಾತ್ರ ಅಸ್ತಿತ್ವವಿದೆ.
ಇಂತಹ ಚಿಂತನೆಗಳು ಭಾರತದ ಸಜ್ಜನರನ್ನು ಬಾಧಿಸುತ್ತವೆ. ಸುಪ್ರೀಮ್ ಕೋರ್ಟ್‌ನ ನ್ಯಾಯಾಧೀಶರಾದ ಮಾರ್ಕಂಡೇಯ ಕಟ್ಜೂರವರು ವಿದೇಶೀ ಇತಿಹಾಸಕಾರರನ್ನು ಉಲ್ಲೇಖಿಸುತ್ತಾ ಮುಂಡಾ ಎಂಬ ಪಂಗಡವೊಂದೇ ಮೂಲನಿವಾಸಿಗಳದು. ಉಳಿದ ೯೫% ಭಾರತೀಯರು ಬೇರೆಡೆಯಿಂದ ವಲಸೆ ಬಂದವರು ಎಂದು ಹೇಳುತ್ತಾರೆ. ಮತ್ತು ಆರ್ಯ ಮತ್ತು ದ್ರಾವಿಡ ಶಾಸ್ತ್ರೀಯ ಭಾಷೆಗಳೂ ವಿದೇಶಿ. ಪ್ರಾಚೀನ ಎಂದು ಹೇಳಿಕೊಳ್ಳುವ ಯಾವ ಅಂಶವೂ ಭಾರತೀಯತೆಯಲ್ಲಿಲ್ಲ. ಭಾರತದ ನಾಗರೀಕತೆಯ ಆರಂಭವಾಗುವುದೇ - ಜಗತ್ತು ಕಂಡ ಅತ್ಯಂತ ಶ್ರೇಷ್ಠ ರಾಜ ಅಕ್ಬರ್‌ನಿಂದ.
ಭಾರತವನ್ನು - ಒಳಗೆ ಜೊಳ್ಳಿನಿಂದ ಕೂಡಿರುವ, ದುಃಸಹವಾದ ರಾಷ್ಟ್ರ ಎಂದು ಬಿಂಬಿಸುತ್ತಿರುವವರ ಧ್ವನಿ ಏರುತ್ತಿದೆ ಇದನ್ನು ನಿರ್ದೇಶಿಸುತ್ತಿರುವವರು ಪಶ್ಚಿಮದ ವಿಶ್ವವಿದ್ಯಾಲಯಗಳು. ಉದ್ದೇಶ ಸ್ಪಷ್ಟ - ಮಾನವ ಹಕ್ಕುಗಳನ್ನು ಮಧ್ಯೆ ತರುವ ಮೂಲಕ ಹಸ್ತಕ್ಷೇಪ ನಡೆಸುವುದು. ಇದಕ್ಕೆ ಅನೇಕ ಖಾಸಗಿ ಸಂಸ್ಥೆಗಳು, ಚರ್ಚುಗಳು ಮತ್ತು ಅಮೆರಿಕದ ಸರ್ಕಾರ ಕೂಡ ಕುಮ್ಮಕ್ಕು ನೀಡುತ್ತಿದೆ. ಇದು ಮುರುಕುತನಕ್ಕೆ ಕಾರಣವಾಗುತ್ತದೆ. ಮತೀಯ ಅಸ್ತಿತ್ವಗಳಿಗೆ ಮತ್ತು "ಹಿಂದುಳಿದ"ಜಾತಿಗಳಿಗೆ ಹಾಗೂ ಮತೀಯ ಅಲ್ಪಸಂಖ್ಯಾತರಿಗೆ ಒತ್ತು ಕೊಡುವ ಮೂಲಕ ಇದು ಹೆಚ್ಚುತ್ತದೆ. ದುಃಖದ ಸಂಗತಿಯೆಂದರೆ ಅನೇಕ ಪ್ರತಿಭಟನಕಾರರು, ಪಶ್ಚಿಮೀಕರಣಗೊಂಡ ಉಚ್ಚವರ್ಗದವರು ಈ "ಹಿಂದುಳಿದವರ ತುಳಿತ"ಕ್ಕೆ ಬೆಂಬಲ ನೀಡುತ್ತಿದ್ದಾರೆ. ಭಾರತದ ಒಡಕಿನ ನಂತರದ ಮಾನವತೆಯ ಪರಿಣಾಮವು ವಿಬಜಿತ ಸಮುದಾಯಗಳಲ್ಲಿ (ವಿಶೇಷವಾಗಿ ದುರ್ಬಲ) ಅಂತ್ಯ ಕಂಡೀತು. ಆಗ ಅವುಗಳನ್ನು ನಾವು ಸಂತೋಷದಿಂದಲೇ ತಿರಸ್ಕರಿಸಿಯೇವು.

ಸಮತೆ ಮತ್ತು ಸಹಿಷ್ಣುತೆಗಳಿಂದಾಚೆಗೆ :

ಭಾರತದ ಅಸ್ತಿತ್ವವು ಫ್ಯಾಸಿಸಂ ಅನ್ನು ಬೆಂಬಲಿಸುತ್ತದೆ ಎಂಬುದಾಗಿ ವಿಮರ್ಶಕರಿಗೆ ಭಾರೀ ಚಿಂತೆಯಾಗಿದೆ. ಅನೇಕ ನಾಗರೀಕತೆಗಳು ಅಸ್ತಿತ್ವಗಳನ್ನು ವಿಜಯದ ಉದ್ದೇಶಕ್ಕಾಗಿ ಬಳಸಿವೆ. ನನ್ನ ಚಿಂತನೆಯ ಭಾರತೀಯತೆಯೆಂದರೆ ಪರಸ್ಪರ ಗೌರವ ಸೂಚಿಸುವುದು. ನಾವು ಬೇರೆಯವರನ್ನು ಗೌರ"ಸುತ್ತೇವೆ. ಆದರೆ, ಇದು ಸಾಧ್ಯವಾಗುವುದು ಬೇರೆಯವರು ತಮ್ಮ ಮಾತು ಮತ್ತು ಕೃತಿಯಲ್ಲಿ ಗೌರವ ಸೂಚಿಸಿದಾಗ ಮಾತ್ರ. ಯಹೂದ್ಯ, ಇಸ್ಲಾಂ, ಕ್ರಿಶ್ಚಿಯನ್ ಮುಂತಾದ "ಪರಸಹಿಷ್ಣು" ಮತಗಳಿಗೆ ಅನುಗ್ರಾಹಕ ಮನಸ್ಥಿತಿದೆ. ಅವರು ಇನ್ನೊಬ್ಬರ ಮಾತು ಅಥವಾ ಕೃತಿಯನ್ನು ಗೌರವಿಸದೇ ತಮ್ಮ ಮತವೇ ಶ್ರೇಷ್ಠ ಎಂಬ ಭಾವನೆ ಹೊಂದಿದ್ದಾರೆ. ಇದೇ ವೇಳೆಗೆ, ಭಾರತದ ನಾಗರೀಕತೆಯು ವಿಸಂಗತಿಗಳನ್ನೂ ಅಪ್ಪಿಕೊಳ್ಳುತ್ತದೆ.
ಅಸಮಾನತೆಯನ್ನು ನಿವಾರಿಸಬೇಕೆನ್ನುವವರ ಆಂದೋಲನಗಳು ಎಲ್ಲ ಮತಗಳನ್ನೂ ವ್ಯಾಪಿಸಿವೆ. ಕೆಲವು ಮತಗಳು ಮತಾಂತರ ಮಾಡಲು ದೇವರಿಂದ ಅಧಿಕಾರ ಪಡೆದಿದ್ದಾರೆ. ಸಾಂಸ್ಕೃತಿಕ ಭಿನ್ನತೆಗಳು ಮೇಳೈಸಿದಾಗ ದೇವರಿಂದ ಆದೇಶಿಸಲ್ಪಟ್ಟ ಯುರೋಪಿಯನ್ ಮೋಕ್ಷ ಯೋಜನೆಯು ಅಮೆರಿಕಾದ ಮೂಲ ನಿವಾಸಿಗಳ ಮಾರಣಹೋಮದ ಮೂಲಕ ಮತ್ತು ಆಫ್ರಿಕನ್ನರ ದಾಸ್ಯದ ಮೂಲಕ ಅಸಮಾನತೆಯನ್ನು ನಿವಾರಿಸಿತು. ಏಯನ್ನರು ಭಾಗ್ಯಶಾಲಿಗಳು. ಏಕೆಂದರೆ, ಅವರು ವಸಾಹತುಶಾಯ ಮೂಲಕ "ಕಡಿಮೆ ಭಿನ್ನತೆ"ಯುಳ್ಳವರಾದರು.
ಇವತ್ತು ಅನೇಕ ಭಾರತೀಯರು ಅಸಮಾನತೆಯನ್ನು ಅಳಿಸಿ ಹಾಕಲು ಪಾಶ್ಚಾತ್ಯ ಶೈಲಿಯನ್ನು ಚಿನ್ನದಂತೆ ಅನುಸರಿಸುತ್ತಾರೆ. "ಗೆ ಪಾಶ್ಚಾತ್ಯ ಶೈಲಿಯನ್ನು ವೈಭವೀಕರಿಸುತ್ತಿರುವವರು ಪ್ರಮುಖವಾಗಿ ಲೇಖಕರು. ಮಾಧ್ಯಮ ಮತ್ತು ಪಾಪ್ ಸಂಸ್ಕೃತಿಯನ್ನು ಅನುಸರಿಸುತ್ತಿರುವವರು ಬಿಳಿಯರ ಸೌಂದರ್ಯ, ಶರೀರಭಾಷೆ, ಮತ್ತು ಬಟ್ಟೆಗಳನ್ನು - ಸಾಮಾಜಿಕ ಘನತೆ, ಜೀವನಕ್ರಮ ಮತ್ತು ವಿವಾಹ ಸಮಾರಂಭಗಳಿಗಾಗಿ ಬಳಸುತ್ತಿದ್ದಾರೆ. ಆದರಣೀಯವಾದ 'ನಮಸ್ತೆ' ಎನ್ನುವುದು ಹಳೆ ಸಂಪ್ರದಾಯ ಮತ್ತು ಕೆಲಸದವರು ಬಳಸುವ ಪದವಾಗಿ ಪರಿಣಮಿಸಿದೆ. ಧಾಮಿ೵ಕ ಮತ್ತು ಅಧಾಮಿ೵ಕ ಎಂಬ ಭೇದವನ್ನೂ ಲೆಕ್ಕಿಸದೇ ಹಿಂದೂ ಪಾಪ್ ಗುರುಗಳು "ಎಲ್ಲವೂ ಒಂದೇ" ಎಂಬ ಮಂತ್ರವನ್ನು ಜಪಿಸುತ್ತಿದ್ದಾರೆ. ಬುದ್ಧಿಜೀವಿಗಳು ವಿದೇಶೀ ಪ್ರವಚನಪದ್ಧತಿಯನ್ನು "ಸಾರ್ವತ್ರಿಕ" ಎಂದು ಸಮರ್ಥಿಸಿ ಬಳಸಿಕೊಳ್ಳುತ್ತಿದ್ದಾರೆ.
ಅವರು ಸಿದ್ಧಾಂತಗಳ ಅಸಮಾನತೆಯನ್ನು ದೂರಮಾಡುವುದು ಆಧಿಪತ್ಯವನ್ನು ಸ್ಥಾಪಿಸುವ ಮೂಲಕ. ಒಂದೋ (i) ನೀವು ಅವರಲ್ಲೊಂದಾಗಬೇಕು. (ii) ವಿರೋಧಿಸಿ ಕಷ್ಟ ಅನುಭವಿಸಬೇಕು ಅಥವಾ (iii) ಅವರೊಳಗೇ ಸೇರಿಹೋಗಿ ಅಲ್ಪಸಂಖ್ಯಾತರಾಗಬೇಕು.
ಭಾರತೀಯ ವೇದಾಂತವು ಮರ, ಹೂವು, ವಸ್ತು, ಮಾನವಶರೀರ, ಮನಸ್ಸು, ಭಾಷೆ, ಸಂಸ್ಕೃತಿ, ಆಧ್ಯಾತ್ಮ, ಪದ್ಧತಿ - ಮುಂತಾದವುಗಳ ಅನೇಕತೆಯನ್ನು ವರವಾಗಿ ಸ್ವೀಕರಿಸಿದೆ.
ಸಾಮಾನ್ಯವಾಗಿ ಎಲ್ಲ ಸಾಮಾಜಿಕ ಗುಂಪುಗಳೂ ತಮ್ಮೊಳಗೆ ಪರಸ್ಪರ ಸಂಬಂಧವನ್ನು ಹೊಂದಿರುತ್ತವೆ. ಆದರೆ, ಪ್ರಾಚೀನ ಭಾರತೀಯ ಆದರ್ಶದಂತೆ ಈ ಸಂಬಂಧವು ಪರಸ್ಪರರನ್ನು ಆಕ್ರಮಿಸದೇ ಪಡೆಯುವಂತಹುದು. ವಸಾಹತುಶಾಹಿಯೆಂಬ ಸಾಮಾಜಿಕ ತಂತ್ರಜ್ಞಾನ ಬರುವುದಕ್ಕಿಂತ ಮೊದಲು ಭಾರತೀಯ ಜಾತಿಗಳು ಪರಸ್ಪರ ಒಳಹರಿವನ್ನು ಹೊಂದಿದ್ದವು. ಅವು ಅಸ್ತಿತ್ವದ ಆಧಾರ ಸ್ತಂಭಗಳಾಗಿ ಒಂದಕ್ಕೊಂದು ಒಗ್ಗೂಡಿದ್ದವು. ಮತ್ತು ಈಗಿರುವಂತೆ ಕಠಿಣ ಮತ್ತು ದೃಢವಾದ ವಿಭಾಗವನ್ನು ಹೊಂದಿರಲಿಲ್ಲ. ಈ ಪದ್ಧತಿ ಮುಸ್ಲಿಂ, ಕ್ರಿಶ್ಚಿಯನ್, ಹಾಗೂ ಹಿಂದೂಗಳಿಗೆ ಸಮಾನವಾಗಿದ್ದಿತು. ಪ್ರತಿಯೊಂದು ಜಾತಿಗೂ ಒಂದು ಆದರ್ಶವಿರುತ್ತಿತ್ತು. ಮತ್ತು ಅದು ಬೇರೆಯವರಿಂದ ಗೌರವ ಪಡೆಯುತ್ತಿತ್ತು. ನನ್ನ ಭಾರತವೆಂದರೆ ವಂಶಾವಳಿಗಳನ್ನು ಕೋಶದಿಂದ ಆವರಿಸಿರುವ ಸಾವಿರಾರು ಜಾತಿಗಳುಳ್ಳ ಒಂದು ಬಲೆ. ಈ ಕಲ್ಪನೆ ಸ್ವ-ಜನಾಂಗ ಕೇಂದ್ರಿತವಾದ ಫ್ಯಾಸಿಸಂಗಿಂತ ಪೂರ್ತಿ ಭಿನ್ನವಾದುದು.

ಇರಲಿ ವಿವಿಧತೆ, ಬೇಡ ವಿಘಟನೆ :

ಸಾಮಾಜಿಕವಾಗಿ ಪರಸ್ಪರ ಒಳಹರಿವನ್ನು ಹೊಂದಿ ಬೇಕಾದಾಗ ಬದಲಾಯಿಸಬಹುದಾಗಿದ್ದ ಜಾತಿಗಳು ಭಾರತದ ವಿವಿಧತೆಯನ್ನು ಕಾಪಾಡಿದ್ದವು. ಬ್ರಿಟಿಷರ ಒಡೆದು ಆಳುವ ನೀತಿಯನ್ನು ಜೀವಂತವಾಗಿಡಲು ನಿರ್ದಿಷ್ಟ ಪರಿಧಿಯೊಳಗೆ ಜಾತಿಗಳನ್ನು ತಳ್ಳಲಾಯಿತು. ಸ್ವತಂತ್ರ ಭಾರತದಲ್ಲಿ ಜಾತಿಯ ಅಸ್ತಿತ್ವವನ್ನು ವೈಯಕ್ತಿಕ ಹಕ್ಕುಗಳ ರಕ್ಷಣೆಗೆ ಬಳಸುವ ಬದಲು ಮೀಸಲಾತಿಗಾಗಿ ಬಳಸಲಾಯಿತು. ಕಾಂಗ್ರೆಸ್ ಪಕ್ಷವು ಉಪ-ಅಸ್ತಿತ್ವಗಳ ಕಲಸುಮೇಲೋಗರವನ್ನು ಸಂಘಟಿಸಲು ಅಸಮರ್ಥವಾದಾಗ, ಪ್ರಾದೇಶಿಕ ವೋಟ್‌ಬ್ಯಾಂಕ್‌ನ ದಲ್ಲಾಳಿಗಳು ಭಾರತದ ರಾಜಕೀಯ ವಿಘಟನೆಗಳನ್ನು ಆಕ್ರಮಿಸಿದರು. ಈಗ, ಆಂತರಿಕ ವಿಘಟನೆಗಳನ್ನು ಬೆಂಬಲಿಸುವ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳಲು ದೇಶದ ಹಿತಾಸಕ್ತಿಗಳನ್ನು ಬಲಿಗೊಡಲಾಗುತ್ತಿದೆ.
ಜಾಗತೀಕರಣವೆಂಬ ಮಹಾ ಅಧ್ಯಾಯವು ಅಲ್ಪಸಂಖ್ಯಾತ ನಾಯಕರಿಗೆ ಪಶ್ಚಿಮದ ಚರ್ಚುಗಳು, ಸಂಸ್ಥೆಗಳು, ಅರಬ್ ಮತ್ತು ಚೈನೀಸರೊಡನೆ ಒಪ್ಪಂದ ಮಾಡಿಕೊಳ್ಳಲು ಹೆಬ್ಬಾಗಿಲನ್ನೇ ತೆರೆಯಿತು. ಮತ್ತು ಯಾರಾದರೂ ಭಾರತವೆಂಬ ಆನೆಯ ಅಂಗಗಳನ್ನು ಕೆತ್ತಿಕೊಳ್ಳಲು ಬಯಸಿದರೆ ಅವರಿಗದು ಸುಲಭವಾಗಿ ಸಿಗುವಂತಾಯಿತು. ಅಂತಹ ಅಲ್ಪಸಂಖ್ಯಾತರಲ್ಲೊಬ್ಬರು - ನಾಗಾಗಳು - ಅವರೀಗ ದಕ್ಷಿಣ ಟೆಕ್ಸಾಸ್‌ನ ಬ್ಯಾಪ್ಟಿಸ್ಟ್ ಚರ್ಚುಗಳ ನೇಮಕಗೊಂಡ ವಿದೇಶೀ ಉಪಾಂಗವಾಗಿದ್ದಾರೆ ; ಮೊದಲು ದ್ರಾವಿಡೀಕರಣಗೊಂಡ ತಮಿಳರು ಅಸ್ತಿತ್ವ ತಂತ್ರಜ್ಞಾನದ ಮೂಲಕ ಕ್ರಿಸ್ತೀಕರಣಗೊಂಡಿದ್ದಾರೆ ; ಮಾವೋವಾದಿಗಳು ದೇಶದ ೩೦% ಜಿಲ್ಲೆಗಳಲ್ಲಿದ್ದಾರೆ. ಅರಬರಿಂದ ಹಣ ಪಡೆಯುವ ಇಸ್ಲಾಮೀಪರರ ಸಂಖ್ಯೆ ಭಾರತದಲ್ಲಿ ಏರುಗತಿಯಲ್ಲಿದೆ. ಈ ವಿಘಟಿತ ಅಸ್ತಿತ್ವಗಳು ತಮ್ಮ ವಿದೇಶೀ ಮೂಲಗಳಿಗೆ ನಿಷ್ಠರಾದ ಕಾರಣ ಭಾರತೀಯತೆಯನ್ನವರು ನಿಶ್ಶಕ್ತಗೊಳಿಸುತ್ತಿದ್ದಾರೆ. ಆ ನಾಯಕರು ಹಣ ಮತ್ತು ಸಿದ್ಧಾಂತದ ಬೆಂಬಲಕ್ಕಾಗಿ ತಮ್ಮ ವಿದೇಶೀ ಮುಖ್ಯ ಕಛೇರಿಯನ್ನೇ ಅವಲಂಬಿಸುತ್ತಾರೆ.
ಅಂತಹ ಗುಂಪುಗಳಿಗ ಅಲ್ಪಸಂಖ್ಯಾತರಾಗಿ ಉಳಿದಿಲ್ಲ. ಅವರೀಗ ಪ್ರಭಾವಶಾಲೀ ಬಹುಸಂಖ್ಯಾತ ಗುಂಪಿನ ಏಜೆಂಟರಾಗಿದ್ದಾರೆ. ಅವರು ವೈಶ್ವಿಕ ಸಂಬಂಧಗಳನ್ನು ಬೆಳೆಸುವ ಅಧಿಕಾರಿಗಳಾಗಿದ್ದಾರೆ. ಭಾರತೀಯ ಅಸ್ತಿತ್ವವನ್ನು ರೂಪಿಸುವಲ್ಲಿ ಅವರು ಅಡ್ಡಗೋಡೆಗಳಾಗಿದ್ದಾರೆ. ಅವರು ನಿಜವಾಗಿಯೂ ಭಾರತದ ಹಿಂದುಳಿದವರನ್ನು ಮೇಲೆತ್ತಲು ಸಹಾಯ ಮಾಡಿದ್ದಾರೆಯೇ ? ಈ ವಿದೇಶೀ ಸಂಬಂಧಿಕರ ಸಮಸ್ಯಾ ಪರಿಹಾರದ ದಾಖಲೆಯನ್ನು ತೆಗೆದು ನೋಡಿದರೆ ನಿರಾಸೆಯೇ ಆಗುತ್ತದೆ. ಲ್ಯಾಟಿನ್ ಅಮೆರಿಕಾ, ಫಿಲಿಪೈನ್ಸ್ ಮತ್ತು ಆಫ್ರಿಕಾ ದೇಶಗಳಲ್ಲಿ ಅವರು ತಲೆಮಾರುಗಳಿಂದ ಕೆಲಸ ಮಾಡಿದ್ದಾರೆ. ಅಲ್ಲಿನ ಬಹುತೇಕ ಮೂಲನಿವಾಸಿಗಳು ಮತಾಂತರಗೊಂಡಿದ್ದಾರೆ. ಆಮದಾಗಿರುವ ಮತವು ಮಾನವ ಹಕ್ಕುಗಳನ್ನು ತರುವಲ್ಲಿ ವಿಫಲವಾಗಿದೆ ಮತ್ತು ಸಮಸ್ಯೆಗಳನ್ನು ಹೆಚ್ಚು ಉಲ್ಬಣಿಸುವಂತೆ ಮಾಡಿದೆ. ಆದರೂ ಭಾರತದ ಮಧ್ಯವರ್ತಿಗಳು ವಿದೇಶೀ ಪೋಷಕರನ್ನು ಬೇಡುವ ಕಲೆಯಲ್ಲಿ ನಿಷ್ಣಾತರಾಗಿದ್ದಾರೆ. ಸಹವರ್ತಿ ಭಾರತೀಯರ ಆತ್ಮಗಳ ಮಾರಾಟಕ್ಕೆ ಬದಲಾಗಿ ಅವರು ಈ ಬೇಡಿಕೆಯನ್ನಿತ್ತಿದ್ದಾರೆ.

ಭಾರತೀಯ ಅಸ್ತಿತ್ವದೆಡೆಗೆ :

ಇದಕ್ಕೆ ಆಧುನಿಕ ರಾಜಕೀಯ ಉತ್ತರವೆಂದರೆ ಹಿಂದುತ್ವ. ಆದರೆ, ಈಗ ಅದೂ ಕೂಡ ಭಾರತೀಯ ಅಸ್ತಿತ್ವಕ್ಕೆ ಪುನಶ್ಚೇತನ ನೀಡಲು ಅಸಮರ್ಥವಾಗಿದೆ. ಭಾರತೀಯತೆಯನ್ನು ವ್ಯಾಖ್ಯಾನಿಸುವ ಬಾಲಿವುಡ್ ಮತ್ತು ಕ್ರಿಕೆಟ್‌ಗಳೆರಡೂ ಜೊಳ್ಳು. ಜಾತ್ಯತೀತ ಪ್ರಜಾಪ್ರಭುತ್ವ ಅಥವಾ ಅಭಿವೃದ್ಧಿ ಮಂತ್ರಗಳು ರಾಷ್ಟ್ರೀಯ ಅಸ್ತಿತ್ವವನ್ನು ಬೆಳೆಸಲಾರವು. ಯುರೋಪಿಯನ್ ಸಿದ್ಧಾಂತಗಳ ಜೊತೆಗೆ ಪಾಪ್ ಸಂಸ್ಕೃತಿಯನ್ನು ಬೆರೆಸಿ ಭಾರತೀಯತೆಯೆಂದು ಹೇಳುವುದೇ ಈಗಿನ ಫ್ಯಾಷನ್ ಆಗಿದೆ. ಇದು ಮೂರ್ಖತನ. ಇಂತಹ ಬೆರಕೆಗಳು ಇಸ್ಲಾಮೀ ಜಿಹಾದ್ ಮತ್ತು ಕ್ರೈಸ್ತ ಸುವಾರ್ತೆಯ ನಡುವೆ ಇರುವ ನಮ್ಮ ವಿಭಜಿತ ಜಾತಿವ್ಯವಸ್ಥೆಯ ನಡುವೆ ಸಂಘಟಿತ ಭಾರತವನ್ನು ಕಟ್ಟಲಾರವು.
ಭಾರತೀಯತೆಯು ವಿಘಟಿತ ಅಸ್ತಿತ್ವಗಳನ್ನು ದಾಟಬೇಕು. ವೋಟ್ ಬ್ಯಾಂಕ್ ಎಷ್ಟೇ ದೊಡ್ಡದಾಗಿರಲಿ ಅಥವಾ ವಿದೇಶೀ ಪ್ರಾಯೋಜಕರು ಎಷ್ಟೇ ಪ್ರಬಲರಾಗಿರಲಿ. ಗಾಂಧೀಜಿ ಭಾರತದ ಒಳ್ಳೆಯ ನಿರೂಪಕರಾಗಿದ್ದರು. ಠಾಗೋರ್ ಮತ್ತು ಅರವಿಂದರು ಭಾರತದ ನಾಗರೀಕತೆಯಲ್ಲಿ ಅನಸ್ಯೂತತೆಯನ್ನು ಕಂಡರು. ನೆಹರುಗೆ ರಾಷ್ಟ್ರೀಯ ದೃಷ್ಟಿಕೋನವಿತ್ತು. ಇದನ್ನು ಅವರ ಇಂದಿರಾ ಗಾಂಧಿ ಸ್ವಲ್ಪ ಬದಲಿಸಿ ಉಗ್ರವಾಗಿ ಪ್ರತಿಪಾದಿಸಿದರು. ಅಶೋಕ, ಚೋಳ ಮತ್ತು ಮರಾಠಾ ಸಾಮ್ರಾಜ್ಯಗಳು ಒಳ್ಳೆಯ ಇತಿಹಾಸವನ್ನು ಹೊಂದಿವೆ. ಈ ಎಲ್ಲ ಇತಿಹಾಸಗಳಲ್ಲಿ ಭಾರತದ ಬಗೆಗಿನ ಕಲ್ಪನೆ ಚೆನ್ನಾಗಿ ವ್ಯಕ್ತವಾಗಿದೆ.
ಭಾರತೀಯತೆಯ ಬಗೆಗೆ ನಿರ್ಭೀತ ನ್ಯಾಯಸಮ್ಮತ ಚರ್ಚೆ ಆಗಬೇಕು :
ಸತ್ವಶಾಲೀ ಭಾರತೀಯತೆಯು ಚರ್ಚೆಯ ವಿಷಯವಾಗಬೇಕು. ಅದರಲ್ಲಿ ಗಂಭೀರ ವಿಷಯಗಳ ಚರ್ಚೆ ಆಗಬೇಕು. ಎಲ್ಲರಿಗೂ ಅದರಲ್ಲಿ ಭಾಗವಹಿಸಲು ಅವಕಾಶ ಇರಬೇಕು - ಅವರು ಅಡ್ವಾನಿಯಿರಬಹುದು ಅಥವಾ ಸೋನಿಯಾ ಆಗಿರಬಹುದು. ಜಾಮಾ ಮಸೀದಿಯ ಇಮಾಮ್ ಆಗಿರಬಹುದು ಅಥವಾ ಹಿಂದೂ ಧರ್ಮಗುರುವೇ ಆಗಿರಬಹುದು. ಬಾಲ್ ಠಾಕ್ರೆ ಅಥವಾ ಭೂಗತ ಜಗತ್ತಿನವರೇ ಆಗಿರಬಹುದು. ಅಂದರೆ, ಇದು ಭಾರತೀಯತೆಯ ಬಗೆಗಿನ ಮುಕ್ತ ಹಾಗೂ ನ್ಯಾಯಸಮ್ಮತ ಚರ್ಚೆಯಾಗಬೇಕು. ಮುಕ್ತವಾಗಿ ಟೀಕೆ ಮಾಡಲು ಎಲ್ಲರಿಗೂ ಅಧಿಕಾರ ಇರಬೇಕು.
ಆದರೆ ವಿದೇಶೀ ತತ್ವಗಳನ್ನು ಆಮದು ಮಾಡಿ ಅವುಗಳ ಮೇಲೆ ವಿದೇಶೀ ಹಕ್ಕುಗಳನ್ನು ಪಡೆದು ಉದ್ಯೋಗ ಪಡೆದ ಭಾರತದ ಬುದ್ಧಿಜೀವಿಗಳ ಮಾಫಿಯಾ ಅಂತಹ ಚರ್ಚೆಗಳನ್ನು ಸರಿಯಾದ ಹಾದಿಯಲ್ಲಿ ನಡೆಸುವುದಿಲ್ಲ. ಪೂರ್ವಾಗ್ರಹಪೀಡಿತರಾಗಿ, ಬೇರೆಯವರು ನಡೆಸುವ ಪ್ರಾಮಾಣಿಕ ಪ್ರಯತ್ನಗಳನ್ನು ಫ್ಯಾಸಿಸಂ ಎಂಬ ಹಣೆಪಟ್ಟಿ ಹಚ್ಚಿ ವಿರೋಧಿಸುತ್ತಾರೆ. ನಾನು ಈ ಬಗ್ಗೆ ಕೆಲವು ಉದಾಹರಣೆಗಳನ್ನು ಕೊಡುತ್ತೇನೆ -
ಅಮೆರಿಕದ ಅವಳಿ ಗೋಪುರಗಳ ಮೇಲಿನ ದಾಳಿಗಿಂತ ಕೆಲವು ವರ್ಷಗಳ ಮೊದಲು ಪ್ರಿನ್ಸ್‌ಟನ್ ಮೂಲದ ಇನ್ಫಿನಿಟಿ ಫೌಂಡೇಷನ್ ತಾಲಿಬಾನ್ ಹಾಗೂ ಭಾರತದ ಮೇಲೆ ಅದರ ಪರಿಣಾಮ ಎಂಬ ವಿಷಯದ ಬಗೆಗೆ ಚರ್ಚೆ(ಸಂಶೋಧನೆ) ನಡೆಸಲು ದೆಹಲಿಯಲ್ಲಿರುವ ಹೆಸರಾಂತ ಸಂಸ್ಥೆಗೆ ಸಲಹೆ ನೀಡಿತು. ಆ ಕೇಂದ್ರದ ಬುದ್ಧಿಜೀವಿಗಳು ಇದನ್ನು ನಿರಾಧಾರ ಕಲ್ಪನೆ ಎಂದೂ, ಅಧ್ಯಯನಕ್ಕೆ ಅನರ್ಹವೆಂದೂ ಮತ್ತು ಒಳಸಂಚಿನಿಂದ ಕೂಡಿದ ಅವಾಸ್ತವಿಕ ವರದಿಯೆಂದೂ ಅಭಿಪ್ರಾಯಪಟ್ಟರು. ಸೆಪ್ಟೆಂಬರ್ ೧೧ರ ದಾಳಿಯ ನಂತರವೂ ಅಮೆರಿಕದ ಅಕಾಡೆಮಿ ಆಫ್ ರಿಲಿಜಿಯನ್ - ತಾಲಿಬಾನ್ ಅನ್ನು ಮತೀಯ ವಿದ್ಯಮಾನ ಎಂದು ಪರಿಗಣಿಸಿ ಅಧ್ಯಯನ ಮಾಡಲು ನಿರಾಕರಿಸಿತು. ಅದರ ಬದಲಾಗಿ, ಹಿಂದೂ - ಜಾತಿ, ಗೋವು, ವರದಕ್ಷಿಣೆ, ಅತ್ತೆ, ಸಾಮಾಜಿಕ ದಬ್ಬಾಳಿಕೆ, ಹಿಂಸೆ ಮತ್ತು ಬಗೆಬಗೆಯ ಬೌದ್ಧಿಕ ಚಿಹ್ನೆಗಳ ಬಗೆಗೆ ಅಧ್ಯಯನ ನಡೆಸಿದರು.
ಕೆಲವು ವಿಶ್ಲೇಷಕರು ಇಸ್ಲಾಮೀ ಭಯೋತ್ಪಾದನೆಯನ್ನು ಕಾಶ್ಮೀರದೊಂದಿಗೆ ತಳುಕು ಹಾಕುತ್ತಾರೆ. ಮತ್ತು ಅದು ಅವರ ವಿವಾದ ಬಗೆಹರಿಸುವ ತಂತ್ರವೆಂದು ವಾದ ಮಾಡುತ್ತಾರೆ. ಈಗಿನ ಮುಸ್ಲಿಮರ ವ್ಯವಹಾರವೇ ಪ್ರಗತಿಪರ ಚಿಂತನೆ ; ಎಂದು ಹೇಳುವ ಷಿಕಾಗೋ ವಿಶ್ವವಿದ್ಯಾಲಯದ ಪ್ರೊಫೆಸರ್ ಮಾರ್ಥಾ ನುಸ್ಬಾಂರವರು ಹಿಂದೂ ಫ್ಯಾಸಿಸಂ - ಭಯೋತ್ಪಾದನೆಯ ಪ್ರಮುಖ ಕಾರಣವೆಂದು ಆರೋಪ ಹೊರಿಸುತ್ತಾರೆ. ಮತ್ತು ಮುಂಬೈ ಮಾರಣಹೋಮವನ್ನು ವಿರೋಧಿಸುತ್ತಾ ಅದು ಹಿಂದೂಗಳು ನಡೆಸಿದ ವ್ಯವಸ್ಥಿತ ಕಗ್ಗೊಲೆ, ಮುಸ್ಲಿಮರ ವಿರುದ್ಧದ ಜನಾಂಗೀಯ ಮಾರಣಹೋಮವೆಂದೂ ವಾದ ಮಾಡಿದರು. ಹಿಂದೂಗಳಿಗೆ ಕ್ರಿಶ್ಚಿಯನ್ನರನ್ನು ಕೊಂದು ಅವರ ಶಿಕ್ಷಣಸಂಸ್ಥೆಗಳನ್ನು ನಾಶಪಡಿಸುವ ಯೋಜನೆ ಇದೆಂದೂ ಒಂದಕ್ಕೊಂದು ಜೋಡಿಸಿದರು. ಆ ಮಾರಣಹೋಮದಲ್ಲಿ ಬಲಿಪಶುಗಳಾದವರ ಬಗೆಗೆ ಸ್ವಲ್ಪವೂ ಕರುಣೆಯಿಲ್ಲದ ಅವರ ಲೇಖನUಳನ್ನು ನವೆಂಬರ್ ೧೧ರ ದಾಳಿಯ ಕೆಲವೇ ದಿನಗಳ ನಂತರ ಲಾಸ್ ಏಂಜಲೀಸ್ ಟೈಮ್ಸ್ ಪ್ರಕಟಿಸುತ್ತಿದೆ.
ಇಸ್ಲಾಂನ ಬಗೆಗೆ "ಡಂಬನೆಯ ಕಾರ್ಟೂನ್ ಪ್ರಕಟವಾದಾಗ ಖಂಡನೆ, ಪ್ರತಿಭಟನೆ ಮತ್ತು ಗಲಭೆಗಳೂ ಆಗುತ್ತವೆ. ಆದರೆ, "ಂದೂ ದೇವತೆಗಳ ನೀಚ ಅವಹೇಳನ ಅಥವಾ ಆಕ್ರಮಣಗಳಾದಾಗ ಅಬಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸಮಜಾ ನೀಡಲಾಗುತ್ತದೆ. {ಈ "ಷಯದಲ್ಲಿ ಇನ್ನೂ ಹೆಚ್ಚಿನ ಓದಿಗಾಗಿ "ಇನ್‌ವೇಡಿಂಗ್ ದ ಸೇಕ್ರೆಡ್"(ರೂಪಾ & ಕೋ) ಎಂಬ ಗ್ರಂಥವನ್ನು ನಾನು ಶಿಫಾರಸು ಮಾಡುತ್ತೇನೆ. ರಾಜೀವ್ ಮಲ್ಹೋತ್ರಾರವರು ಈ ಗ್ರಂಥದ ಪ್ರಕಾಶನದಲ್ಲಿ ಮುಖ್ಯ ಭೂ"ಕೆ ವ"ಸಿದ್ದರು}.
'ಗುಣಾತ್ಮಕ'ವಾಗಿ ಯೋಚಿಸಿ ಮತ್ತು ಕೊನೆಯವರೆಗೆ ಸುಖವಾಗಿರಿ :
ಬಾಲಿವುಡ್‌ನ ಚಲನಚಿತ್ರಗಳಲ್ಲಿ ಜೋಡಿಗಳು ಕೊನೆಗೆ ಸುಖವಾಗಿರುತ್ತಾರೆ. ಅಂದರೆ, ಕಥೆ ಸುಖಾಂತ್ಯವಾಗುತ್ತದೆ. ಸಮಸ್ಯೆಗಳನ್ನು ಪರಿಹರಿಸುವ ನನ್ನ ರೀತಿಯ "ಶ್ಲೇಷಣೆಯು ಗುಣಾತ್ಮಕವಾಗಿ ಕೊನೆಗೊಳ್ಳಬೇಕೆಂದು ನನ್ನ ಸ್ನೇ"ತರು ಬಯಸುತ್ತಾರೆ. ಕೈ"ರಿ ಹೋಗುತ್ತಿರುವ ಭಾರತದ ಸಮಸ್ಯೆಗಳ ಬಗೆಗೆ ನಾನು ಪ್ರಸ್ತುತಪಡಿಸುವ ದೃಢವಾದ ಸಾಕ್ಷಿಗಳು ಅವರ ದ್ಟೃಯಲ್ಲಿ 'ತೀರಾ ನಕಾರಾತ್ಮಕ'. ಸುಖವಾದ ಅಂತ್ಯದಿಂದ "ಮ್ಮುಖವಾಗಿ ಕೆಲಸ ಮಾಡುವುದು ಮತ್ತು ಅಂತಹ ಸುಖಾಂತ್ಯವನ್ನೇ ಹೇಳುವ ಸಾಕ್ಷಿಗಳನ್ನು ಪ್ರಸ್ತುತಪಡಿಸುವುದು ಭಾರತೀಯ ಮಾನಸಿಕ ಬೇನೆ. ವೈದ್ಯರು ರೋಗದ ನಕಾರಾತ್ಮಕ ವರದಿಗಳನ್ನು ಅಸಡ್ಡೆ ಮಾಡಬಾರದು ಎನ್ನುತ್ತೇವೆ. ಹಾಗೆಯೇ, ಷೇರು ಮಾರುಕಟ್ಟೆಯ ಕುಸಿತದ ಬಗೆಗೆ ತುಂಬಾ ಯೋಚಿಸುತ್ತೇವೆ. ಮತ್ತು ಶಿಕ್ಷಕರು ಅ"ಧೇಯ "ದ್ಯಾರ್ಥಿಗಳನ್ನು ಶಿಕ್ಷಿಸಬೇಕು ಎನ್ನುತ್ತೇವೆ. "ಒಳ್ಳೆಯ" ಪರ್ಯಾಯಗಳು ಇಲ್ಲದಿದ್ದರೇನಂತೆ ?
ಪಾಕಿಸ್ಥಾನದ "ರುದ್ಧದ ಯುದ್ಧತಂತ್ರಗಳು ಭಾರತೀಯ ಮುಸ್ಲಿಮರ ಭಾವನೆಗಳನ್ನು ಕೆರಳಿಸಬಾರದು ಎಂಬ ನಮ್ಮ ನಾಯಕರ ಧೋರಣೆ ಕಸಿ"ಸಿಯನ್ನುಂಟುಮಾಡುತ್ತದೆ. ಇದರಿಂದ, ಭಾರತೀಯ ಮುಸ್ಲಿಮರು - ಹೆಚ್ಚು ಮುಸ್ಲಿಮರು, ಕಡಿಮೆ ಭಾರತೀಯರು ಎಂದಾತಲ್ಲವೇ ? ಭಾರತದ ಉಗ್ರ ಕ್ರಮವು ಜಿಹಾದ್‌ಅನ್ನು ಹೆಚ್ಚಿಸುತ್ತದೆ ಮತ್ತು ಅಣು ಯುದ್ಧಕ್ಕೆ ಆಹ್ವಾನ ನೀಡುತ್ತದೆ ಎಂದು ಕೆಲವರು ಹೇಳುತ್ತಾರೆ. ಆದರೆ, ಭಯಂಕರ ಕ್ಯಾನ್ಸರ್ ರೋಗವು ಟ್ಯೂಮರ್‌ನ ಚರ್ಮಕ್ಕಿಂತ ಹೊರಗೆ ಹರಡಿದಾಗ, ಅದರ ಮೇಲೆ ನೇರ ಆಕ್ರಮಣ ನಡೆಸಲೇಬೇಕು. ಅದಕ್ಕೋಸ್ಕರ ತೆಗೆದುಕೊಳ್ಳುವ "ಟ"ನ್‌ಗಳು ಅಥವಾ ಹಾಡು ಮತ್ತು ನೃತ್ಯ ಅರ್ಥ"ನ. ಆಟ, ಯುದ್ಧ, ಔಷಧಿ ಮತ್ತು ಮಾರ್ಕೆಟಿಂಗ್‌ನ "ಷಯದಲ್ಲಿ ಕೇವಲ ಆತ್ಮ ರಕ್ಷಣೆಂದ ಗೆಲ್ಲಲು ಸಾಧ್ಯ"ಲ್ಲ. ನಮ್ಮ ಕ್ರಮಗಳು ಕಾರ್ಯರೂಪಕ್ಕೆ ಬರದಿದ್ದಾಗ ಕೇವಲ ಬೆದರುಬೊಂಬೆಗಳಾಗುತ್ತವೆ. ರ್‍ಟ್ರಾಯ "ತಾಸಕ್ತಿಗಿಂತ ಅಲ್ಪಸಂಖ್ಯಾತರ ತ್ಟುಕರಣವೇ ಹೆಚ್ಚಾದಾಗ, ನಮ್ಮ ಶತ್ರುಗಳು ನಮ್ಮ ಬಲ"ನತೆಯ ಲಾಭ ಪಡೆಯುತ್ತಾರೆ. ಪಾರ್ಶ್ವವಾಯು ಬಡಿದ ಭಾರತವು ಪರಕೀಯರಿಗೆ ಸುಲಭವಾಗಿ ಆಹಾರವಾಗುತ್ತದೆ.
ದೇಶಗಳು ಆಡುವ ಆಟ :
ಭಾರತೀಯ ಮಾನಸಿಕತೆ ಸಹಜಸ್ಥಿತಿಗೆ ಮರಳಿದಾಗ ಅದನ್ನು "ನಿ"ಯತೆ" ಎಂದು ಜರಿಯಲಾಗುತ್ತದೆ. ಇಲ್ಲಿನ ಪ್ರತಿಯೊಂದೂ ಪ್ರಮುಖ ಘಟನೆ ನೋಡಿದಾಗ - ಅಸಮರ್ಪಕ ಚಿಂತನೆ, ಭಯೋತ್ಪಾದನೆಯ ಬಗೆಗೆ ಅಸಡ್ಡೆ ಮತ್ತು ಹೇಗೋ ಬದುಕಿದರಾತೆಂಬ ಭಾವನೆ ದಟ್ಟವಾಗಿ ಕಾಣುತ್ತದೆ. ಕ್ರಾಂತಿಕಾರಕ ಆಲೋಚನೆಗಳ ಅನುಷ್ಠಾನಕ್ಕಾಗಿ ಒಳ್ಳೆಯ ಯೋಜನೆ ಬೇಕೇಬೇಕು.
ಭೂರಾಜ್ಯಶಾಸ್ತ್ರದ ಚದುರಂಗದಾಟದಲ್ಲಿನ ಪಟ್ಟುಗಳನ್ನು ಭಾರತ ಚೆನ್ನಾಗಿ ಅರಿತುಕೊಳ್ಳಬೇಕು. ಒಂದು ಕಡೆಯ ಆಟ ಇನ್ನೊಂದು ಕಡೆಯ ಆಟದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಆಮದು-ರಫ್ತು ನೀತಿ ಜಟಿಲಗೊಳ್ಳುತ್ತದೆ. ದಕ್ಷಿಣ ಏಷ್ಯಾದ ಈ ಚದುರಂಗದಾಟದಲ್ಲಿ ಒಂದು ಕಡೆರುವುದು ಅಮೆರಿಕಾ - ಭಾರತ - ಪಾಕಿಸ್ಥಾನಗಳು. ಇನ್ನೊಂದು ಕಡೆರುವುದು ಅದೇ ಪಾಕಿಸ್ಥಾನ! ಮತ್ತು ಚೈನಾ. ಪಶ್ಚಿಮ ದೇಶಗಳ ಜೊತೆಗಿನ ಬಾಹ್ಯ ಆಟಗಳ ಹೊರತಾಗಿ ಭಾರತವು ತನ್ನ ದೇಶದಲ್ಲಿರುವ "ದೇಶೀ ಪ್ರಾಯೋಜಿತ "ಘಟನೆಗಳ ತ್ಟುಕರಣಕ್ಕಾಗಿ ಆಂತರಿಕ ಆಟಗಳನ್ನೂ ಆಡುತ್ತದೆ. ಪಶ್ಚಿಮದ "ರುದ್ಧದ ಇಸ್ಲಾಂನ ಆಟದಲ್ಲಿ ಮತವನ್ನು ದಾಳವಾಗಿ ಬಳಸಲಾಗುತ್ತಿದೆ. ಭಾರತದಲ್ಲಿರುವ "ಘಟನೆಗಳಿಂದ, ಅತ್ಯಂತ ದೊಡ್ಡ ಮಾರಿಕಟ್ಟೆಯಾದ ಈ ದೇಶದಲ್ಲಿ ಮತಾಂತರ ಅವ್ಯಾಹತವಾಗಿ ನಡೆಯುತ್ತಿದೆ. "ದೇಶೀ ಚದುರಂಗದಾಟದಲ್ಲಿ ಭಾರತವನ್ನು ಒಂದು ಮಾರುಕಟ್ಟೆಯಾಗಿ, ಸರಬರಾಜು ಮಾಡುವ ಕೇಂದ್ರವಾಗಿ, ಪ್ರತಿಸ್ಪರ್ಧಿಯಾಗಿ ಮತ್ತು ಹೂಡಿಕೆಯ ಕೇಂದ್ರವೆಂಬಂತೆ ಬಿಂಬಿಸಲಾಗಿದೆ.
ಇನ್ನೊಂದು ಚದುರಂಗದಾಟದಲ್ಲಿ ದಕ್ಷಿಣ ಏಷ್ಯಾದ ಬುದ್ಧಿಜೀ"ಗಳು ಭಾರತೀಯ "ದ್ವಾಂಸರಿಗೆ ಸಿಪಾಗಳಿಗೆ ನೀಡುವಂತೆ ಉಪನ್ಯಾಸ ನೀಡುತ್ತಾರೆ. ಮತ್ತು ಅವರಿಗೆ ಸಂಬಂಧಪಟ್ಟ ಸಂಸ್ಥೆಗಳನ್ನು - ಹಣ ಕೊಟ್ಟು ಕೊಂಡುಕೊಂಡಂತೆ ಆಡಿಸುತ್ತಾರೆ. ಇರಾಕ್ ಮೇಲಿನ ದಾಳಿಂದ ನಿಜವಾದ ಲಾಭವಾದದ್ದು "ಶ್ವ"ದ್ಯಾಲಯಗಳಿಗೆ ಮತ್ತು ಮಾನವ ಹಕ್ಕು ತಜ್ಞರಿಗೆ. ಈ ಆಟದಲ್ಲಿನ ಆಟಗಾರರಾದ ಅವರು, ಬರಾಕ್ ಒಬಾಮಾ ತಮ್ಮ ಬಜೆಟ್‌ನಲ್ಲಿ "ದಕ್ಷಿಣ ಏಷ್ಯಾ"ವನ್ನು ಆಟ ಆಡಿಸಲು ಶತಕೋಟಿ ಡಾಲರ್‌ಗಳನ್ನು "ಸಲಿಡಲಿದ್ದಾರೆ ಎಂದು ಬಯಸುತ್ತಿದ್ದಾರೆ.
ಈ ಅಸ್ತಿತ್ವಗಳ ಪರಸ್ಪರ ಘರ್ಷಣೆದ್ದರೂ ಭಾರತ ತನ್ನ ಅನೇಕತೆಂದಲೇ ಒಂದಾಗುತ್ತಿದೆ. ಸೈನ್ಯಕ್ಕಾಗಿ ಹಣ ಖರ್ಚು ಮಾಡಲು ದೇಶ ಸಂಪದ್ಭರಿತವಾಗಿರಬೇಕು. ಇನ್ನಾವುದೇ ಸಂಸ್ಥೆಗಿಂತ ಹೆಚ್ಚಿನ ರೀತಿಯಲ್ಲಿ ಸೈನ್ಯವು ದೇಶವನ್ನು ಒಂದು ಮಾಡುತ್ತದೆ. ಏಕೆಂದರೆ, ಸೈನಿಕರು ದೇಶದ ಜೊತೆಗೆ ತಮ್ಮನ್ನು ತಾವು ಗುರುತಿಸಿಕೊಂಡಿರುತ್ತಾರೆ ಮತ್ತು ದೇಶಕ್ಕಾಗಿ ಪ್ರಾಣ ಕೊಡಲೂ ತಯಾರಿರುತ್ತಾರೆ.
ಅಮೆರಿಕದ ಪ್ರಸ್ತುತ "ದೇಶಾಂಗ ನೀತಿಯು ಭಾರತದ "ದೇಶಾಂಗ ನೀತಿಯನ್ನು ಬೆಂಬಲಿಸುತ್ತಿದೆ. ಆದರೆ, ಇಲ್ಲಿ ಭಾರತವು - ಇಸ್ಲಾ" ಮತ್ತು ಚೈನಾ ದೇಶಗಳೆದುರಿಗೆ ದಾಳವಾಗಿ ಬಳಕೆಯಾಗುತ್ತಿದೆ ಎಂಬುದನ್ನು ಮನಗಾಣಬೇಕು. ಕಾಲದ ಓಟದಲ್ಲಿ ಅಮೆರಿಕವು ಭಾರತವನ್ನು - ಚೈನಾದ ತರಹ ಸೂಪರ್ ಪವರ್ ಆಗಿಯೋ, ಪಾಕಿಸ್ಥಾನದ ತರಹ ಅಪಾಯಕಾರಿ "ಘಟಿತ ದೇಶವನ್ನಾಗಿಯೋ ನೋಡಲು ಬಯಸುವುದಿಲ್ಲ. ಅದು ಭಾರತವನ್ನು ಈ ಎರಡೂ ವೈರುಧ್ಯಗಳಿಗೆ ಹೋಗದಂತೆ "ನಿಭಾಸುತ್ತದೆ". ಆನೆ ಯಾವತ್ತಿಗೂ ಸಾಕುಪ್ರಾಣಿಯಾಗದು. ಅದು ತನ್ನನ್ನು ತಾನೇ ಸಾಕಿಕೊಳ್ಳಬೇಕು.
ಭಾರತ ಕಲಿಯಬೇಕಾದ ಪಾಠಗಳು :
ಅಮೆರಿಕದಲ್ಲಿ ವಲಸಿಗಳೇ ಹೆಚ್ಚಾಗಿದ್ದರೂ, ಅಲ್ಲಿ ಪ್ರಾಧಾನ್ಯತೆ ಪಡೆಯುವುದು ಪ್ರಮುಖ ಮತವೇ. ಉನ್ನತ ಸ್ತರದ ರಾಜಕೀಯ ಪದಾಕಾಂಕ್ಷಿಗಳು ಒಳ್ಳೆಯ ಕ್ರಿಶ್ಚಿಯನರಲ್ಲದಿದ್ದರೆ, ಅವರು ಅಲ್ಲಿ ಭಾರೀ "ನ್ನಡೆ ಅನುಭ"ಸುತ್ತಾರೆ. ಕ್ರೈಸ್ತ ಮತದ "ಭಾಗವು ಆ ಮತವನ್ನು ರೂಪಿಸಿದ ಪೋಪರ ಆಜ್ಞೆಯಲ್ಲ ಅಥವಾ ಅಲ್ಪಸಂಖ್ಯಾತ ಮತಗಳ ಸಬಲೀಕರಣವೂ ಅಲ್ಲ. ಬಿಳಿಯರ ಅಸ್ತಿತ್ವದ ಆಧಾರದ ಮೇಲೆ ಅಮೆರಿಕದ ನಿರ್ಮಾಣವಾತು. ಇದಕ್ಕೆ ನೆರವಾದುದು, ಅವರು ನಡೆಸಿದ ಅಲ್ಲಿನ ಮೂಲ ನಿವಾಸಿಗಳ ಮಾರಣಹೋಮ. ಭಾರತದ ಪುಣ್ಯ ! ಇಲ್ಲಿ "ಗಾಗಲಿಲ್ಲ. ಒಬಾಮಾ ಸುಧಾರಿತ ಏಕೀಕರತ ರಾಷ್ಟ್ರವನ್ನು ಬಯಸಿದ್ದಾರೆ. "ಂದಿನ ನಾಯಕರು ಅಲ್ಪಸಂಖ್ಯಾತವಾದದಿಂದ ಮೇಲೆ ಬಂದಿದ್ದರು. ಭಾರತದ ಅಸ್ತಿತ್ವವನ್ನು ಶಿಥಿಲಗೊಳಿಸುವ ದ್ರಾ"ಡರು, ಮಾಯಾವತಿ ಮತ್ತು ಈ ದೇಶದ ಕ್ರಿಶ್ಚಿಯನ್ ಮತ್ತು ಮುಸ್ಲಿಂ ನಾಯಕರಿಗಿಂತ ಒಬಾಮಾ ನಿಸ್ಸಂದೇಹವಾಗಿ ಆ ದೇಶದ ಮತದ ನಿಷ್ಠಾವಂತ ಅನುಯಾ. ಅಮೆರಿಕಾ ತನ್ನ ಘನತೆಯನ್ನು ಇಂಡೋ - ಯುರೋಪಿಯನ್ ಮೊದಲಾದ "ಶ್ರಜನಾಂಗಗಳ ಮೂಲಕ ತೋರ್ಪಡಿಸುತ್ತದೆ. ಇಲ್ಲಿ ಎದ್ದು ಕಾಣುವುದು ಅಮೆರಿಕದ ಶ್ರೇಷ್ಠತೆಯೇ ! ಅಂದರೆ, ಎಲ್ಲ ಉಪ - ಅಸ್ತಿತ್ವಗಳನ್ನು ಅದು ರದ್ದುಗೊಳಿಸುತ್ತದೆ. ಅಲ್ಲಿನವರಿಗೆ ಅಮೆರಿಕನ್ ಅಲ್ಲದವನು ನಾಯಕನಾದರೆ ಅವನು ಪ್ರಾಣಾಂತಿಕನೇ.
ಇದಕ್ಕೆ ಪ್ರತಿಯಾಗಿ ಇಲ್ಲಿ ನೋಡಿದಾಗ ಮಾಯಾವತಿ ಮತ್ತು ಈ ದೇಶದ ಕ್ರಿಶ್ಚಿಯನ್ ಮತ್ತು ಮುಸ್ಲಿಂ ನಾಯಕರು, ದ್ರಾ"ಡರು ಹಾಗೂ ಇತರೆ ಅಲ್ಪಸಂಖ್ಯಾತರ ಮತಗಳನ್ನು ಪಡೆಯುವವರು ಭಾರತೀಯ ಸಂಗಟಿತ ಅಸ್ತಿತ್ವಗಳನ್ನು ಅಡ ಇಟ್ಟು ಅಧಿಕಾರ ಪಡೆದಿದ್ದಾರೆ. "ಘಟಿತ ಭಾರತೀಯ ಅಸ್ತಿತ್ವಗಳನ್ನು ಬೆಂಬಲಿಸುವವರಿಗಿಂತ ಭಿನ್ನನಾದ ಒಬಾಮಾ - ಸಂಘಟಿತ ಭಾರತೀಯ ನಾಗರೀಕತೆಯೊಳಗಿನ ಗಾಂಧಿ ಮತ್ತು ಅಂಬೇಡ್ಕರರಿಗೆ ಹೆಚ್ಚು ಹತ್ತಿರ. ಭಾರತವು ಅಮೆರಿಕದ ರಚನೆಗಳಿಂದ ಕಲಿಯಬಹುದು. ಭಾರತದ ಶತಕೋಟಿಪತಿಗಳು ರಾಷ್ಟ್ರದ ಗುಣಾತ್ಮಕ ಉಪನ್ಯಾಸ ಮತ್ತು ಚರ್ಚೆಗಳಲ್ಲಿ ಮುಖ್ಯ ಪಾತ್ರ ವ"ಸಬೇಕು ಮತ್ತು ಅವುಗಳನ್ನು ಆಯೋಜಿಸಬೇಕು. ಅಮೆರಿಕದ ಅಸ್ತಿತ್ವವನ್ನು ಮತ್ತು ಇತಿಹಾಸವನ್ನು ರೂಪಿಸುವಲ್ಲಿ ಮುಖ್ಯ ಪಾತ್ರ ವ"ಸಿದ ಕಾರ್ನೆಗಿ, ರಾಫೆಲ್ ಮತ್ತು ಫೋರ್ಡ್‌ಗಳಂತೆ ಇವರೂ ವ್ಯವಹರಿಸಬೇಕು. ಅಮೆರಿಕದ ಆಂತರಿಕ ಸ್ತರಗಳನ್ನಾಧರಿಸಿದ ಯೋಗ್ಯತಾಶಾ"ಯು ಭಾರತದ ಜಾತ್ಯಾಧಾರಿತ ರಾಜಕಾರಣಕ್ಕಿಂತ ಎಷ್ಟೋ "ಗಿಲಾದುದು.
ಅಮೆರಿಕಾದ ಪ್ರಾದೇಶಿಕ ಕಲಿಕಾ ಪದ್ಧತಿಗಳಲ್ಲಿ ಅಲ್ಲಿನ "ಶ್ವ"ದ್ಯಾಲಯಗಳು ಸರ್ಕಾರ, ಯೋಚನಾ ಕೂಟ ಮತ್ತು ಚರ್ಚುಗಳೊಡನೆ ಒಳ್ಳೆಯ ಸಂಬಂಧವನ್ನು ಹೊಂದಿವೆ. ಅವರು ತಮ್ಮ ದ್ಟೃಂದ ಇತರ ರಾಷ್ಟ್ರಗಳ ನಾಗರೀಕತೆಗಳನ್ನು ಅಭ್ಯಾಸ ಮಾಡುತ್ತಾರೆ. ಭಾರತವೂ ಹಾಗೆ ಮಾಡಲು ಕಲಿಕಾ ಕೇಂದ್ರಗಳನ್ನು ಸ್ಥಾಪಿಸಬೇಕು. ಈ "ಷಯಲ್ಲಿ "ಶ್ವಾದ್ಯಂತ ಹರಡಿರುವ ಚೈನಾದ ೧೦೦ ಕನ್ಫೂಶಿಯಸ್ ಕೇಂದ್ರಗಳು ನಮಗೆ ಮಾದರಿಯಾಗಬೇಕು.
ಸಿದ್ಧ ಉತ್ತರಗಳನ್ನು ಹೊಂದಿರುವ ಸೈದ್ಧಾಂತಿಕ ಶಿಬಿರಗಳು ಮಾಯವಾಗುತ್ತಿವೆ. ಭಾರತದ ಬುದ್ಧಿಮತ್ತೆ ಇನ್ನೂ ಹೆಚ್ಚಬೇಕು, ಪಳಗಬೇಕು, ಬದಲಾಗಬೇಕು ಮತ್ತು ತನ್ನ ಹೆಸರಿಗೆ ಯೋಗ್ಯವಾದ ರ್‍ಟ್ರಾಯ ಅಸ್ತಿತ್ವವನ್ನು ನಿಮಿ೵ಸಬೇಕು.
(ಆಂಗ್ಲ ಮೂಲ - ರಾಜೀವ್ ಮಲ್ಹೋತ್ರಾ)
* * *

Wednesday, March 4, 2009

ರಾಮಾಯಣದ ಅಸ್ತಿತ್ವವನ್ನು ಕುರಿತು.......

ರಾಮಾಯಣವು ಇತಿಹಾಸ ಗ್ರಂಥಗಳಲ್ಲೊಂದು ಎಂಬ ಹೇಳಿಕೆ ಹಿಂದಿನ ಕಾಲದಿಂದಲೂ ಇದೆ. ಎಲ್ಲ ಸಂಸ್ಕೃತ ಗ್ರಂಥಗಳಲ್ಲಿಯೂ ಹೀಗೆಯೇ ಅದರ ಉಲ್ಲೇಖವಾಗಿದೆ. ಇತಿಹಾಸ ಎಂಬುದರ ಅರ್ಥ ಇತಿ ಹ ಆಸ ಎಂದು ನಿರುಕ್ತದಲ್ಲಿ ಹೇಳಿದೆ.ಆದ್ದರಿಂದಲೇ, ನಡೆದಿದ್ದನ್ನು ನಿರೂಪಿಸುವ ಗ್ರಂಥವೇ ಇತಿಹಾಸ ಎಂದು ಕರೆಸಿಕೊಳ್ಳುತ್ತದೆ. ಪುರಾಣಗಳು ಇಂತಹವುಗಳಲ್ಲ.

ಆದರೆ, ಆಧುನಿಕರು ಇದಕ್ಕೆ ಇಲ್ಲಿ ಆಕ್ಷೇಪ ವ್ಯಕ್ತಪಡಿಸುತ್ತಾರೆ. ಅವರ ದೃಷ್ಟಿಯಲ್ಲಿ ರಾಮಾಯಣವು ಐತಿಹಾಸಿಕ ಗ್ರಂಥವಲ್ಲ. ಹಾಗಾಗಿ, ರಾಮನು ಇದ್ದ ಎಂಬುದರ ಬಗೆಗೆ ಅವರಿಗೆ ಆಧಾರ ಬೇಕಾಗಿದೆ. ಆಧಾರಸಮೇತ ನಿರೂಪಿಸಿದರೂ ಅವರು ಒಪ್ಪುವುದಿಲ್ಲ ಎಂಬುದು ಬೇರೆ ಮಾತು !

ದೂರದರ್ಶನದ ಝೀವಾಹಿನಿಯವರು ಇತ್ತೀಚೆಗೆ ಚಿತ್ರಕೂಟ ಮತ್ತು ಶ್ರೀಲಂಕಾಕ್ಕೆ ಹೋಗಿ ರಾಮಾಯಣದ ಘಟನೆಗಳಿಗೆ ಸಂಬಂಧಪಟ್ಟ ಸ್ಥಳಗಳ ಪರಿಶೀಲನೆ ನಡೆಸಿದರು. ಅವರು ಸಿದ್ಧಪಡಿಸಿದ ವರದಿಯಲ್ಲಿನ ಕೆಲವು ಕೂತೂಹಲಕಾರಕ ಸ್ಥಳಗಳ ಬಗೆಗಿನ ವಿವರಗಳು ಇಲ್ಲಿವೆ.

ಚಿತ್ರಕೂಟವು ವನವಾಸದಲ್ಲಿ ರಾಮ ಮುಂತಾದವರ ವಾಸಸ್ಥಾನವಾಗಿತ್ತು ಎಂಬುದು ಎಲ್ಲರಿಗೂ ತಿಳಿದೇ ಇದೆ. ಅಲ್ಲಿ ರಾಮನು ಮಲಗಿದ ಸ್ಥಳ, ರಾಮ ಮುಂತಾದವರ ಪಾದಚಿಹ್ನೆಗಳನ್ನು ಹೊಂದಿರುವ ಸ್ಫಟಿಕ ಶಿಲೆ ಮುಂತಾದವುಗಳಿವೆ. ಜಾನಕೀಕುಂಡ(ಚಿತ್ರ-೧)ಕ್ಕೆ ಹೋಗಲು ಇರುವ ದಾರಿಯೇ ಹವನವೀಥಿ. ಅಲ್ಲಿ ಸೀತೆಯು ದಿನವೂ ಸ್ನಾನ ಮುಗಿಸಿದ ಮೇಲೆ ಹೋಮ ಹವನಗಳನ್ನು ನಡೆಸುತ್ತಿದ್ದಳೆಂಬ ಪ್ರತೀತಿ ಇದೆ. ಇಲ್ಲಿ ದಿನವೂ ರಾಮಾಯಣ ಪಾರಾಯಣವು ಈಗಲೂ ದಿನವೂ ನಡೆಯುತ್ತದೆ ಎಂದುದು ವಿಶೇಷ.

ಚಿತ್ರಕೂಟದ ಸುತ್ತಲೂ ಕಾಮಾಖ್ಯ ಪರ್ವತಶ್ರೇಣಿಯಿದೆ. ಇಲ್ಲಿನ ಗುಹೆಯಲ್ಲಿ ಸೀತಾಕುಂಡವಿದೆ. ಅಲ್ಲಿ ದಿನವೂ ಸೀತೆಯು ದಿನವೂ ಸ್ನಾನ ಮಾಡುತಿದ್ದಳೆಂಬ ಕಥೆ ಕೇಳಿಬರುತ್ತದೆ. ಗೋದಾವರೀ ಜಲಧಾರೆ ಇಲ್ಲಿ ಕಾಣಲು ಸಿಗುತ್ತದೆ. ಆಶ್ಚರ್ಯವೆಂದರೆ ಗುಹೆಯನ್ನು ಪ್ರವೇಶಿಸಿದ ಈ ಜಲಧಾರೆ ಮುಂದೆ ಎಲ್ಲಿ ಹೋಗುತ್ತದೆ ಎಂಬ ವಿಷಯ ಯಾರಿಗೂ ತಿಳಿಯದು !

ಇಲ್ಲಿಂದ ಮುಂದೆ ೬೫೦ ಮೆಟ್ಟಿಲುಗಳನ್ನು ಏರಿದರೆ ಹನುಮಧಾರಾ (ಚಿತ್ರ-೨) ಇದೆ. ಅಲ್ಲಿ ಹನುಮಂತನ ಮೂರ್ತಿ ಕಾಣಸಿಗುತ್ತದೆ. ಲಂಕೆಯನ್ನು ಸುಟ್ಟು ಬಂದ ಹನುಮಂತನ ಶರೀರದ ತಾಪವನ್ನು ಹೋಗಲಾಡಿಸಲು ರಾಮನು ಬಾಣಪ್ರಯೋಗದಿಂದ ಜಲಧಾರೆಯನ್ನು ಉಂಟುಮಾಡಿದನೆಂಬ ಕಥೆ ಇದೆ. ಹನುಮಂತನ ಮೂರ್ತಿಯ ಮುಂದೆ ಬೆಟ್ಟದಿಂದ ಜಲಧಾರೆಯೊಂದು ಬೀಳುತ್ತದೆ. ಇಲ್ಲಿಯೂ ಈ ಜಲಧಾರೆ ಮುಂದೆ ಎಲ್ಲಿ ಹೋಗುತ್ತದೆಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ.

ಸೀತೆಯನ್ನು ಅಪಹರಿಸಿದ ರಾವಣನು ಅವಳನ್ನು ಲಂಕೆಯ ಅಶೋಕವನದಲ್ಲಿ ತಂದಿಟ್ಟನೆಂಬ ಕಥೆ ನಮಗೆ ತಿಳಿಯದ್ದೇನಲ್ಲ. ಈ ಸ್ಥಳ ಶ್ರೀಲಂಕಾದಲ್ಲಿದೆ. ಆ ಜಾಗದಲ್ಲೀಗ ರಾಮ, ಲಕ್ಷ್ಮಣ, ಸೀತೆ, ಆಂಜನೇಯರ ಪ್ರತಿಮೆಗಳು ಕಾಣಸಿಗುತ್ತವೆ(ಚಿತ್ರ-೩). ಆಶೋಕ ವೃಕ್ಷವಾದರೋ ಈಗ ಅಲ್ಲಿಲ್ಲ. ಅದು ಕಾಲದ ಮಹಿಮೆಯಿಂದ ನಶಿಸಿಹೋಯಿತು ಇನ್ನುತ್ತಾರೆ ಸ್ಥಳೀಯರು.

ಆದರೆ ನೂರಾರು ವರ್ಷಗಳ ಹಿಂದೆ ಹುಟ್ಟಿದ ಮರವೊಂದು ಅಲ್ಲಿ ರಾರಾಜಿಸುತ್ತಿದೆ. ಆದರೆ, ಆ ಪ್ರದೇಶವು ಶಿಲೆಗಳಿಂದ ಆವೃತವಾದ ಕಾರಣ ತಕ್ಷಣಕ್ಕೆ ಗೋಚರವಾಗುವುದಿಲ್ಲ.

ಇಲ್ಲಿಯೇ ಸೀತಾಝರಿ(ಚಿತ್ರ-೪) ಹರಿಯುತ್ತದೆ. ಅಶೋಕವನದಲ್ಲಿದ್ದ ಸೀತೆಯು ಇಲ್ಲಿ ಸ್ನಾನ ಮಾಡುತಿದ್ದಳು ಎಂಬ ಪ್ರತೀತಿ ಇದೆ. ಬೆಟ್ಟದಿಂದ ಆವೃತವಾದ ಈ ಸೀತಾಝರಿ ಕುಂಡಕ್ಕೆ ನೀರು ಎಲ್ಲಿಂದ ಬರುತ್ತದೆ, ಕುಂಡದಿಂದ ನೀರು ಎಲ್ಲಿಗೆ ಹೋಗುತ್ತದೆ ಎಂಬುದು ಯಾರಿಗೂ ತಿಳಿಯದು. ಆದರೆ, ಈ ಕುಂಡದಲ್ಲಿ ಇಡೀ ವರ್ಷ ನೀರಿರುತ್ತದೆ. ಚಿತ್ರಕೂಟದ ಜಾನಕೀಕುಂಡದಲ್ಲಿ ಕಾನುವ ವೈಚಿತ್ರ್ಯ ಇಲ್ಲಿಯೂ ಕಂಡುಬರುವುದು ಆಶ್ಚರ್ಯವನ್ನು ಉಂಟುಮಾಡುವುದಿಲ್ಲವೇ ?

ಅಶೋಕವನದಲ್ಲಿ ಒಂದು ದೊಡ್ಡ ಹೆಜ್ಜೆ ಗುರುತು ಕಾಣುತ್ತದೆ(ಚಿತ್ರ-೫). ಹನುಮಂತನು ಇಲ್ಲಿ ಸೀತೆಯೆದುರು ಯಾವ ಮಹಾಕಾರವನ್ನು ತಾಳಿದನೋ ಆಗ ಉಂಟಾದ ಹೆಜ್ಜೆಗುರುತಿದು ಎಂದು ಸ್ಥಳೀಯರು ಹೇಳುತ್ತಾರೆ. ಕಪಿಯ ಹೆಜ್ಜೆಗುರುತನ್ನೇ ಇದು ಹೋಲುತ್ತದೆ. ಪುರಾತತ್ವ ವಿಭಾಗದವರು - ಇದು ೬,೦೦೦ ವರ್ಷಗಳಿಗಿಂತಲೂ ಹಳೆಯದು ಎಂದು ಹೇಳುತ್ತಾರೆ.

ಅಶೋಕವನದ ಹತ್ತಿರದಲ್ಲಿಯೇ ಚಿನ್ಮಯ ಮಂದಿರವಿದೆ. ಅಲ್ಲಿಂದ ಕಾಣುವ ಪರ್ವತ ಶ್ರೇಣಿಯು ಮೇಲ್ಮುಖವಾಗಿ ಮಲಗಿರುವ ಹನುಮಂತನನ್ನೇ ಹೋಲುತ್ತದೆ.(ಚಿತ್ರ-೬)

ಈ ಬೆಟ್ಟದ ಮಣ್ಣಿನ ಬಣ್ಣ ಕೆಂಪು. ಆದರೆ ಅಶೋಕವನದ ಕಡೆಗಿರುವ ಪರ್ವತಭಾಗದ ಮಣ್ಣಿನ ಬಣ್ಣ ಕಪ್ಪು(ಚಿತ್ರ-೭). ಹನುಮಂತನು ಅಶೋಕವನವನ್ನು ಸುಟ್ಟಿದ್ದರಿಂದ ಇದರ ಬಣ್ಣ ಕಪ್ಪಗಿದೆ ಎಂದು ಹೇಳಲಾಗುತ್ತದೆ. ಈ ಬೆಟ್ಟದ ಪರಿಸರದಲ್ಲಿ ಇರುವ ಶಿಲೆಗಳೂ ಸುಟ್ಟ ಹಾಗೇ ಕಾಣುತ್ತವೆ. ಸ್ಥಳೀಯರು - ಈ ಪರಿಸರದಲ್ಲಿ ಇತ್ತೀಚೆಗೆ ಕಾಡ್ಗಿಚ್ಚು ಬಂದುದನ್ನು ನಾವು ಕಂಡಿಲ್ಲ, ಪೂವಿಕರು ಹೇಳುವುದನ್ನೂ ಕೇಳಿಲ್ಲ ಎಂದು ಹೇಳುತ್ತಾರೆ.

ಈ ಪರಿಸರದಲ್ಲಿರುವ ಮಂಗಗಳ ಮೈ ಬೂದುಬಣ್ಣದ್ದಾಗಿದೆ. ಆದರೆ ಅವುಗಳ ಬಾಲ ಮಾತ್ರ ಕಪ್ಪು(ಚಿತ್ರ-೮). ಅಂದರೆ, ಬಾಲ ಸುಟ್ಟ ಹನುಮಂತನನ್ನೇ ಅವು ಹೋಲುತ್ತವೆ. ಹತ್ತಿರದಿಂದ ನೋಡಿದಾಗ ಅವುಗಳ ಕಿವಿಯೂ, ತುಟಿಯೂ ಕಪ್ಪೆಂದು ತಿಳಿಯುತ್ತದೆ.

ಹನುಮಂತನು ಹಿಮಾಲಯದಿಂದ ಸಂಜೀವಿನೀ ಪರ್ವತವನ್ನು ತಂದನೆಂಬ ಕಥೆ ಪ್ರಸಿದ್ಧವಾದುದು. ಅದರ ಒಂದು ಭಾಗ ಇಲ್ಲಿ ಕಾಣುತ್ತದೆ. ವಿಮಾನ ಅಥವಾ ಹೆಲಿಕಾಫ್ಟರ್‌ದಿಂದ ನೋಡಿದಾಗ ತಿಳಿಯುವ ವಿಷಯವೆಂದರೆ - ಇಂತಹ ಪರ್ವತ ರಚನೆ ಶ್ರೀಲಂಕೆಯಲ್ಲಿ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ.

ಈ ಪರಿಸರದಲ್ಲಿ ವಾಸ ಮಾಡುವ ಜನರು ರೋಗ ಚಿಕಿತ್ಸೆಗಾಗಿ ತರುಲತೆಗಳನ್ನೂ, ಬೇರು-ಎಲೆಗಳನ್ನೂ ಇಲ್ಲಿಂದಲೇ ಹೆಚ್ಚಾಗಿ ತೆಗೆದುಕೊಂಡು ಹೋಗುತ್ತಾರೆಂದು ಇಲ್ಲಿಗೆ ಹೋದ ಎಲ್ಲರೂ ತಿಳಿಯಬಹುದು. ಶ್ರೀಲಂಕಾದಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದ ಹರಿಂದರ್ ಸಿಖ್(ಚಿತ್ರ-೯)ರವರು ಹೀಗೆ ಹೇಳುತ್ತಾರೆ - ಈ ಸುಮೇರು ಪರ್ವತದಲ್ಲಿರುವ ಶೇ.೬೦ರಷ್ಟು ಮರಗಳು ಔಷಧೀಯ ಗುಣಗಳನ್ನು ಹೊಂದಿವೆ. ಇಂತಹ ಮರಗಳು ಹಿಮಾಲಯದಲ್ಲಿ ಮಾತ್ರ ಕಾಣಸಿಗುತ್ತವೆ. ಹೃದಯ, ಚರ್ಮ, ಮೂಳೆ, ಅಲರ್ಜಿಗೆ ಸಂಬಂಧಪಟ್ಟ ರೋಗಗಳ ಔಷಧಿಗೆ ಇಲ್ಲಿನ ಬೇರುಗಳು ವಿಶೇಷವಾಗಿ ಉಪಕಾರ ಮಾಡುತ್ತವೆ. ಈ ಪರ್ವತದಲ್ಲಿ ಸುಮೇರು ಪರ್ವತವನ್ನು ಹೊತ್ತ ಆಂಜನೇಯನ ಪ್ರತಿಮೆಯೂ ಇದೆ. ಇದು ಹೆಚ್ಚು ಜನರಿಗೆ ತಿಳಿದಿಲ್ಲ. ರಾವಣನ ಇರುವಿಕೆಯ ಬಗೆಗೆ ಸ್ಥಳಪುರಾಣಗಳೂ ಕೇಳಿಬರುತ್ತವೆ.

ರಾಮಾಯಣದ ಅಸ್ತಿತ್ವವನ್ನು ಪ್ರಮಾಣೀಕರಿಸುವ, ನಿರಾಕರಿಸಲು ಅಸಾಧ್ಯವಾದ ಆಧಾರಗಳು(ದಾಖಲೆಗಳು) ಸಿಗುತ್ತಿರುವುದು ಅತ್ಯಂತ ಸೌಭಾಗ್ಯವೇ ಸರಿ.

ಕಾಶ್ಮೀರದ ತಾಲಿಬಾನೀಕರಣ
ಲೆಫ್ಟಿನೆಂಟ್ ಕರ್ನಲ್ ಎಸ್. ಕೆ. ಸಿನ್ಹಾರವರು ಜಮ್ಮು-ಕಾಶ್ಮೀರದ ಮಾಜಿ ರಾಜ್ಯಪಾಲರು(೨೦೦೩-ಮೇ ೨೦೦೮). ಅವರ ಕಾಲದಲ್ಲೇ ಅಮರನಾಥ ಪ್ರವಾಸಿಗರಿಗೆ ತಾತ್ಕಾಲಿಕ ವಸತಿಯನ್ನು ಕಲ್ಪಿಸುವ ಯೋಜನೆ ರೂಪುಗೊಂಡಿತ್ತು. ದಿ ವೀಕ್ನಲ್ಲಿ ಪ್ರಕಟವಾದ ಅವರ ಸಂದರ್ಶನದ ಆಯ್ದ ಭಾಗ ಇಲ್ಲಿದೆ -

* ನೀವೇಕೆ ಅಮರನಾಥ ಯಾತ್ರೆಯ ಅವಧಿಯನ್ನು ವಿಸ್ತರಸಿದಿರಿ ?
೨೦೦೩ರ ವರೆಗೂ ಯಾತ್ರೆ ಒಂದು ತಿಂಗಳಿನದೇ ಆಗಿತ್ತು. ೨೦೦೪ರಲ್ಲಿ ಹಿಂದೂ ಪಂಚಾಂಗದಂತೆ ಆ ವರ್ಷ ಮಲಮಾಸವಿತ್ತು. ಅಂದರೆ ಎರಡು ಶ್ರಾವಣಗಳಿದ್ದುವು. ಆದ್ದರಿಂದ, ಶ್ರಾವಣಮಾಸದಲ್ಲಿ ನಡೆಯುವ ಈ ಯಾತ್ರ್ರೆಯ ಅವಧಿಯನ್ನು ವಿಸ್ತರಿಸಿದುದು ಸಹಜವೇ ಆಗಿತ್ತು. ಮತ್ತು ಸಂಘಟಕರಿಗೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಯಾತ್ರಿಕರನ್ನು ವ್ಯವಸ್ಥಿತವಾಗಿ ದರ್ಶನ ಪಡೆಯುವಂತೆ ಮಾಡಲು ಹೆಚ್ಚಿನ ಅವಧಿ ಸಹಕಾರಿಯಾಗುತ್ತದೆ. ನಿತಿಷ್ ಸೇನ್ ಗುಪ್ತಾ ಕಮಿಟಿ(೧೯೯೬) ಮತ್ತು ಲೆಫ್ಟಿನೆಂಟ್ ಜನರಲ್ ಜಿ.ಆರ್.ಮುಖರ್ಜಿ ಕಮಿಟಿ(೨೦೦೦)ಗಳೂ ಇದನ್ನೇ ಬಯಸಿದ್ದವು.

* ಕರಣ್ ಸಿಂಗ್‌ರವರು ರಾಜ್ಯಪಾಲರಾದ ಎನ್.ಎನ್.ವೋಹ್ರಾರವರ ಪದಚ್ಯತಿಯನ್ನು ಬಯಸುತ್ತಾರೆ. ನೀವಿದನ್ನು ಬಯಸುವಿರಾ ?
ವೋಹ್ರಾ ನನ್ನ ಗೆಳೆಯ. ಆದರೆ, ನಿಜಸಂಗತಿಯೆಂದರೆ ಈ ಎಲ್ಲ ಸಮಸ್ಯೆಗಳು ಶುರುವಾಗಿದ್ದು ಅವರ ಅಧಿಕಾರಾವಧಿಯಲ್ಲೇ. ಭೂಮಿಯನ್ನು ವಾಪಸ್ ಪಡೆದದ್ದೂ ಅವರೇ. ಇದು ವಿಶಿಷ್ಟವಾದ ಭೂದಾನವೇನೂ ಆಗಿರಲಿಲ್ಲ. ಅನೇಕರು ಕಾಶ್ಮೀರದ ಅರಣ್ಯಪ್ರದೇಶವನ್ನು ತಮ್ಮದಾಗಿಸಿಕೊಂಡಿದ್ದಾರೆ. ಮೊಬೈಲ್ ಟವರ್‌ಗಳನ್ನು ಹೂಳಲು ರಿಲೆಯನ್ಸ್‌ಗೆ ಭೂಮಿ ನೀಡಲಾಗಿದೆ. ಆದರೆ, ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕರಿಗೆ ಹಿಂದೂಗಳು ತಮ್ಮ ಧಾರ್ಮಿಕ ಆಚರಣೆಗಳನ್ನು ಅನುಸರಿಸಲು ಭೂಮಿ ನೀಡಬಾರದೆಂದು ಬೊಬ್ಬೆ ಹಾಕುತ್ತಾರೆ. ಅನೇಕ ಹಜ್ ಕಾಂಪ್ಲೆಕ್ಸ್‌ಗಳು ತಲೆ ಎತ್ತಿವೆ. ಆದರೆ, ಅಮರನಾಥದ ಯಾತ್ರ್ರೆಯನ್ನು ಸುಗಮಗೊಳಿಸಲು ವ್ಯವಸ್ಥೆಗಳನ್ನು ಸೃಷ್ಟಿಸಬಾರದೇಕೆ ?

* ಕಾಶ್ಮೀರೀ ಮುಸ್ಲಿಮರನ್ನು ತೀವ್ರವಾದಿಗಳೆಂದು ಚಿತ್ರಿಸಲಾಗಿತಿರುವುದೇಕೆ ?
ಈಗ ಕಾಶ್ಮೀರದಲ್ಲಿ ಧಾರ್ಮಿಕ ಅಸಹಿಷ್ಣುತೆ ಇದೆ. ಕಾಶ್ಮೀರಿ ಪಂಡಿತರ ಸಾಮೂಹಿಕ ಮಾರಣಹೋಮವಾದಾಗ ಯಾರೂ ಮಾತನಾಡಲಿಲ್ಲ. ಪ್ರತ್ಯೇಕತಾವಾದಿಗಳಿಂದ ಕಾಶ್ಮೀರದ ತಾಲಿಬಾನೀಕರಣವಾಗಿದೆ. ಸೆಕ್ಯುಲರ್‌ವಾದಿಗಳು ಸಯ್ಯದ್ ಆಲಿ ಶಾ ಗಿಲಾನಿಯ ಕುಟಿಲ ರಾಜಕೀಯವನ್ನು ಎಂದೂ ಟೀಕಿಸುವುದಿಲ್ಲ.

* ಹುರಿಯತ್ ನಾಯಕರನ್ನು ದೆಹಲಿಗೆ ಮಾತುಕತೆಗಾಗಿ ಆಹ್ವಾನಿಸುವುದರಿಂದ ಪರಿಸ್ಥಿತಿ ತಿಳಿಯಾದೀತೇ ?
ಹುರಿಯತ್‌ನಲ್ಲಿ ಎರಡು ಗುಂಪುಗಳಿವೆ - ಮಧ್ಯಸ್ಥರೆಂದು ತಮ್ಮನ್ನು ತಾವು ಕರೆದುಕೊಳ್ಳುವವರು ಮತ್ತು ತೀವ್ರಗಾಮಿಗಳೆಂದು ತಮ್ಮನ್ನು ತಾವು ಕರೆದುಕೊಳ್ಳುವವರು. ಒಟ್ಟಾಗಿ ಅವರೆಲ್ಲಾ ಕೋಮುವಾದಿಗಳು ಮತ್ತು ರಾಷ್ಟ್ರವಿರೋಧಿಗಳು. ವಿದೇಶೀ ಪ್ರವಾಸಿಗರು ಅಮರನಾಥ ಯಾತ್ರೆಗೆ ಬಂದರೆ ಅವರಿಗೆ ಯಾವುದೇ ಆಕ್ಷೇಪವಿಲ್ಲ. ಭಾರತೀಯ ಹಿಂದೂಗಳು ಅಲ್ಲಿಗೆ ಭೇಟಿಕೊಟ್ಟರೆ ಅವರಿಗೆ ಅದೇನೋ ಕಸಿವಿಸಿ.

* ಪಿಡಿಪಿ ಮೃದುವಾಗುವುದೇ ?
ಪಿಡಿಪಿಯ ಮುಫ್ತಿ ಮೊಹಮ್ಮದ್ ಸಯೀದ್ ರಾಷ್ಟ್ರವಿರೋಧಿ ಮತ್ತು ಕೋಮುವಾದಿ. ಅವರು ಮುಖ್ಯಮಂತ್ರಿಯಾಗುವ ಮೊದಲೂ ಅವರ ಪ್ರಸಿದ್ಧಿ ಸಂಶಯಾತ್ಮಕವಾಗಿತ್ತು. ೧೯೮೦ರಲ್ಲಿ ಕಾಶ್ಮೀರದಲ್ಲಿ ಹಿಂದೂ ದೇವಾಲಯಗಳ ನಾಶವಾದಾಗ ಅವರೇನೂ ಮಾಡಲಿಲ್ಲ. ಅವರ ಮಗಳ ಅಪಹರಣವೂ ಒಂದು ನಾಟಕವೇ.

* ಪಿಡಿಪಿಯೇ ಈ ಭೂಮಿ ಹಸ್ತಾಂತರಕ್ಕೆ ಒಪ್ಪಿಗೆ ಕೊಟ್ಟಿತ್ತು. ಇದು ವಿವಾದವಾಗುವ ಲಕ್ಷಣಗಳು ಕಂಡುಬಂದಾಗ ಅದು ಸೆಕ್ಯುಲರ್ ಮುಖವಾಡ ಧರಿಸಿತೇ ?
ಪಿಡಿಪಿ ರಾಷ್ಟ್ರವಿರೋಧಿ ಮತ್ತು ಪ್ರತ್ಯೇಕತಾವಾದಿ ಸಂಘಟನೆ. ಅದು ಯಾವತ್ತೂ ಮೋಸದ ಆಟವನ್ನೇ ಆಡುತ್ತದೆ. ಮುಫ್ತಿಯವರು ಎಂತಹವರೆಂದರೆ - ಇವತ್ತಿಗೂ ಭಯೋತ್ಪಾದಕರ ಮನೆಯವರಿಗೆ ಪೆನ್ಶನ್ ನೀಡುವ ಏಕೈಕ ರಾಷ್ಟ್ರವೆಂದರೆ ಭಾರತ.

* ಕಾಶ್ಮೀರದ ವಿವಾದದ ಬಗೆಗೆ ನೆಹರುರವರ ಧೋರಣೆಗಳ ತಳಹದಿ ಸಡಿಲಗೊಳ್ಳುತ್ತಿದೆಯೇ ?
ನೆಹರು ಒಳ್ಳೆಯ ವ್ಯಕ್ತಿ. ಆದರೆ, ಅವರ ಅನೇಕ ಆಲೋಚನೆಗಳು ಸೋಲನ್ನಪ್ಪಿದವು. ಮುಜಫ್ಫರಾಬಾರ್‌ಅನ್ನು ಮೂರು ಬಾರಿ ಆಕ್ರಮಿಸುವ ಸದವಕಾಶ ಲಭಿಸಿತ್ತು. ನೆಹರೂರವರು ನಮ್ಮನ್ನು ತಡೆದರು ಮತ್ತು ಹಿಂಬರುವಂತೆ ಆದೇಶಿಸಿದರು. ಸೈನದಲ್ಲಿನ ಮೂಗುತೂರಿಸುವಿಕೆ ಮತ್ತು ರಾಜನೀತಿಯ ಹೆಜ್ಜೆಗಳು ಸೋಲನ್ನಪ್ಪಿದವು.

ತುಷ್ಟೀಕರಣ ಯಾವತ್ತೂ ರಾಷ್ಟ್ರದ ಹಿತಕಾರಿಯಲ್ಲ

ಕಾಶ್ಮೀರದಲ್ಲಿ ಮೊಘಲ್ ರೋಡ್‌ಅನ್ನು ನಿರ್ಮಿಸಲು ೧೦,೦೦೦ ವನ್ಯಮರಗಳನ್ನು ಕಡಿದುಹಾಕಲಾಗುತ್ತದೆ. ಆಗ ಯಾರೂ ಚಕಾರವೆತ್ತುವುದಿಲ್ಲ. ಮೊಬೈಲ್ ಟವರ್‌ಗಳನ್ನು ಹೂಳಲು ಕಾಶ್ಮೀರಕಣಿವೆಯಲ್ಲಿ ಎಕರೆಗಟ್ಟಲೇ ಭೂಮಿ ನೀಡಲಾಗುತ್ತದೆ. ಯಾರೂ ಕಿರುಚುವುದಿಲ್ಲ. ಕಾಶ್ಮೀರ ಕಣಿವೆಯಲ್ಲಿ ನೂರಾರು ಎಕರೆಗಟ್ಟಲೇ ಭೂಮಿ ಕುಡಿಯುವ ನೀರು ಮತ್ತು ಚರಂಡಿಗಾಗಿ ನಿಗದಿಯಾಗಿದೆ. ಯಾರೂ ತಡೆಯೊಡ್ಡುವುದಿಲ್ಲ. ಆದರೆ ೪೦ ಹೆಕ್ಟೇರ್‌ಗಳ ಜನವಸತಿರಹಿತ ಭೂಮಿಯನ್ನು ಅಮರನಾಥ ಯಾತ್ರಿಕರಿಗೆ ಉತ್ತಮ ವ್ಯವಸ್ಥೆ ಒದಗಿಸಲು ಶ್ರೀ ಅಮರನಾಥ ಶ್ರೈನ್ ಬೋರ್ಡ್‌ಗೆ ನೀಡಿದಾಗ ಆಕಾಶ-ಭೂಮಿ ಒಂದಾಗುವಂತೆ ಕಿರುಚಾಟ, ವಿರೋಧಗಳು ಶುರುವಾಗುತ್ತವೆ. ಏಕೆ ? ಏಕೆಂದರೆ ಕಾಶ್ಮೀರ ಕಣಿವೆಯಲ್ಲಿ ಶ್ರೀ ಅಮರನಾಥ ಶ್ರೈನ್ ಬೋರ್ಡ್ ಹಿಂದೂಗಳಿಗೆ ಒಳ್ಳೆಯದನ್ನು ಮಾಡುತ್ತಿದೆ. ಇದು ಅತ್ಯಂತ ಸರಳ. ಚೆನ್ನಾಗಿ ರಾಜಕೀಯ ಮಾಡುವ ರಾಜಕಾರಿಣಿಗಳು, ವಿಧಿವಿಧಾತರು ಮತ್ತು ಆಡಳಿತ ನಡೆಸುವವರು ಇದು ಧರ್ಮಕ್ಕೆ ಸಂಬಂಧಿಸದ ವಿಷಯವೆಂದು ಹೇಳಬಹುದು. ಆದರೆ, ಈ ವಿಷಯ ಸಂಪೂರ್ಣವಾಗ ಧರ್ಮಕ್ಕೆ ಸಂಬಂಧಿಸಿದುದೇ. ಇದು ಕಾಶ್ಮೀರ ಕಣಿವೆಯನ್ನು ಸಂಪೂರ್ಣವಾಗಿ ಇಸ್ಲಾಮೀಕರಣಗೊಳಿಸುವ ಕೋಮುಶಕ್ತಿಗಳ ಹುನ್ನಾರ. ಈ ಕೆಲಸವನ್ನವರು ವ್ಯವಸ್ಥಿತವಾಗಿ ಪ್ರತಿಯೊಂದು ಹಿಂದೂ ಸಂಕೇತವನ್ನು ಮತ್ತು ಬೇರೆ ನಿಷ್ಠೆಗಳನ್ನು ನಾಶಗೊಳಿಸುವ ಮೂಲಕ ಮಾಡುತ್ತಿದ್ದಾರೆ. ಇವತ್ತು ಈ ಕೋಮುಶಕ್ತಿಗಳು ಯಾತ್ರೆಯ ವ್ಯವಸ್ಥೆಗಳನ್ನು ಒದಗಿಸಲು ಅಡ್ಡಿ ಉಂಟುಮಾಡುತ್ತಿದ್ದಾರೆ. ನಾಳೆ ಇವರು ಇದನ್ನು ಮೀರಿ ಯಾತ್ರೆಯನ್ನೇ ರದ್ದುಪಡಿಸಬೇಕೆಂದು ಗಲಾಟೆ ಮಾಡಬಹುದು. ಈ ಭೂಮಿಯ ಹಸ್ತಾಮತರ ವಿವಾದವು ಈಗಾಗಲೇ ಗುಲಾಂ ನಬಿ ಆಜಾದರ ಸರ್ಕಾರವನ್ನು ಬಲಿ ತೆಗೆದುಕೊಂಡಿದೆ ಮತ್ತು ಈ ರಾಜ್ಯದ ಅರ್ಥವ್ಯವಸ್ಥೆಯನ್ನು ಹಾನಿಗೊಳಿಸುವ ಹಂತದಲ್ಲಿದೆ. ಈ ಭೀತಿಯ ವಾತಾವರಣವು ಈಗಾಗಲೇ ಕಣಿವೆಗೆ ಭೇಟಿಮಾಡುವ ಯಾತ್ರಿಕರ ಸಂಖ್ಯೆಯನ್ನು ಇಳಿಮುಖವಾಗಿಸಿದೆ. ಮತ್ತು ಜಮ್ಮು ಪ್ರಾಂತದ ಭೂಮಿ ನೀಡುವಿಕೆಯ ಪರವಾದ ಗುಂಪು ನಡೆಸಿರುವ ದಾಳಿಗಳು ಮತ್ತು ಬಂದ್‌ಗಳು ಆ ಪ್ರದೇಶದ ಜೀವನವನ್ನು ನಿಶ್ಶಕ್ತಗೊಳಿಸಿದೆ. ಈಗಿನವರೆಗೂ ಕಣಿವೆಯಲ್ಲಿ ಅದು ಕೋಮುಶಕ್ತಿಗಳ ಸೋಲು-ಗೆಲುವಿನ ಹಾವು-ಏಣಿ ಆಟದಂತಾಗಿದೆ.

ಭೂಮಿಯನ್ನು ನೀಡಬಾರದೆನ್ನುವ ಸ್ಥಳೀಯ ಕಾಶ್ಮೀರಿಗಳ ವಾದವನ್ನಿಲ್ಲಿ ಸ್ವಲ್ಪ ಕೇಳೋಣ :

೧. ಯಾತ್ರಿಕರಿಂದ ಬಳಸಲ್ಪಡುವ ಈ ಭೂಮಿಯು ಆ ಪ್ರದೇಶದ ಪ್ರಕೃತಿಯು ಮೇಲೆ ಅಡ್ಡಪರಿಣಾಮ ಬೀರಬಹುದು.

೮೯ ಕಿ.ಮೀ. ಉದ್ದದ ಮೊಘಲ್ ರೋಡ್‌ಅನ್ನು ನಿರ್ಮಿಸಲು ೧೦,೦೦೦ ವನ್ಯಮರಗಳನ್ನು ಕಡಿಯಲು ಇದೇ ಸರ್ಕಾರ ಆದೇಶಿಸಿದಾಗ ಈ ಮರ-ತಬ್ಬುವ ಪರತಬ್ಬುವ ಪರಿಸರವಾದಿಗಳು ಎಲ್ಲಿದ್ದರೆಂದು ಸೋಜಿಗವಾಗುತ್ತದೆ.

೪೦ ಹೆಕ್ಟೇರ್‌ಗಳ ಭೂಮಿಯು ತಾತ್ಕಾಲಿಕ ವಸತಿಗಳನ್ನು ನಿರ್ಮಿಸಲು ಮತ್ತು ಯಾತ್ರಿಕರ ರಾತ್ರಿಕಾಲೀನ ವ್ಯವಸ್ಥೆಗಾಗಿ ಬಳಸಲ್ಪಡುತಿತ್ತು. ಪ್ರತಿದಿನದ ತ್ಯಾಜ್ಯವನ್ನು ಸರಿಯಾಗಿ ನಿರ್ವಹಿಸಿದರೆ ಅದು ಗೊಬ್ಬರವಾಗಿ ಮಾರ್ಪಟ್ಟು ಉಪಯೋಗಕ್ಕೂ ಬರುತ್ತಿತ್ತು. ಆದರೆ, ಸಾಮಾನ್ಯಜ್ಞಾನವಿಲ್ಲದಿರುವ, ಜನರನ್ನು ಮನೆಬಿಟ್ಟು ಬೀದಿಗೆ ಬರುವಂತೆ ಮಾಡುವ ಈ ರಾಜಕಾರಿಣಿಗಳ ಜೊತೆಗೆ ಯಾರು ವಾದ ಮಾಡುತ್ತಾರೆ ?

೨. ಹೊರರಾಜ್ಯದ ಹಿಂದುಗಳನ್ನು ಇಲ್ಲಿ ಉಳಿದುಕೊಳ್ಳುವಂತೆ ಮಾಡುವ ಮೂಲಕ ಜನಸಂಖ್ಯೆಯನ್ನು ಬದಲಾಯಿಸುವ ಸರ್ಕಾರದ ಹುನ್ನಾರ ಇದು. ಯಾರು ಈ ಮಾತನ್ನು ಹೇಳುತ್ತಿದ್ದಾರೆಂಬುದನ್ನು ಗಮನಿಸಿ. ೧೮ ವರ್ಷಗಳ ಹಿಂದಿನ ಇತಿಹಾಸವನ್ನು ಒಮ್ಮೆ ತಿರುವಿ ಹಾಕಿದರೆ ಜನಸಂಖ್ಯೆಯನ್ನು ಯಾರು ಬದಲಾಯಿಸಿದರೆಂದು ತಿಳಿದೀತು. ಇಸ್ಲಾಮೀ ಭಯೋತ್ಪಾದಕರು ಈ ಕಣಿವೆಯ ಜನಸಂಖ್ಯೆಯ ಹೆಚ್ಚಿನ ಭಾಗವಾದ ಹಿಂದೂಗಳನ್ನು ಧಾರ್ಮಿಕ ಮಾರಣಹೋಮದ ಮೂಲಕ ಓಡಿಸಿದರು. ನಾವು ಜನಸಂಖ್ಯೆಯನ್ನು ಬದಲಾಯಿಸಲು ಬಿಡಲಾರೆವು ಎಂದು ಹೇಳುವ ಈ ಮಹಾನುಭಾವರು ಹಿಂದೂಗಳ ಮಾರಣಹೋಮವಾದಾಗ ಎಲ್ಲಿದ್ದರೆಂದು ಆಶ್ಚರ್ಯವಾಗುತ್ತದೆ.

ಯಾರಿಗಾದರೂ ಕೆಲವು ಪ್ರಶ್ನೆಗಳೇಳುತ್ತವೆ.

ಅ) ಹಿಂದೂಗಳು ಹೆಚ್ಚು ಹೆಚ್ಚು ಸೇರಿ ಕಣಿವೆಯ ಕಣಿವೆಯ ಜನಸಂಖ್ಯೆಯನ್ನು ಬದಲಾಯಿಸಲು ೪೦ ಹೆಕ್ಟೇರ್ ಭೂಮಿ ಸಾಕೇ ?

ಆ) ಜನಸಂಖ್ಯಾ ಹೆಚ್ಚಳದ ವಾದವನ್ನು ಮುಂದಿಡುತ್ತಿರುವ ಈ ಕಣಿವೆಯ ಮುಸ್ಲಿಮರು ಜಮ್ಮು-ಕಾಶ್ಮೀರದ ಹಿಂದೂಗಳಿಗೆ ಕಣಿವೆಯಲ್ಲಿ ಪ್ರವೇಶವಿಲ್ಲ ಎಂದು ಪರೋಕ್ಷವಾಗಿ ಹೇಳುತ್ತಿದ್ದಾರೆಯೇ ?

ಜಮ್ಮು-ಕಾಶ್ಮೀರದ ಪ್ರಜಾಪ್ರತಿನಿಧಿಪತ್ರ ಪಡೆದ ಹಿಂದುವು ಸಾಂವಿಧಾನಿಕವಾಗಿ ಆ ರಾಜ್ಯದ ಯಾವ ಕಡೆ ಬೇಕಾದರೂ ಭೂಮಿಯನ್ನು ಕೊಂಡುಕೊಳ್ಳಬಹುದು. ಹಾಗಾದರೆ ಆ ಜಾಗವು ಅಮರನಾಥದ ಸುತ್ತಲೂ ಆಗಿರಬಾರದೇಕೆ ? ಆ ಹಿಂದೂಗಳು ಆ ಜಾಗದಲ್ಲಿ ಭೂಮಿಯನ್ನು ಹೊಂದಲಾರರೆಂದು ಕಣಿವೆಯ ಮುಸ್ಲಿಮರು ಹೇಳುತ್ತಿರುವರೇ ? ಅವರ ಮಾತಿನ ಅರ್ಥವೇನು ? ಅವರು ಏನನ್ನು ತಿಳಿಸಲು ಬಯಸುತ್ತಿದ್ದಾರೆ ? ಪರಿಸರ ರಕ್ಷಣೆಯ ನೆಪದಲ್ಲಿ ಹಿಂದೂಗಳು ಆ ಜಾಗದಲ್ಲಿ ತಳ ಊರದಂತೆ ತಡೆಯುತ್ತಿರುವರೇ ?

ಕಾಶ್ಮೀರೀ ಮುಸ್ಲಿಮರು ಮಾಡುವ ಇನ್ನೊಂದು ವಾದವೆಂದರೆ ೩೭೦ನೇ ಕಲಮಿನ ಪ್ರಕಾರ ಯಾವುದೇ ಹೊರಗಿನವರಿಗೆ ಜಮ್ಮು-ಕಾಶ್ಮೀರಿನಲ್ಲಿ ಭೂಮಿ ಪಡೆಯುವ ಹಕ್ಕಿಲ್ಲ. ಆದ್ದರಿಂದ, ಶ್ರೈನ್ ಬೋರ್ಡ್‌ಗೆ ಭೂಮಿ ನೀಡಲಾಗದು ಎಂಬುದು ಅವರ ವಾದ. ಅವರ ಈ ವಾದಕ್ಕೆ ಕಾರಣ ಹೊರಗಿನವರಾದ ಜಮ್ಮು-ಕಾಶ್ಮೀರ ರಾಜ್ಯದ ರಾಜ್ಯಪಾಲರು ಆ ಶ್ರೈನ್ ಬೋರ್ಡ್‌ನ ಅದ್ಯಕ್ಷರು.

ಇಲ್ಲಿ ಯಾರೂ ಮೂಕರಲ್ಲ. ಭೂಮಿಯನ್ನು ಹಸ್ತಾಂತರ ಮಾಡುತ್ತಿರುವುದು ಜಮ್ಮು-ಕಾಶ್ಮೀರ ಸರ್ಕಾರವೇ ಹುಟ್ಟುಹಾಕಿರುವ ಜಮ್ಮು-ಕಾಶ್ಮೀರದ ಅಮರನಾಥ ಶ್ರೈನ್ ಬೋರ್ಡ್‌ಗೆ. ಮತ್ತು ಹಸ್ತಾಂತರವಾಗುತ್ತಿರುವುದು ಆ ಬೋರ್ಡ್‌ನ ಚೇರ್‌ಮೆನ್‌ಗಲ್ಲ.

ವಾದದ ಹೊರಪದರನ್ನು ನೋಡಿದ ಬಳಿಕ ಈಗ ಒಳಪದರವನ್ನು ನೋಡೋಣ : ಮುಫ್ತಿ ಮೊಹಮದ್ ಸಯೀದ್ - ಗುಲಾಂ ನಬಿ ಆಜಾದರ ಸಮ್ಮಿಶ್ರ ಸರ್ಕಾರದ ಮೊದಲ ಮೂರು ವರ್ಷಗಳಲ್ಲಿ ಈ ಮೂಲ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿತ್ತು ಮತ್ತು ಹಸಿರು ನಿಶಾನೆ ನೀಡಲಾಯಿತು. ಮುಫ್ತಿ ಮೊಹಮದ್ ಸಯೀದ್‌ರ ಮಂತ್ರಿಮಂಡಲದಲ್ಲಿನ ಅಋಣ್ಯ ಖಾತೆ ಸಚಿವರಾದ ಖಾಜಿ ಮೊಹಮ್ಮದ್ ಅಫ್ಜಲ್ ಮತ್ತು ಕಾನೂನು ಸಚಿವರಾದ ಮುಜಫರ್ ಹುಸೇನ್ ಬೇಗ್‌ರವರೇ ಇದಕ್ಕೆ ಹಸಿರು ನಿಶಾನೆಯನ್ನು ನೀಡಿದವರು. ಆಜಾದ್‌ರವರು ತಮ್ಮ ಮೂರು ವರ್ಷಗಳ ಎರಡನೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮೇಲೆ ಅದಕ್ಕೆ ಕೊನೆಯದಾಗಿ ಹಸಿರು ನಿಶಾನೆ ತೋರಿಸಲಾಯಿತು.

ಮುಫ್ತಿ ಸಯೀದ್ ನೇತೃತ್ವದ ಇದೇ ಪಿಡಿಪಿ ಸರ್ಕಾರಕ್ಕೆ ಯಾವುದೇ ತಕರಾರು ಇರಲಿಲ್ಲ. ಆದರೆ, ಹಿಜ್ಬುಲ್ ಮುಜಾಹಿದ್ದೀನ್ ಮುಂತಾದ ಭಯೋತ್ಪಾದಕ ಸಂಘಟನೆಗಳು ಇದರ ಪರವಾಗಿಲ್ಲವೆಂದು ತಿಳಿದ ಕೂಡಲೇ ಅದೇ ಪಿಡಿಪಿ ಸರ್ಕಾರವು - ಬರುವ ಅಸೆಂಬ್ಲಿ ಚುನಾವಣೆಯಲ್ಲಿ ಮುಸ್ಲಿಮರ ಭಾವನೆಗಳಿಗೆ ಘಾಸಿಯಾದೀತೆಂದು, ಅದರಿಂದ ಅವರ ಓಟುಗಳು ಕೈತಪ್ಪಿಹೋಗಬಹುದೆಂಬ ಭಯದಿಂದ ಹಿಂದೆಗೆಯಿತು.

ಇದು ಚುನಾವಣೆಯ ವರ್ಷವಾದ್ದರಿಂದ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಇತರ ಪ್ರಾದೇಶಿಕ ಪಕ್ಷಗಳು, ಪಿಡಿಪಿಯೊಂದೇ ಇದರ ರಾಜಕೀಯ ಲಾಭವನ್ನು ತೆಗೆದುಕೊಳ್ಳುವುದನ್ನು ನೋಡಿ ಸುಮ್ಮನೆ ಇರಲಾರರು. ಅವರು ಅಖಾಡಾಕ್ಕಿಳಿದರು ಮತ್ತು ಸ್ಥಾನೀಯ ಮುಸ್ಲಿಮರನ್ನು ಮೂರ್ಖರನ್ನಾಗಿಸಿ ಅವರ ಭಾವನೆಗಳನ್ನು ಬಡಿದೆಬ್ಬಿಸಿದರು. ಉಳಿದುದು ಕಾಂಗ್ರೆಸ್. ಚುನಾವಣೆಯ ವರ್ಷದಲ್ಲಿ ಕಾಂಗ್ರೆಸ್ ಇದರ ಲಾಭವನ್ನು ಪಡೆದುಕೊಂಡೇ ತೀರುತ್ತದೆ.

ಆಜಾದ್‌ರು ಇದಕ್ಕಾಗಿ ಸ್ವಲ್ಪವೂ ತಡಮಾಡಲಿಲ್ಲ. ತಮ್ಮ ಮಂತ್ರಿಮಂಡಲದ ನಿರ್ಣಯವನ್ನು ಹಿಂದಕ್ಕೆ ಪಡೆದರು. ಅವರು ಅಲ್ಲಿಗೇ ನಿಲ್ಲಲಿಲ್ಲ. ಇದೂ ಒಂದು ಬಗೆಯ ತುಷ್ಟೀಕರಣವೇ ! ಇದು ನಿಜವಾದ ಕಥೆ.

ಇದು ಮುಫ್ತಿ ಸಯೀದ್‌ರ ವೋಟ್‌ಬ್ಯಾಂಕ್ ಸೆಳೆಯುವ ತಂತ್ರ. ಅವರು ದೇಶದಲ್ಲಿನ ಲಕ್ಷಾಂತರ ಹಿಂದೂಗಳ ಭಾವನೆಗಳೊಂದಿಗೆ ರಾಜಕೀಯ ಚದುರಂಗದಾಟವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಇದು ಅವರ ರಾಜಕೀಯ ಶೈಲಿ.

ಈಗ ನಮಗೆ ನಿಜವಾದ ಕಥೆ ತಿಳಿದಿದೆ. ಆದರೆ ಅಲ್ಲಿಗೆ ಯಾತ್ರೆ ಮಾಡಬಯಸುವ ಹಿಂದೂ ಯಾತ್ರಿಕರ ಗತಿಯೇನು ? ಅವರು ತಮ್ಮ ಧರ್ಮವನ್ನು ಸಂಪೂರ್ಣ ರಕ್ಷಣೆ, ಅಭಿಮಾನ ಮತ್ತು ಗೌರವದಿಂದ ಅನುಸರಿಸಲು ಮೂಲಭೂತ ಹಕ್ಕುಗಳಿಲ್ಲವೇ ?

ಹಿಂದೂಗಳಿಗೆ ಸ್ವಲ್ಪವೂ ನಾಚಿಕೆಯಿಲ್ಲವೇ ? ಅವಮಾನ ಎನಿಸುವುದಿಲ್ಲವೇ ? ೮೦ ಶೇಕಡಾ ಹಿಂದುಗಳೇ ತುಂಬಿರುವ, ಹಿಂದೂಗಳೇ ಬಹುಸಂಖ್ಯಾತರಾಗಿರುವ ಈ ದೇಶದಲ್ಲಿ ಹಿಂದೂಗಳು ಸುಲಭವಾಗಿ ಅಮರನಾಥ ದರ್ಶನ ಮಾಡಲಾರರೇ ? ಅದಕ್ಕಾಗಿ ಒಳ್ಳೆ ವ್ಯವಸ್ಥೆಯನ್ನು ಬಯಸಲಾರರೇ ? ಇಂತಹದು ನಡೆಯುವುದು ಭಾರತದಲ್ಲಿ ಮಾತ್ರ. ಇಲ್ಲಿ ಬಹುಸಂಖ್ಯಾತ ಹಿಂದೂಗಳು ಅಲ್ಪಸಂಖ್ಯಾತರಿಗೋಸ್ಕರ ತ್ಯಾಗ ಮಾಡುತ್ತಾರೆ. ಏಕೆಂದರೆ ಇಲ್ಲಿನ ರಾಜಕಾರಿಣಿಗಳು ಮುಸ್ಲಿಂ ತುಷ್ಟೀಕರಣಕ್ಕೆ ನಿರತರಾಗಿದ್ದಾರೆ. ಅದಕ್ಕಾಗಿ ಹಿಂದೂಗಳು ಬೆಲೆ ತೆರುತ್ತಾರೆ.

ನ್ಯಾಷನಲ್ ಕಾನ್ಫರೆನ್ಸ್ ನಾಯಕರಾದ ಓಮರ್ ಅಬ್ದುಲ್ಲಾ ದೂರದರ್ಶನದ ಚರ್ಚೆಯಲ್ಲಿ ಈ ಬಗೆಗೆ - ಈ ಯಾತ್ರೆಯು ವರ್ಷಗಳಿಂದ ನಡೆಯುತ್ತಿದ್ದು ಈಗೇಕೆ ಭೂಮಿ ಮತ್ತು ಸವಲತ್ತುಗಳು? ಎಂದು ಕೇಳಿದರು. ಅವರ ಮಾತಿನ ಒಳ ಅರ್ಥವೇನು ?

ಆದರೆ, ಹಜ್ ಯಾತ್ರೆಯ ಬಗೆಗೆ ಅವರು ಇಂತಹ ಮಾತುಗಳನ್ನಾಡುವುದನ್ನು ನಾವು ಯಾವತ್ತೂ ಕೇಳಿಲ್ಲ. ಪ್ರತಿ ವರ್ಷ ಕಾಶ್ಮೀರ ಮತ್ತು ಭಾರತ ಮತ್ತು ಉಳಿದ ಕಡೆಗಳಲ್ಲಿನ ಮುಸ್ಲಿಮರಿಗೆ ಹಜ್‌ಗಾಗಿ ಒಳ್ಳೆಯ ಸವಲತ್ತುಗಳು ಮತ್ತು ಸಬ್ಸಿಡಿ ಬೇಕು. ಆದರೆ, ಅಮರನಾಥ ಯಾತ್ರಿಕರಿಗೆ ಒಳ್ಳೆಯ ಸವಲತ್ತುಗಳನ್ನು ನೀಡುವ ವ ವಿಷಯ ಬಂದಾಗ ಮಾತ್ರ ವಿವಾದವಾಗುತ್ತದೆ !

ಮಳೆಯ ಅಬ್ಬರ, ಹಿಮಪಾತ, ಭೂಕುಸಿತ ಮತ್ತು ಪ್ರತಿಕೂಲ ಹವಾಮಾನವು ೧೯೯೬ರಯಾತ್ರೆಯ ಸಮಯದಲ್ಲಿ ೨೫೦ ಯಾತ್ರಿಕರನ್ನು ಬಲಿತೆಗೆದುಕೊಂಡಿತು. ಆದರೆ, ಓಮರ್ ಅಬ್ದುಲ್ಲಾರಿಗೆ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವ ತುರುಸು.

ಕೆಲವರು ಹೀಗೆ ವಾದ ಮಾಡಬಹುದು - ಗಲಾಟೆ ಮಾಡಿದ್ದು ಕಣಿವೆಯ ಮುಸ್ಲಿಮರಲ್ಲ. ಆದರೆ, ರಾಜಕೀಯ ಪಕ್ಷಗಳು ಮತ್ತು ಭಯೋತ್ಪಾದಕ ಸಂಘಟನೆಗಳು ಈ ಭೂಮಿ ಹಸ್ತಾಂತರಕ್ಕೆ ವಿರೋಧ ವ್ಯಕ್ತಪಡಿಸಿದರೆಂದು. ಮತ್ತು ಜನರು ಬೀದಿಗಿಳಿಯುವಂತೆ ಮಾಡಿದ್ದು ಇವರೇ ಎಂದು.

ಈ ವಾದವನ್ನು ನಾನು ಒಪ್ಪಿಬಿಡಬಹುದು. ಆದರೆ ಕಣಿವೆಯ ಜನರು ಮಾಡಿದ ಕೆಲಸಗಳನ್ನು ಅಲ್ಲಗಳೆಯಲಾದೀತೇ ? ಅವರು ಯಾವಾಗಲೂ ಈ ಮೂಲಭೂತ ಶಕ್ತಿಗಳಿಗೆ ಬೆಂಬಲ ನೀಡಲಾರರು. ಮತ್ತು ಅದೇ ಸಮಯಕ್ಕೆ ಸಾಚಾತನವನ್ನು ಸಾಬೀತುಪಡಿಸಲಾರರು.

ಹಿಂದೆ ೧೯೮೯-೯೦ರಲ್ಲಿ ಅವರು ಇದೇ ಕೆಲಸವನ್ನು ಮಾಡಿದ್ದರು. ಆಗ ನಡೆದ ಹಿಂದೂಗಳ ಸಾಮೂಹಿಕ ಮಾರಣಹೋಮದಲ್ಲಿ ಇವರು - ಒಂದೋ ಮೂಕಪ್ರೇಕ್ಷಕರಾಗಿದ್ದರು ಇಲ್ಲವೇ ಬಾಯಿಮಾತಿನ ಸಮರ್ಥಕರಾಗಿದ್ದರು. ಅವರು ಒಳ್ಳೆಯ ನಾಗರೀಕರಾಗಬಯಸಿದರೆ, ಈ ವಿನಾಶಕಾರೀ ಶಕ್ತಿಗಳ ವಿರುದ್ಧ ದನಿಯೆತ್ತಬೇಕು ಮತ್ತು ಈ ಹುಚ್ಚುತನವನ್ನು ನಿಲ್ಲಿಸಬೇಕಾದುದು ಆವಶ್ಯಕ.

ಅವರು ಪ್ರಾಮಾಣಿಕವಾಗಿ ಶಾಂತಿಯನ್ನು ಬಯಸುವುದಾದರೆ, ಅವರು ಎದ್ದುನಿಲ್ಲಬೇಕು ಮತ್ತು ಈ ಭಯೋತ್ಪಾದಕರನ್ನು(ಆ ಸಂಘಟನೆಗಳನ್ನು ಮತ್ತು ಅದರ ಪ್ರಮುಖರನ್ನು) ಬಹಿಷ್ಕರಿಸಬೇಕು. ಅವರಿದನ್ನು ಬಯಸುವುದಿಲ್ಲವಾದರೆ ಆ ತತ್ತ್ವಗಳಂತೆ ಅದು ಹುಚ್ಚುತನಕ್ಕೆ ಸಮನಾದುದು ಮತ್ತು ಅವರನ್ನು ಆ ಕೆಲಸಗಳಿಗೆ ಜವಾಬ್ದಾರರನ್ನಾಗಿಸಬೇಕು.

ಒಂದು ರಾಷ್ಟ್ರದಲ್ಲಿ ತುಷ್ಟೀಕರಣ ಯಾವತ್ತಿಗೂ ಒಳ್ಳೆಯದಲ್ಲ. ಅದರಲ್ಲಿಯೂ, ವಿಭಿನ್ನ ಸಂಸ್ಕೃತಿ ಮತ್ತು ಪದ್ಧತಿಗಳನ್ನು ಹೊಂದಿರುವ ಭಾರತದಂತಹ ರಾಷ್ಟ್ರದಲ್ಲಿ ಇದು ನಡೆಯಲೇಕೂಡದು. ಅದು ಶಾಬಾನೋ ಪ್ರಕರಣದಲ್ಲಿ ಸಂವಿಧಾನವನ್ನು ತಿದ್ದುವ ಕೆಲಸವೇ ಆಗಿರಬಹುದು ಅಥವಾ ರುಬಯ್ಯಾ ಸಯೀದ್ ಅಪಹರಣ ಪ್ರಕರಣದಲ್ಲಿ ಭಯೋತ್ಪಾದಕರ ಬಿಡುಗಡೆಯೇ ಇರಬಹುದು, Iಅ - ೮೧೪ ವಿಮಾನ ಅಪಹರಣವಾದಾಗಿನ ವಿನಾಶಕಾರೀ ಭಯೋತ್ಪಾದಕರ ಬಿಡುಗಡೆಯೇ ಇರಬಹುದು, ೩೭೦ನೇ ತಾತ್ಕಾಲಿಕ ಕಲಮಿನ ಮುಂದುವರಿಕೆಯೇ ಇರಬಹುದು - ಈ ಎಲ್ಲ ಕೆಲಸಗಳೂ ದೇಸವನ್ನು ಒಂದು ದಿನ ವಿನಾಶಕ್ಕೆ ದೂಡುತ್ತವೆ.

ಜಾತ್ಯತೀತತೆ ಹಾಗೂ ಪ್ರಜಾಪ್ರಭುತ್ವವನ್ನು ಆಧರಿಸಿರುವ ಮತ್ತು ಎಲ್ಲರಿಗೂ ಒಳ್ಳೆಯದನ್ನು ಬಯಸುವ ರಾಷ್ಟ್ರದಲ್ಲಿ ಇಂತಹ ತುಷ್ಟೀಕರಣಗಳಿಗೆ ಯಾವತ್ತೂ ಅವಕಾಶ ನೀಡಬಾರದು. ಈ ದೇಶದ ನಾಯಕರು ಮತ್ತು ಪ್ರಜೆಗಳು ಈ ಬಗೆಗೆ ಎಚ್ಚರ ವಹಿಸಬೇಕು.

(ಆಂಗ್ಲ ಮೂಲ - ಲಲಿತ್ ಕೌಲ್ )

ಹಿಂದೂಗಳಿಗೂ ಕೆಲವು ಸಲ ಕೋಪ ಬರುತ್ತದೆ

ಜಮ್ಮು - ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸಲು ಸರ್ವಪಕ್ಷಸಭೆಯನ್ನು ಕರೆಯುವ ಬದಲು ಹಿಂದೂಗಳ ಸಮಸ್ಯೆಯನ್ನರಿಯಲು ಪ್ರಯತ್ನ ಪಡಬಾರದೇಕೆ ? ಇದನ್ನು ಅಮರನಾಥ ವಿವಾದಕ್ಕಷ್ಟೇ ಸೀಮಿತಗೊಳಿಸುವುದೇಕೆ ? ಹಿಂದೂಗಳಿಗೆ ಸರ್ಕಾರದ ಪಕ್ಷಪಾತಧೋರಣೆಯ ಬಗೆಗೆ ಮಾತ್ರ ಆಕ್ರೋಶವೇ ? ಅವರನ್ನು ಕಂಗೆಡಿಸಲು ಈ ವಿವಾದವೇಕೆ ಕಾರಣವಾಯಿತು ?

ಹಿಂದೂಗಳು ಶಾಂತಿಪ್ರಿಯರು. ಸಾಮಾನ್ಯ ಹಿಂದುವು ನಿಮ್ಮನ್ನೂ, ನಿಮ್ಮ ಭಿನ್ನತೆಯನ್ನೂ ಗೌರವಿಸುತ್ತಾನೆ. ನೀವು ಯಾರೇ ಆಗಿರಲಿ - ಕ್ರಿಶ್ಚಿಯನ್, ಮುಸ್ಲಿಂ, ಪಾರ್ಸಿ, ಅರಬ್, ಫ್ರೆಂಚ್ ಅಥವಾ ಚೈನೀಸ್ - ಅವನಿಗೆ ಅದು ಬಾಧಿಸದು. ಅವನು ತನ್ನ ಪಾಡಿಗೆ ತಾನು ಕೆಲಸ ಮಾಡಿಕೊಂಡಿರುತ್ತಾನೆ. ಮತ್ತು ಸಾಮಾನ್ಯವಾಗಿ ಯಾರ ಕೆಲಸಕ್ಕೂ ಅಡ್ಡಿಪಡಿಸುವುದಿಲ್ಲ. ಆದರೆ, ಅವರು ತಮಗೆ ತೊಂದರೆ ಕೊಡುವುದನ್ನು ಸಹಿಸರು. ಆ ತೊಂದರೆಯ ನಿವಾರಣೆಗೆ ಮಾತ್ರ ತಮ್ಮದೇ ದಾರಿಯನ್ನು ಕಂಡುಕೊಳ್ಳುತ್ತಾರೆ.

ಬೇರೆ ಎಲ್ಲ ಕಡೆ ಹಿಂದೂಗಳನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ. ಅವಹೇಳನ ಮಾಡಲಾಗುತ್ತಿದೆ. ಅದು ಫಿಜಿಯಲ್ಲಿ ಸರ್ಕಾರವನ್ನು ಎರಡು ಸಾರಿ ಬೀಳಿಸಿದ ಕ್ರಮವೇ ಇರಬಹುದು ಅಥವಾ ಪಾಕಿಸ್ಥಾನ ಮತ್ತು ಬಾಂಗ್ಲಾದೇಶದಲ್ಲಿ ಭಾರತದ ಬಗೆಗಿನ ಅಸಮಾಧಾನವನ್ನು ತೋರ್ಪಡಿಸಲು ಹಿಂದೂಗಳ ಮೆಲಿನ ಹಲ್ಲೆಯೇ ಇರಬಹುದು(ತಸ್ಲೀಮಾ ನಸ್ರೀನ್‌ರ ಲಜ್ಜಾ ಓದಿ).

೧೯೯೦ರಲ್ಲಿ ಕಣಿವೆಯಲ್ಲಿ ಹತ್ತು ಲಕ್ಷ ಹಿಂದೂಗಳಿದ್ದರು. ಆದರೀಗ ಅವರ ಸಂಖ್ಯೆ ಕೇವಲ ಕೆಲವು ನೂರುಗಳಿಗೆ ಇಳಿದಿದೆ. ಉಳಿದವರೂ ಭಯೋತ್ಪಾದನೆಯಿಂದ ಓಡಿಸಲ್ಪಡುತ್ತಿದ್ದಾರೆ. ಅಸ್ಸಾಂ, ತ್ರಿಪುರಾ, ನಾಗಾಲ್ಯಾಂಡ್‌ಗಳಲ್ಲಿ ಬಾಂಗ್ಲಾದೇಶೀ ಅನೈತಿಕ ನುಸುಳುಕೋರರು ಹಿಂದೂಗಳನ್ನೂ ಓಡಿಸುತ್ತಿದ್ದಾರೆ. ಮತ್ತು ಅಲ್ಲಿ ಕ್ರಿಶ್ಚಿಯನ್‌ಪರ ಗುಂಪುಗಳಾದ ಬೋಡೋ ಮತ್ತು ಮಿಝೋಗಳೂ ಇದೇ ಕೆಲಸದಲ್ಲಿ ತೊಡಗಿದ್ದಾರೆ. ಸಕಾರ ಕಣ್ಣುಮುಚ್ಚಿಕೊಂಡು ಕುಳಿತಿದೆ. ಕರ್ನಾಟಕ ಮತ್ತು ಕೇರಲ ಮುಂತಾದ ರಾಜ್ಯಗಳಲ್ಲಿ ಹಿಂದೂಗಳು ದೇವಾಲಯಗಳಿಗೆ ಅಪಿಸುವ ಹಣವನ್ನು ಸರ್ಕಾರ ಬೇರೆ ಧರ್ಮಗಳ ಅನುದಾನಕ್ಕಾಗಿ ಖರ್ಚು ಮಾಡುತ್ತದೆ.

,೫೦೦ ವರ್ಷಗಳ ಗೊತ್ತಿರುವ ಇತಿಹಾಸದಲ್ಲಿ ಹಿಂದೂಗಳು ಯಾವತ್ತೂ ಇನ್ನೊಬ್ಬರ ಮೇಲೆ ದಂಡೆತ್ತಿ ಹೋಗಿಲ್ಲ. ಮತ್ತು ಅವರು ಯಾವತ್ತೂ ತಮ್ಮ ಧರ್ಮವನ್ನು ಇನ್ನೊಬ್ಬರ ಮೇಲೆ ಹೇರಿಲ್ಲ. ಅದು ಶಾಂತಿಪೂರ್ಣವಾಗಿ ಧರ್ಮವನ್ನು ಪಸರಿಸಿದೆ. ಪೂರ್ವದಲ್ಲಿ ಆಂಕೋರ್ ವಾಟ್‌ಅನ್ನು ನೋಡಿ. ಪಶ್ಚಿಮದಲ್ಲಿ ಹಿಂದುತ್ವದ ಉಪಪರಿಣಾಮಗಳಾದ ಯೋಗ, ಧ್ಯಾನ, ಪ್ರಾಣಾಯಾಮ, ಆಯುರ್ವೇದ ಪದ್ಧತಿಗಳನ್ನು ಮಿಲಿಯಗಟ್ಟಲೆ ಜನರು ತಮ್ಮದಾಗಿಸಿಕೊಂಡಿದ್ದಾರೆ.

ಹಿಂದೂಗಳು ಜಗತ್ತಿನ ಎಲ್ಲ ಅಲ್ಪಸಂಖ್ಯಾತರಿಗೆ ಪುನರ್ವಸತಿಯನ್ನು ಕಲ್ಪಿಸಿದವರು. ಅದರೆ, ಇವರ ಸಹಾಯಹಸ್ತದಿಂದ ಬದುಕುಳಿದ ಅವೆ ಎರಡು ಸಮಾಜಗಳು ಹಿಂದೂಗಳ ವಿರುದ್ಧವೇ ಮತಾಂತರ ಮತ್ತು ದಾಳಿಗಳ ಮೂಲಕ ತಿರುಗಿಬಿದ್ದಿರುವುದು ವಿಷಾದದ ಸಂಗತಿ.

ಎಲ್ಲರನ್ನೂ ಒಪ್ಪುವ ಮತ್ತು ಎಲ್ಲ ಧರ್ಮಗಳನ್ನೂ ಸ್ವಾಗತಿಸುವ ಹಿಂದೂಗಳ ಮಾರುಕಟ್ಟೆಗಳಲ್ಲಿ ಬಾಂಬ್ ಇಡಲಾಗುತ್ತಿದೆ. ಅವರ ಟ್ರೈನ್ ಮತ್ತು ದೇವಾಲಯಗಳು ದಾಳಿಗೊಳಗಾಗುತ್ತಿವೆ. ಅವರನ್ನು ಅವರ ಊರುಗಳಿಂದಲೇ ಓಡಿಸಲಾಗುತ್ತಿದೆ. ದೂರದರ್ಶನ ಮತ್ತು ಪತ್ರಿಕೆಗಳು ಇದರ ಮೋಜು ತೆಗೆದುಕೊಳ್ಳುತ್ತವೆ. ಮತ್ತು ಅವರ ರಾಜಕಾರಿಣಿಗಲೇ ಅವರ ಬಗೆಗೆ ಪಕ್ಷಪಾತ ಮಾಡುತ್ತಾರೆ.

ಆದ್ದರಿಂದ, ಇದು ಸಾಕೆನಿಸುತ್ತದೆ. ಒಂದು ಹಂತದಲ್ಲಿ ಒಮ್ಮೆ ಹೇಡಿಗಳೆಂದು ಕರೆದ ಹಿಂದೂಗಳು ಕೋಪದಿಂದ ಎದ್ದುನಿಲ್ಲುತ್ತಾರೆ. ಅನಿಯಂತ್ರಿತ ಆವೇಶಕ್ಕೊಳಗಾಗುತ್ತಾರೆ.

ಹೌದು. ನಾವು ಗುಜರಾತ್ ಮಾರಣಹೋಮವನ್ನು ಖಂಡಿಸಬೇಕು. ಆದರೆ, ಇದರ ಕಾರಣಗಳ ಬಗೆಗೂ ಸ್ವಲ್ಪ ದೃಷ್ಟಿ ಹಾಯಿಸಬೇಕು. ಅದು ಕೇವಲ ಯಾರೋ ಕೆಲವು ಪುಂಡರ ಗುಂಪು ನಡೆಸಿದ ೩೬ ಅಮಾಯಕ ಹಿಂದೂ ಸ್ತ್ರೀಯರ ಮತ್ತು ಮಕ್ಕಳ ಮಾರಣಹೋಮವಾಗಿರಲಿಲ್ಲ. ಗುಜರಾತೀ ಹಿಂದೂಗಳಲ್ಲಿ ವರ್ಷಗಳಿಂದ ಎಷ್ಟರ ಮಟ್ಟಿಗಿನ ಕೋಪ ಮತ್ತು ಜುಗುಪ್ಸೆ ಮಡುಗಟ್ಟಿತ್ತೆಂಬುದನ್ನು ತಿಳಿಯಲು ಆ ದಿನ ಅಹಮದಾಬಾದ್‌ನಲ್ಲಿ ,೨೫,೦೦೦ ಶಾಂತಿಪಾಲಕ ಹಿಂದೂಗಳು ಕೋಪದಿಂದ ಒಮ್ಮೆಲೇ ನಡೆದುಬಂದ ಆ ಒಂದು ಕ್ಷಣ ಸಾಕು.

ಜಮ್ಮು ಮತ್ತು ಅಮರನಾಥ ವಿವಾದದಲ್ಲಿ ಆಗಿರುವುದೂ ಇದೇ. ಹಿಂದೂಗಳು ಯಾವತ್ತೂ ತಮ್ಮ ಸರ್ಕಾರ ಮೆಕ್ಕಾ ಯಾತ್ರೆಗಾಗಿ ಭಾರತೀಯ ಮುಸ್ಲಿಮರಿಗೆ ನೀಡುವ ಕೋಟಿಗ್ಟಲೇ ಸಹಾಯಧನದ ಬಗೆಗೆ ಚಕಾರವೆತ್ತಿಲ್ಲ. ಆದರೆ, ಅದೇ ಹಿಂದೂಗಳಿಗೆ ೧೫,೦೦೦ ಅಡಿ ಎತ್ತರದಲ್ಲಿ ಅಮರನಾಥ ದೇವಾಲಯದ ಪೂಜೆಗೆ ಸಹಾಯವಾಗುವಂತೆ ಆಶ್ರಯ, ಶೌಚಾಲಯ ಮತ್ತು ಸಾಮಾನ್ಯ ಆವಶ್ಯಕತೆಗಳನ್ನು ಪೂರೈಸಲು ಸರ್ಕಾರ ಭೂಮಿಯನ್ನು ನೀಡಲು ನಿರಾಕರಿಸಿದಾಗ ಆವೇಶದಿಂದ ಮುನ್ನುಗ್ಗಿದರು.

ಶಾಂತಿ ಮತ್ತು ಸಹಬಾಳ್ವೆಗಾಗಿ ಕರೆಕೊಡುವ ಬದಲು ಹಿಂದೂ ರಾಜಕಾರಿಣಿಗಳು, ಪತ್ರಕರ್ತರು ಮತ್ತು ಧಾರ್ಮಿಕ ನಾಯಕರು ಭೇಟಿಕೊಡುವ ೫೦೦ ವರ್ಷಗಳ ಹಳೆಯದಾದ ದರ್ಗಾವನ್ನು ರಕ್ಷಿಸಲು ಇಷ್ಟೆಲ್ಲ ನಾಟಕ ಮಾಡುವುದರ ಬದಲು, ಹಿಂದೂಗಳು ನೋವಿನ ಮೂಲಕಾರನವನ್ನು ಅರಿತು ಅವರಿಗೆ ನೋವನ್ನು ಗುಣಪಡಿಸುವಲ್ಲಿ ಕ್ರಮ ಜರುಗಿಸಲಿ.

ಮಾಧ್ಯಮದವರು ಸ್ವಲ್ಪ ಆತ್ಮಾವಲೋಕನ ಮಾಡಿಕೊಳ್ಳಬೇಕು. ಹಿಂದೂಗಳಿಗೆ ಸಾಕಾಗಿದೆ. ಈ ಸರ್ಕಾರ ಅಥವಾ ಮುಂದಿನ ಸರ್ಕಾರ ಹಿಂದೂಗಳ ಈ ನೋವನ್ನು ಬಗೆಹರಿಸದಿದ್ದಲ್ಲಿ ಇನ್ನೂ ಹೆಚ್ಚಿನ ಜಮ್ಮೂ ಹಿಂದೂಗಳು ಮುಂದಿನ ದಿನಗಳಲ್ಲಿ ಮತ್ತು ವರ್ಷಗಳಲ್ಲಿ ಆವೇಶದಿಂದ ಎದ್ದೇಳಬಹುದು. ಆಗ ಪರಿಣಾಮವನ್ನು ಎದುರಿಸಬೇಕಾದೀತು. ಈಗಲೇ ಎಚ್ಚೆತ್ತುಕೊಳ್ಳುವುದೊಳಿತು.

(ಆಂಗ್ಲ ಮೂಲ - ಫ್ರಾಂಕ್ವಾ ಗೋತಿಯೇ)

ಹಿಂದೂಗಳಿಗೆ ದಾರಿಯೊಂದೇ

ಒಂದೋ ಜನ ಗಣ ಮನ ಹಾಡುವುದನ್ನು ನಿಲ್ಲಿಸಬೇಕು ಅಥವಾ ಜನ ಗಣ ಮನ ಎಂಬುದರ ಪರ್ಯಾಯಪದವಾದ ತ್ರಿವರ್ಣಧ್ವಜದ ಒಡೆತನವನ್ನು ಒಪ್ಪದವರಿಗೆ ಈ ದೇಶದಲ್ಲಿ ಜಾಗವಿಲ್ಲ(ವಾಸಿಸುವ ಯಾವುದೇ ಹಕ್ಕಿಲ್ಲ) ಎಂಬುದನ್ನು ನಿಶ್ಚಯ ಮಾಡಬೇಕು.

ಜಮ್ಮು - ಕಾಶ್ಮೀರದ ಸಮಸ್ಯೆಯ ವರ್ತಮಾನ ಸ್ಥಿತಿಯು ಒಂದೇ ಸಂದೇಶವನ್ನು ನೀಡುತ್ತಿದೆ - ಈ ಸಂಘರ್ಷ ನಡೆಯುತ್ತಿರುವುದು ದೇಶಭಕ್ತಿ ಮತ್ತು ದೇಶದ್ರೋಹದ ನಡುವೆ. ಭಾರತದ ತ್ರಿವರ್ಣಧ್ವಜದೆದುರಿಗೆ ಪಾಕಿಸ್ಥಾನದ ಹಸಿರು ಧ್ವಜವನ್ನು ಹಾರಿಸಲಾಗಿದೆ. ಆದ್ದರಿಂದ, ಈ ಸಮಸ್ಯೆಯನ್ನು ಬಗೆಹರಿಸುವಲ್ಲಿ ದ್ವಂದ್ವ ನೀತಿ ಅನುಸರಿಸಬಾರದು. ಭೂಮಿ ನೀಡಲು ಮೂರು ವರ್ಷ ಹಿಂದೆಮುಂದೆ ನೋಡಿದ ಸರ್ಕಾರ ಮೂರೇ ದಿನದಲ್ಲಿ ಅದನ್ನು ಹಿಂಪಡೆದಿದ್ದೇಕೆ ? ಎಂಬ ಪ್ರಶ್ನೆಗೆ ಇವತ್ತಿಗೂ ಉತ್ತರ ದೊರಕಿಲ್ಲ. ಇದು ಯಾವುದೇ ಸ್ಥಾನೀಯ ಸೌಲಭ್ಯ - ಅಸೌಲಭ್ಯಗಳ ಕೂಗಲ್ಲ. ಇದು ಭಾರತದಲ್ಲಿ ಕಾಶ್ಮೀರವನ್ನು ಉಳಿಸುವ ಸಂಘರ್ಷ. ಈ ದೃಷ್ಟಿಯಿಂದ ಹನ್ನೊಂದು ಅಂಶಗಳ ಪರಿಹಾರ ಮಾರ್ಗ ಇಂತಿದೆ -

೧. ಜಮ್ಮು - ಕಾಶ್ಮೀರ ಹಿಂದೂ, ಮುಸ್ಲಿಂ, ಬೌದ್ಧ, ಮುಂತಾದ ಎಲ್ಲ ಭಾರತೀಯರ ಸ್ವತ್ತು. ಆದ್ದರಿಂದ, ಯಾವುದೇ ಸಮಸ್ಯೆಯನ್ನು ಧಾರ್ಮಿಕವಾಗಿಸಬಾರದು, ಸಾಂಪ್ರದಾಯಿಕವಾಗಿಸಬಾರದು.

೨. ಜಮ್ಮು, ಕಣಿವೆ ಮತ್ತು ಲಢಾಕ್ - ಇವುಗಳಲ್ಲಿ ಕ್ಷೇತ್ರೀಯ ಅಸಮತೋಲನವಿದೆ. ಮತ್ತು ಅನುದಾನದ ವಿಷಯದಲ್ಲಿ ಭೇದಭಾವ ಮಾಡಲಾಗುತ್ತದೆ. ಇದನ್ನು ಏಕಮತದಿಂದ ಎಲ್ಲರೂ ವಿರೋಧಿಸಬೇಕು ಮತ್ತು ಇದು ನಿಲ್ಲಬೇಕು. ಆದ್ದರಿಂದ, ವಿಧಾನಸಭಾಕ್ಷೇತ್ರಗಳ ಮರುರೇಖಾಂಕನ ಆಗಬೇಕು.

೩. ಶ್ರೀ ಅಮರನಾಥ ಶ್ರೈನ್ ಬೋರ್ಡನ್ನು ರೂಪಿಸಿದ್ದು ಸರ್ಕಾರವೇ. ಭೂಮಿಯೂ ಸರ್ಕಾರದ್ದೇ. ಸರ್ಕಾರವು ಹೊರಡಿಸಿದ ಆದೇಶದ ಮೇರೆಗೇ ಅದನ್ನು ಶ್ರೀ ಅಮರನಾಥ ಶ್ರೈನ್ ಬೋರ್ಡ್‌ಗೆ ನೀಡಲಾಗಿತ್ತು. ಈ ಭೂಮಿಯನ್ನು ತಕ್ಷಣ ಶ್ರೀ ಅಮರನಾಥ ಶ್ರೈನ್ ಬೋರ್ಡ್‌ಗೆ ಹಸ್ತಾಂತರಿಸಬೇಕು ಮತ್ತು ಯಾತೆಯ ಸಂಪೂರ್ಣ ಜವಾಬ್ದಾರಿಯನ್ನು ಶ್ರೀ ಅಮರನಾಥ ಶ್ರೈನ್ ಬೋರ್ಡ್‌ಗೆ ವಹಿಸಬೇಕು.

೪. ಜಮ್ಮು - ಕಾಶ್ಮೀರದ ಪ್ರತಿಯೊಂದು ಪ್ರದೇಶಕ್ಕೂ ಸಮಾನವಾದ ಅನುಪಾತದಲ್ಲಿ ಒಂದು ಲಕ್ಷ ಹೊಸ ಉದ್ಯೋಗ ಸೃಷ್ಟಿಯನ್ನು ಘೋಷಿಸಬೇಕು.

೫. ಜಮ್ಮು, ಕಣಿವೆ ಮತ್ತು ಲಢಾಕ್ ಕ್ಷೇತ್ರಗಳಲ್ಲಿ ಗ್ರಾಮೀಣ ವಿಕಾಸದ ಮಹತ್ವಾಕಾಂಕ್ಷೀ ಯೋಜನೆಗಳನ್ನು ರಾಷ್ಟ್ರೀಯ ಮೇಲ್ವಿಚಾರಣೆ ಮತ್ತು ದೇಶದ ವಿಭಿನ್ನ ಭಾಗಗಳಿಂದ ಆಮಂತ್ರಿಸಲ್ಪಟ್ಟ ಸ್ವಯಂಸೇವಾ ಸಂಘಟನೆಗಳ ಮುಖಾಂತರ ಮಾಡಿಸಬೇಕು.

೬. ಜಮ್ಮು - ಕಾಶ್ಮೀರದ ಸರ್ಕಾರಿ ನೌಕರರನ್ನು ದೇಶದ ಬೇರೆ ಬೇರೆ ಭಾಗಗಳಲ್ಲಿ ಐದು ವರ್ಷ ಕಡ್ಡಾಯವಾಗಿ ನಿಯೋಜಿಸಬೇಕು. ಮತ್ತು ದೇಶದ ಬೇರೆ ಬೇರೆ ಭಾಗಗಳ ನೌಕರರನ್ನು ಜಮ್ಮು - ಕಾಶ್ಮೀರದ ಸರ್ಕಾರಿ ಕೆಲಸಗಳಲ್ಲಿ ಅನಿವಾರ್ಯವಾಗಿ ನಿಯುಕ್ತಿ ಮಾಡಬೇಕು.

೭. ಈ ವರ್ಷ ೨ ಅಕ್ಟೋಬರ್, ಗಾಂಧೀ ಜಯಂತಿಯಿಂದ ಡಾ. ಮನಮೋಹನ್ ಸಿಂಗ್‌ರವರ ನೇತೃತ್ವದಲ್ಲಿ ಶರಣಾರ್ಥಿಗಳಾದ ಕಾಶ್ಮೀರೀ ಹಿಂದೂಗಳು ವಾಪಸಾಗಬೇಕು. ಈ ಯಾತ್ರೆಗೆ ಗುರು ತೇಗ್ ಬಹಾದುರ್ ಯಾತ್ರೆ ಎಂದು ಹೆಸರಿಡಬೇಕು. ಏಕೆಂದರೆ, ಅವರೇ ಎಲ್ಲರಿಗಿಂತ ಮೊದಲು ತಮ್ಮ ಬಲಿದಾನದಿಂದ ಕಾಶ್ಮೀರಿ ಪಂಡಿತರ ಅತ್ಯಾಚಾರವನ್ನು ರಕ್ಷಿಸಿದ್ದರು.

೮. ಕಾಶ್ಮೀರದ ಪ್ರತಿಯೊಂದು ಶಾಲೆಯ ಪಠ್ಯದಲ್ಲಿ ಸರ್ವಪಂಥ ಸಮಭಾವವನ್ನು ಹೆಚ್ಚಿಸುವ ಪಾಠಗಳನ್ನು ಸೇರಿಸಬೇಕು. ಮತ್ತು ಕಾಶ್ಮೀರದಿಂದ ಅರುಣಾಚಲ, ಅಂಡಮಾನ್, ಕನ್ಯಾಕುಮಾರಿ ಮತ್ತು ದ್ವಾರಕಾದವರೆಗೆ ಹರಡಿರುವ ವಿಶಾಲ ಭಾರತದ ಬಗೆಗೆ ಆತ್ಮೀಯತೆಯನ್ನು ಮೂಡಿಸಲು ಅಭಿಯಾನ ನಡೆಸಬೇಕು. ಅದರಲ್ಲಿ ದೇಶದ ವಿವಿಧ ಭಾಗಗಳಿಂದ ಮಕ್ಕಳು ಕಾಶ್ಮೀರಕ್ಕೆ ಬರಬೇಕು ಮತ್ತು ಈ ಮೂಲಕ ಕಾಶ್ಮೀರದ ಮಕ್ಕಳು ದೇಶದ ವಿವಿಧ ಭಾಗಗಳ ಮಕ್ಕಳ ಜೊತೆ ಬೆರೆಯುವ ಅವಕಾಶವನ್ನು ಕಲ್ಪಿಸಬೇಕು, ಅವರು ಅಲ್ಲಿ ಓಡಾಡಬೇಕು - ಇದು ನಿಶ್ಶುಲ್ಕವಾಗಿ ನಡೆಯಬೇಕು.

೯. ಜಮ್ಮು - ಕಾಶ್ಮೀರದ ಬಗೆಗೆ ಸಂವಿಧಾನದಲ್ಲಿರುವ ಪಕ್ಷಪಾತ ಧೋರಣೆ - ಎರಡು ಧ್ವಜಗಳು ಮತ್ತು ಹೆಚ್ಚಿನ ಕೇಂದ್ರೀಯ ಕಾನೂನುಗಳು ಅಲ್ಲಿ ಅನ್ವಯವಾಗದಿರುವುದು. ಅಲ್ಲಿ ಭಾರತೀಯತೆಯು ಸ್ಥಿರವಾಗಿ ಉಳಿಯಲು ಇವೆಲ್ಲವೂ ನಿಲ್ಲಬೇಕು. ಆದ್ದರಿಂದ, ಜಮ್ಮು - ಕಾಶ್ಮೀರದ ಪ್ರಾಮಾಣಿಕ ವಿಕಾಸ ಮತ್ತು ರಾಷ್ಟ್ರೀಯತೆಯ ಭಾವವನ್ನು ಉದ್ದೀಪನಗೊಳಿಸಲು ೩೭೦ನೇ ಕಲಮವನ್ನು ಕೂಡಲೇ ನಿಲ್ಲಿಸಬೇಕು.

೧೦. ಭಾರತೀಯ ಸಂಸತ್ತು ೨೨ ಫೆಬ್ರವರಿ ೧೯೯೪ರಲ್ಲಿ ಮಂಡಿಸಿದ ಈ ಕೆಳಗಿನ ಪ್ರಸ್ತಾವವನ್ನು ಜಮ್ಮು - ಕಾಶ್ಮೀರದ ಪ್ರತಿಯೊಂದು ಶಾಲೆ, ಸರ್ಕಾರಿ ಕಛೇರಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕಾಣುವಂತೆ ಇಡುವುದು ಅನಿವಾರ್ಯವಾಗಬೇಕು. ಅದು ಇಂತಿದೆ - ಜಮ್ಮು - ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ ಮತ್ತು ಅಂಗವಾಗಿಯೇ ಇರುತ್ತದೆ. ಇದನ್ನು ಭಾರತದಿಂದ ಬೇರೆಯಾಗಿಸುವ ಯಾವುದೇ ಪ್ರಯತ್ನವನ್ನು ಬಲವಾಗಿ ದಮನಗೊಳಿಸಲಾಗುವುದು. ಭಾತರವು ತನ್ನ ಏಕತೆ, ಪ್ರಭುತ್ವ ಮತ್ತು ಭೌಗೋಳಿಕ ಅಖಂಡತೆಯ ವಿರುದ್ಧದ ಪ್ರತಿಯೊಂದು ಪ್ರಯತ್ನಕ್ಕೂ ದೃಢವಾಗಿ ಪ್ರತಿರೋಧ ಒಡ್ಡುವ ಇಚ್ಛಾಶಕ್ತಿ ಮತ್ತು ಕ್ಷಮತೆ ಇದೆ. ಮತ್ತು ಪಾಕಿಸ್ಥಾನವು ಆಕ್ರಮಿಸಿರುವ ಭಾರತದ ಜಮ್ಮು - ಕಾಶ್ಮೀರ ರಾಜ್ಯದ ಆ ಪ್ರದೇಶಗಳನ್ನು ವಾಪಸ್ ನೀಡುವಂತೆ ಆಗ್ರಹಿಸುತ್ತದೆ.

ಇದು ಪ್ರತಿಯೊಂದು ರಾಜಕೀಯ ಪಕ್ಷದಿಂದ ಅಂಗಿಕರಿಸಲ್ಪಟ್ಟಿದೆ ಮತ್ತು ಸರ್ವಾನುಮತದಿಂದ ಇದರ ಮಂಡನೆಯಾಗಿದೆ.

೧೧. ಜಮ್ಮು - ಕಾಶ್ಮೀರದ ಪ್ರತ್ಯೇಕತೆಯ ಮತ್ತು ಅಸಂತೋಷದ ನೆಪದಲ್ಲಿ ಶ್ರೀನಗರ ರಾಜಕೀಯ ನಾಯಕರ ಅತಿಯಾದ ಭ್ರಷ್ಟಾಚಾರ ಮತ್ತು ದೆಹಲಿಯ ಕೇಂದ್ರ ಸರ್ಕಾರದ ತುಷ್ಟೀಕರಣ ನೀತಿಯಿಂದ ಅವರಿಗೆ ರಕ್ಷಣೆ ಸಿಗುತ್ತಿದೆ. ಜಮ್ಮು - ಕಾಶ್ಮೀರದ ಹೊಸ ಯುವ ಮತ್ತು ಪ್ರಾಮಾಣಿಕ ರಾಜನೀತಿಜ್ಞರ ಉದಯವಾಗಲು ಅಲ್ಲಿನ ಸೇನೆಗೆ ಒಂದು ವರ್ಷದಲ್ಲಿ ಎಲ್ಲ ಭಯೋತ್ಪಾದಕರ ಮತ್ತು ಅವರ ಅವರ ಅನಧಿಕೃತ ಅಡ್ಡೆಗಳ ಮೇಲೆ ದಾಳಿ ಮಾಡಿ ಯಾವುದೇ ಮಮಕಾರವಿಲ್ಲದೇ ನಾಶಮಾಡುವ ಆಧಿಕಾರ ನೀಡಬೇಕು. ಪುಟಿನ್ ಚೆಚೆನ್ಯಾ ಮತ್ತು ಜಾರ್ಜಿಯಾಗಳಲ್ಲಿ ಮಾಡಿದ್ದೂ ಇದನ್ನೇ. ಮತ್ತು ಶೇಷಭಾರತದ ನಾಗರಿಕರಿಗೆ, ವಿಶೇಷವಾಗಿ ಮಾಜಿ ಸೈನಿಕರಿಗೆ ಮನೆ ಕಟ್ಟಲು ಅನುವಾಗುವಂತೆ ಜಮ್ಮು - ಕಾಶ್ಮೀರದಲ್ಲಿ ಭೂಮಿ ನೀಡಬೇಕು.

ಎಲ್ಲಿಯವೆರೆಗೆ ಜಮ್ಮು - ಕಾಶ್ಮೀರದ ನಾಗರಿಕರಲ್ಲಿ ಭಾರತೀಯರಾಗಬೇಕೆಂಬ ಭಾವನೆಯನ್ನು ನಾವು ಬೆಳೆಸುವುದಿಲ್ಲವೋ, ಅಲ್ಲಿಯವೆರೆಗೆ ಅವರು ಭಾರತೀಯ ನಾಗರಿಕರ ಕರ್ತವ್ಯ ಪಾಲನೆ ಮಾಡಬೇಕೆಂದು ಹೇಗೆ ತಾನೇ ನಿರೀಕ್ಷಿಸಲಾದೀತು ? ಕಳೆದ ೬ ದಶಕಗಳಲ್ಲಿ ಜಮ್ಮು - ಕಾಶ್ಮೀರಕ್ಕೆ ೩೦೦ ಲಕ್ಷ ಕೋಟಿ ಸಿಕ್ಕಿದೆ. ಕಳೆದ ೫ ವರ್ಷಗಳಲ್ಲಿ ಮುಫ್ತಿಯವರ ಸರ್ಕಾರವು ಕೇಂದ್ರ ಸರ್ಕಾರದಿಂದ ೮೭,೦೦೦ ಕೋಟಿ ರುಪಾಯಿ ಕೊಡಿಸಿದ್ದಾರೆ. ಅಲ್ಲಿನ ನೇತಾರರು ಮತ್ತು ಶಾಸಕರೆಲ್ಲರೂ ಮುಸ್ಲಮರೇ. ಹಾಗಾದರೆ, ಶಿಕಾರಿ ಯಾರಿಗಾಗಿ ? ಎಲ್ಲಿಯವರೆಗೆ ಭ್ರಷ್ಟ ಮತ್ತು ರಾಷ್ಟ್ರವಿರೋಧಿ ನಾಯಕರ ಕಪಿಮುಷ್ಟಿಯಿಂದ ಬಿಡಿಸಿ ಜನ ಗಣ ಮನ ಎಂದು ಹಾಡಿಸುವ ಪ್ರಾಮಾಣಿಕ ಮತ್ತು ಕಠೋರ ನೇತೃತ್ವ ಸಿಗುವುದಿಲ್ಲವೋ, ಅಲ್ಲಿಯವೆರಗೂ ಪರಿಸ್ಥಿತಿ ನಿಭಾಯಿಸುವುದು ಕಷ್ಟವೇ ಆದೀತು.

(ಹಿಂದೀ ಮೂಲ - ತರುಣ್ ವಿಜಯ್)