Swaagatam

स्वागतम्

Wednesday, March 4, 2009

ಹಿಂದೂಗಳಿಗೂ ಕೆಲವು ಸಲ ಕೋಪ ಬರುತ್ತದೆ

ಜಮ್ಮು - ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸಲು ಸರ್ವಪಕ್ಷಸಭೆಯನ್ನು ಕರೆಯುವ ಬದಲು ಹಿಂದೂಗಳ ಸಮಸ್ಯೆಯನ್ನರಿಯಲು ಪ್ರಯತ್ನ ಪಡಬಾರದೇಕೆ ? ಇದನ್ನು ಅಮರನಾಥ ವಿವಾದಕ್ಕಷ್ಟೇ ಸೀಮಿತಗೊಳಿಸುವುದೇಕೆ ? ಹಿಂದೂಗಳಿಗೆ ಸರ್ಕಾರದ ಪಕ್ಷಪಾತಧೋರಣೆಯ ಬಗೆಗೆ ಮಾತ್ರ ಆಕ್ರೋಶವೇ ? ಅವರನ್ನು ಕಂಗೆಡಿಸಲು ಈ ವಿವಾದವೇಕೆ ಕಾರಣವಾಯಿತು ?

ಹಿಂದೂಗಳು ಶಾಂತಿಪ್ರಿಯರು. ಸಾಮಾನ್ಯ ಹಿಂದುವು ನಿಮ್ಮನ್ನೂ, ನಿಮ್ಮ ಭಿನ್ನತೆಯನ್ನೂ ಗೌರವಿಸುತ್ತಾನೆ. ನೀವು ಯಾರೇ ಆಗಿರಲಿ - ಕ್ರಿಶ್ಚಿಯನ್, ಮುಸ್ಲಿಂ, ಪಾರ್ಸಿ, ಅರಬ್, ಫ್ರೆಂಚ್ ಅಥವಾ ಚೈನೀಸ್ - ಅವನಿಗೆ ಅದು ಬಾಧಿಸದು. ಅವನು ತನ್ನ ಪಾಡಿಗೆ ತಾನು ಕೆಲಸ ಮಾಡಿಕೊಂಡಿರುತ್ತಾನೆ. ಮತ್ತು ಸಾಮಾನ್ಯವಾಗಿ ಯಾರ ಕೆಲಸಕ್ಕೂ ಅಡ್ಡಿಪಡಿಸುವುದಿಲ್ಲ. ಆದರೆ, ಅವರು ತಮಗೆ ತೊಂದರೆ ಕೊಡುವುದನ್ನು ಸಹಿಸರು. ಆ ತೊಂದರೆಯ ನಿವಾರಣೆಗೆ ಮಾತ್ರ ತಮ್ಮದೇ ದಾರಿಯನ್ನು ಕಂಡುಕೊಳ್ಳುತ್ತಾರೆ.

ಬೇರೆ ಎಲ್ಲ ಕಡೆ ಹಿಂದೂಗಳನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ. ಅವಹೇಳನ ಮಾಡಲಾಗುತ್ತಿದೆ. ಅದು ಫಿಜಿಯಲ್ಲಿ ಸರ್ಕಾರವನ್ನು ಎರಡು ಸಾರಿ ಬೀಳಿಸಿದ ಕ್ರಮವೇ ಇರಬಹುದು ಅಥವಾ ಪಾಕಿಸ್ಥಾನ ಮತ್ತು ಬಾಂಗ್ಲಾದೇಶದಲ್ಲಿ ಭಾರತದ ಬಗೆಗಿನ ಅಸಮಾಧಾನವನ್ನು ತೋರ್ಪಡಿಸಲು ಹಿಂದೂಗಳ ಮೆಲಿನ ಹಲ್ಲೆಯೇ ಇರಬಹುದು(ತಸ್ಲೀಮಾ ನಸ್ರೀನ್‌ರ ಲಜ್ಜಾ ಓದಿ).

೧೯೯೦ರಲ್ಲಿ ಕಣಿವೆಯಲ್ಲಿ ಹತ್ತು ಲಕ್ಷ ಹಿಂದೂಗಳಿದ್ದರು. ಆದರೀಗ ಅವರ ಸಂಖ್ಯೆ ಕೇವಲ ಕೆಲವು ನೂರುಗಳಿಗೆ ಇಳಿದಿದೆ. ಉಳಿದವರೂ ಭಯೋತ್ಪಾದನೆಯಿಂದ ಓಡಿಸಲ್ಪಡುತ್ತಿದ್ದಾರೆ. ಅಸ್ಸಾಂ, ತ್ರಿಪುರಾ, ನಾಗಾಲ್ಯಾಂಡ್‌ಗಳಲ್ಲಿ ಬಾಂಗ್ಲಾದೇಶೀ ಅನೈತಿಕ ನುಸುಳುಕೋರರು ಹಿಂದೂಗಳನ್ನೂ ಓಡಿಸುತ್ತಿದ್ದಾರೆ. ಮತ್ತು ಅಲ್ಲಿ ಕ್ರಿಶ್ಚಿಯನ್‌ಪರ ಗುಂಪುಗಳಾದ ಬೋಡೋ ಮತ್ತು ಮಿಝೋಗಳೂ ಇದೇ ಕೆಲಸದಲ್ಲಿ ತೊಡಗಿದ್ದಾರೆ. ಸಕಾರ ಕಣ್ಣುಮುಚ್ಚಿಕೊಂಡು ಕುಳಿತಿದೆ. ಕರ್ನಾಟಕ ಮತ್ತು ಕೇರಲ ಮುಂತಾದ ರಾಜ್ಯಗಳಲ್ಲಿ ಹಿಂದೂಗಳು ದೇವಾಲಯಗಳಿಗೆ ಅಪಿಸುವ ಹಣವನ್ನು ಸರ್ಕಾರ ಬೇರೆ ಧರ್ಮಗಳ ಅನುದಾನಕ್ಕಾಗಿ ಖರ್ಚು ಮಾಡುತ್ತದೆ.

,೫೦೦ ವರ್ಷಗಳ ಗೊತ್ತಿರುವ ಇತಿಹಾಸದಲ್ಲಿ ಹಿಂದೂಗಳು ಯಾವತ್ತೂ ಇನ್ನೊಬ್ಬರ ಮೇಲೆ ದಂಡೆತ್ತಿ ಹೋಗಿಲ್ಲ. ಮತ್ತು ಅವರು ಯಾವತ್ತೂ ತಮ್ಮ ಧರ್ಮವನ್ನು ಇನ್ನೊಬ್ಬರ ಮೇಲೆ ಹೇರಿಲ್ಲ. ಅದು ಶಾಂತಿಪೂರ್ಣವಾಗಿ ಧರ್ಮವನ್ನು ಪಸರಿಸಿದೆ. ಪೂರ್ವದಲ್ಲಿ ಆಂಕೋರ್ ವಾಟ್‌ಅನ್ನು ನೋಡಿ. ಪಶ್ಚಿಮದಲ್ಲಿ ಹಿಂದುತ್ವದ ಉಪಪರಿಣಾಮಗಳಾದ ಯೋಗ, ಧ್ಯಾನ, ಪ್ರಾಣಾಯಾಮ, ಆಯುರ್ವೇದ ಪದ್ಧತಿಗಳನ್ನು ಮಿಲಿಯಗಟ್ಟಲೆ ಜನರು ತಮ್ಮದಾಗಿಸಿಕೊಂಡಿದ್ದಾರೆ.

ಹಿಂದೂಗಳು ಜಗತ್ತಿನ ಎಲ್ಲ ಅಲ್ಪಸಂಖ್ಯಾತರಿಗೆ ಪುನರ್ವಸತಿಯನ್ನು ಕಲ್ಪಿಸಿದವರು. ಅದರೆ, ಇವರ ಸಹಾಯಹಸ್ತದಿಂದ ಬದುಕುಳಿದ ಅವೆ ಎರಡು ಸಮಾಜಗಳು ಹಿಂದೂಗಳ ವಿರುದ್ಧವೇ ಮತಾಂತರ ಮತ್ತು ದಾಳಿಗಳ ಮೂಲಕ ತಿರುಗಿಬಿದ್ದಿರುವುದು ವಿಷಾದದ ಸಂಗತಿ.

ಎಲ್ಲರನ್ನೂ ಒಪ್ಪುವ ಮತ್ತು ಎಲ್ಲ ಧರ್ಮಗಳನ್ನೂ ಸ್ವಾಗತಿಸುವ ಹಿಂದೂಗಳ ಮಾರುಕಟ್ಟೆಗಳಲ್ಲಿ ಬಾಂಬ್ ಇಡಲಾಗುತ್ತಿದೆ. ಅವರ ಟ್ರೈನ್ ಮತ್ತು ದೇವಾಲಯಗಳು ದಾಳಿಗೊಳಗಾಗುತ್ತಿವೆ. ಅವರನ್ನು ಅವರ ಊರುಗಳಿಂದಲೇ ಓಡಿಸಲಾಗುತ್ತಿದೆ. ದೂರದರ್ಶನ ಮತ್ತು ಪತ್ರಿಕೆಗಳು ಇದರ ಮೋಜು ತೆಗೆದುಕೊಳ್ಳುತ್ತವೆ. ಮತ್ತು ಅವರ ರಾಜಕಾರಿಣಿಗಲೇ ಅವರ ಬಗೆಗೆ ಪಕ್ಷಪಾತ ಮಾಡುತ್ತಾರೆ.

ಆದ್ದರಿಂದ, ಇದು ಸಾಕೆನಿಸುತ್ತದೆ. ಒಂದು ಹಂತದಲ್ಲಿ ಒಮ್ಮೆ ಹೇಡಿಗಳೆಂದು ಕರೆದ ಹಿಂದೂಗಳು ಕೋಪದಿಂದ ಎದ್ದುನಿಲ್ಲುತ್ತಾರೆ. ಅನಿಯಂತ್ರಿತ ಆವೇಶಕ್ಕೊಳಗಾಗುತ್ತಾರೆ.

ಹೌದು. ನಾವು ಗುಜರಾತ್ ಮಾರಣಹೋಮವನ್ನು ಖಂಡಿಸಬೇಕು. ಆದರೆ, ಇದರ ಕಾರಣಗಳ ಬಗೆಗೂ ಸ್ವಲ್ಪ ದೃಷ್ಟಿ ಹಾಯಿಸಬೇಕು. ಅದು ಕೇವಲ ಯಾರೋ ಕೆಲವು ಪುಂಡರ ಗುಂಪು ನಡೆಸಿದ ೩೬ ಅಮಾಯಕ ಹಿಂದೂ ಸ್ತ್ರೀಯರ ಮತ್ತು ಮಕ್ಕಳ ಮಾರಣಹೋಮವಾಗಿರಲಿಲ್ಲ. ಗುಜರಾತೀ ಹಿಂದೂಗಳಲ್ಲಿ ವರ್ಷಗಳಿಂದ ಎಷ್ಟರ ಮಟ್ಟಿಗಿನ ಕೋಪ ಮತ್ತು ಜುಗುಪ್ಸೆ ಮಡುಗಟ್ಟಿತ್ತೆಂಬುದನ್ನು ತಿಳಿಯಲು ಆ ದಿನ ಅಹಮದಾಬಾದ್‌ನಲ್ಲಿ ,೨೫,೦೦೦ ಶಾಂತಿಪಾಲಕ ಹಿಂದೂಗಳು ಕೋಪದಿಂದ ಒಮ್ಮೆಲೇ ನಡೆದುಬಂದ ಆ ಒಂದು ಕ್ಷಣ ಸಾಕು.

ಜಮ್ಮು ಮತ್ತು ಅಮರನಾಥ ವಿವಾದದಲ್ಲಿ ಆಗಿರುವುದೂ ಇದೇ. ಹಿಂದೂಗಳು ಯಾವತ್ತೂ ತಮ್ಮ ಸರ್ಕಾರ ಮೆಕ್ಕಾ ಯಾತ್ರೆಗಾಗಿ ಭಾರತೀಯ ಮುಸ್ಲಿಮರಿಗೆ ನೀಡುವ ಕೋಟಿಗ್ಟಲೇ ಸಹಾಯಧನದ ಬಗೆಗೆ ಚಕಾರವೆತ್ತಿಲ್ಲ. ಆದರೆ, ಅದೇ ಹಿಂದೂಗಳಿಗೆ ೧೫,೦೦೦ ಅಡಿ ಎತ್ತರದಲ್ಲಿ ಅಮರನಾಥ ದೇವಾಲಯದ ಪೂಜೆಗೆ ಸಹಾಯವಾಗುವಂತೆ ಆಶ್ರಯ, ಶೌಚಾಲಯ ಮತ್ತು ಸಾಮಾನ್ಯ ಆವಶ್ಯಕತೆಗಳನ್ನು ಪೂರೈಸಲು ಸರ್ಕಾರ ಭೂಮಿಯನ್ನು ನೀಡಲು ನಿರಾಕರಿಸಿದಾಗ ಆವೇಶದಿಂದ ಮುನ್ನುಗ್ಗಿದರು.

ಶಾಂತಿ ಮತ್ತು ಸಹಬಾಳ್ವೆಗಾಗಿ ಕರೆಕೊಡುವ ಬದಲು ಹಿಂದೂ ರಾಜಕಾರಿಣಿಗಳು, ಪತ್ರಕರ್ತರು ಮತ್ತು ಧಾರ್ಮಿಕ ನಾಯಕರು ಭೇಟಿಕೊಡುವ ೫೦೦ ವರ್ಷಗಳ ಹಳೆಯದಾದ ದರ್ಗಾವನ್ನು ರಕ್ಷಿಸಲು ಇಷ್ಟೆಲ್ಲ ನಾಟಕ ಮಾಡುವುದರ ಬದಲು, ಹಿಂದೂಗಳು ನೋವಿನ ಮೂಲಕಾರನವನ್ನು ಅರಿತು ಅವರಿಗೆ ನೋವನ್ನು ಗುಣಪಡಿಸುವಲ್ಲಿ ಕ್ರಮ ಜರುಗಿಸಲಿ.

ಮಾಧ್ಯಮದವರು ಸ್ವಲ್ಪ ಆತ್ಮಾವಲೋಕನ ಮಾಡಿಕೊಳ್ಳಬೇಕು. ಹಿಂದೂಗಳಿಗೆ ಸಾಕಾಗಿದೆ. ಈ ಸರ್ಕಾರ ಅಥವಾ ಮುಂದಿನ ಸರ್ಕಾರ ಹಿಂದೂಗಳ ಈ ನೋವನ್ನು ಬಗೆಹರಿಸದಿದ್ದಲ್ಲಿ ಇನ್ನೂ ಹೆಚ್ಚಿನ ಜಮ್ಮೂ ಹಿಂದೂಗಳು ಮುಂದಿನ ದಿನಗಳಲ್ಲಿ ಮತ್ತು ವರ್ಷಗಳಲ್ಲಿ ಆವೇಶದಿಂದ ಎದ್ದೇಳಬಹುದು. ಆಗ ಪರಿಣಾಮವನ್ನು ಎದುರಿಸಬೇಕಾದೀತು. ಈಗಲೇ ಎಚ್ಚೆತ್ತುಕೊಳ್ಳುವುದೊಳಿತು.

(ಆಂಗ್ಲ ಮೂಲ - ಫ್ರಾಂಕ್ವಾ ಗೋತಿಯೇ)

No comments: