ತುಷ್ಟೀಕರಣ ಯಾವತ್ತೂ ರಾಷ್ಟ್ರದ ಹಿತಕಾರಿಯಲ್ಲ
ಕಾಶ್ಮೀರದಲ್ಲಿ ಮೊಘಲ್ ರೋಡ್‌ಅನ್ನು ನಿರ್ಮಿಸಲು ೧೦,೦೦೦ ವನ್ಯಮರಗಳನ್ನು ಕಡಿದುಹಾಕಲಾಗುತ್ತದೆ. ಆಗ ಯಾರೂ ಚಕಾರವೆತ್ತುವುದಿಲ್ಲ. ಮೊಬೈಲ್ ಟವರ್‌ಗಳನ್ನು ಹೂಳಲು ಕಾಶ್ಮೀರಕಣಿವೆಯಲ್ಲಿ ಎಕರೆಗಟ್ಟಲೇ ಭೂಮಿ ನೀಡಲಾಗುತ್ತದೆ. ಯಾರೂ ಕಿರುಚುವುದಿಲ್ಲ. ಕಾಶ್ಮೀರ ಕಣಿವೆಯಲ್ಲಿ ನೂರಾರು ಎಕರೆಗಟ್ಟಲೇ ಭೂಮಿ ಕುಡಿಯುವ ನೀರು ಮತ್ತು ಚರಂಡಿಗಾಗಿ ನಿಗದಿಯಾಗಿದೆ. ಯಾರೂ ತಡೆಯೊಡ್ಡುವುದಿಲ್ಲ. ಆದರೆ ೪೦ ಹೆಕ್ಟೇರ್‌ಗಳ ಜನವಸತಿರಹಿತ ಭೂಮಿಯನ್ನು ಅಮರನಾಥ ಯಾತ್ರಿಕರಿಗೆ ಉತ್ತಮ ವ್ಯವಸ್ಥೆ ಒದಗಿಸಲು ಶ್ರೀ ಅಮರನಾಥ ಶ್ರೈನ್ ಬೋರ್ಡ್‌ಗೆ ನೀಡಿದಾಗ ಆಕಾಶ-ಭೂಮಿ ಒಂದಾಗುವಂತೆ ಕಿರುಚಾಟ, ವಿರೋಧಗಳು ಶುರುವಾಗುತ್ತವೆ. ಏಕೆ ? ಏಕೆಂದರೆ ಕಾಶ್ಮೀರ ಕಣಿವೆಯಲ್ಲಿ ಶ್ರೀ ಅಮರನಾಥ ಶ್ರೈನ್ ಬೋರ್ಡ್ ಹಿಂದೂಗಳಿಗೆ ಒಳ್ಳೆಯದನ್ನು ಮಾಡುತ್ತಿದೆ. ಇದು ಅತ್ಯಂತ ಸರಳ. ಚೆನ್ನಾಗಿ ರಾಜಕೀಯ ಮಾಡುವ ರಾಜಕಾರಿಣಿಗಳು, ವಿಧಿವಿಧಾತರು ಮತ್ತು ಆಡಳಿತ ನಡೆಸುವವರು ಇದು ಧರ್ಮಕ್ಕೆ ಸಂಬಂಧಿಸದ ವಿಷಯವೆಂದು ಹೇಳಬಹುದು. ಆದರೆ, ಈ ವಿಷಯ ಸಂಪೂರ್ಣವಾಗ ಧರ್ಮಕ್ಕೆ ಸಂಬಂಧಿಸಿದುದೇ. ಇದು ಕಾಶ್ಮೀರ ಕಣಿವೆಯನ್ನು ಸಂಪೂರ್ಣವಾಗಿ ಇಸ್ಲಾಮೀಕರಣಗೊಳಿಸುವ ಕೋಮುಶಕ್ತಿಗಳ ಹುನ್ನಾರ. ಈ ಕೆಲಸವನ್ನವರು ವ್ಯವಸ್ಥಿತವಾಗಿ ಪ್ರತಿಯೊಂದು ಹಿಂದೂ ಸಂಕೇತವನ್ನು ಮತ್ತು ಬೇರೆ ನಿಷ್ಠೆಗಳನ್ನು ನಾಶಗೊಳಿಸುವ ಮೂಲಕ ಮಾಡುತ್ತಿದ್ದಾರೆ. ಇವತ್ತು ಈ ಕೋಮುಶಕ್ತಿಗಳು ಯಾತ್ರೆಯ ವ್ಯವಸ್ಥೆಗಳನ್ನು ಒದಗಿಸಲು ಅಡ್ಡಿ ಉಂಟುಮಾಡುತ್ತಿದ್ದಾರೆ. ನಾಳೆ ಇವರು ಇದನ್ನು ಮೀರಿ ಯಾತ್ರೆಯನ್ನೇ ರದ್ದುಪಡಿಸಬೇಕೆಂದು ಗಲಾಟೆ ಮಾಡಬಹುದು. ಈ ಭೂಮಿಯ ಹಸ್ತಾಮತರ ವಿವಾದವು ಈಗಾಗಲೇ ಗುಲಾಂ ನಬಿ ಆಜಾದರ ಸರ್ಕಾರವನ್ನು ಬಲಿ ತೆಗೆದುಕೊಂಡಿದೆ ಮತ್ತು ಈ ರಾಜ್ಯದ ಅರ್ಥವ್ಯವಸ್ಥೆಯನ್ನು ಹಾನಿಗೊಳಿಸುವ ಹಂತದಲ್ಲಿದೆ. ಈ ಭೀತಿಯ ವಾತಾವರಣವು ಈಗಾಗಲೇ ಕಣಿವೆಗೆ ಭೇಟಿಮಾಡುವ ಯಾತ್ರಿಕರ ಸಂಖ್ಯೆಯನ್ನು ಇಳಿಮುಖವಾಗಿಸಿದೆ. ಮತ್ತು ಜಮ್ಮು ಪ್ರಾಂತದ ಭೂಮಿ ನೀಡುವಿಕೆಯ ಪರವಾದ ಗುಂಪು ನಡೆಸಿರುವ ದಾಳಿಗಳು ಮತ್ತು ಬಂದ್‌ಗಳು ಆ ಪ್ರದೇಶದ ಜೀವನವನ್ನು ನಿಶ್ಶಕ್ತಗೊಳಿಸಿದೆ. ಈಗಿನವರೆಗೂ ಕಣಿವೆಯಲ್ಲಿ ಅದು ಕೋಮುಶಕ್ತಿಗಳ ಸೋಲು-ಗೆಲುವಿನ ಹಾವು-ಏಣಿ ಆಟದಂತಾಗಿದೆ.
ಭೂಮಿಯನ್ನು ನೀಡಬಾರದೆನ್ನುವ ಸ್ಥಳೀಯ ಕಾಶ್ಮೀರಿಗಳ ವಾದವನ್ನಿಲ್ಲಿ ಸ್ವಲ್ಪ ಕೇಳೋಣ :
೧. ಯಾತ್ರಿಕರಿಂದ ಬಳಸಲ್ಪಡುವ ಈ ಭೂಮಿಯು ಆ ಪ್ರದೇಶದ ಪ್ರಕೃತಿಯು ಮೇಲೆ ಅಡ್ಡಪರಿಣಾಮ ಬೀರಬಹುದು.
೮೯ ಕಿ.ಮೀ. ಉದ್ದದ ಮೊಘಲ್ ರೋಡ್‌ಅನ್ನು ನಿರ್ಮಿಸಲು ೧೦,೦೦೦ ವನ್ಯಮರಗಳನ್ನು ಕಡಿಯಲು ಇದೇ ಸರ್ಕಾರ ಆದೇಶಿಸಿದಾಗ ಈ ಮರ-ತಬ್ಬುವ ಪರತಬ್ಬುವ ಪರಿಸರವಾದಿಗಳು ಎಲ್ಲಿದ್ದರೆಂದು ಸೋಜಿಗವಾಗುತ್ತದೆ.
೪೦ ಹೆಕ್ಟೇರ್‌ಗಳ ಭೂಮಿಯು ತಾತ್ಕಾಲಿಕ ವಸತಿಗಳನ್ನು ನಿರ್ಮಿಸಲು ಮತ್ತು ಯಾತ್ರಿಕರ ರಾತ್ರಿಕಾಲೀನ ವ್ಯವಸ್ಥೆಗಾಗಿ ಬಳಸಲ್ಪಡುತಿತ್ತು. ಪ್ರತಿದಿನದ ತ್ಯಾಜ್ಯವನ್ನು ಸರಿಯಾಗಿ ನಿರ್ವಹಿಸಿದರೆ ಅದು ಗೊಬ್ಬರವಾಗಿ ಮಾರ್ಪಟ್ಟು ಉಪಯೋಗಕ್ಕೂ ಬರುತ್ತಿತ್ತು. ಆದರೆ, ಸಾಮಾನ್ಯಜ್ಞಾನವಿಲ್ಲದಿರುವ, ಜನರನ್ನು ಮನೆಬಿಟ್ಟು ಬೀದಿಗೆ ಬರುವಂತೆ ಮಾಡುವ ಈ ರಾಜಕಾರಿಣಿಗಳ ಜೊತೆಗೆ ಯಾರು ವಾದ ಮಾಡುತ್ತಾರೆ ?
೨. ಹೊರರಾಜ್ಯದ ಹಿಂದುಗಳನ್ನು ಇಲ್ಲಿ ಉಳಿದುಕೊಳ್ಳುವಂತೆ ಮಾಡುವ ಮೂಲಕ ಜನಸಂಖ್ಯೆಯನ್ನು ಬದಲಾಯಿಸುವ ಸರ್ಕಾರದ ಹುನ್ನಾರ ಇದು. ಯಾರು ಈ ಮಾತನ್ನು ಹೇಳುತ್ತಿದ್ದಾರೆಂಬುದನ್ನು ಗಮನಿಸಿ. ೧೮ ವರ್ಷಗಳ ಹಿಂದಿನ ಇತಿಹಾಸವನ್ನು ಒಮ್ಮೆ ತಿರುವಿ ಹಾಕಿದರೆ ಜನಸಂಖ್ಯೆಯನ್ನು ಯಾರು ಬದಲಾಯಿಸಿದರೆಂದು ತಿಳಿದೀತು. ಇಸ್ಲಾಮೀ ಭಯೋತ್ಪಾದಕರು ಈ ಕಣಿವೆಯ ಜನಸಂಖ್ಯೆಯ ಹೆಚ್ಚಿನ ಭಾಗವಾದ ಹಿಂದೂಗಳನ್ನು ಧಾರ್ಮಿಕ ಮಾರಣಹೋಮದ ಮೂಲಕ ಓಡಿಸಿದರು. ನಾವು ಜನಸಂಖ್ಯೆಯನ್ನು ಬದಲಾಯಿಸಲು ಬಿಡಲಾರೆವು ಎಂದು ಹೇಳುವ ಈ ಮಹಾನುಭಾವರು ಹಿಂದೂಗಳ ಮಾರಣಹೋಮವಾದಾಗ ಎಲ್ಲಿದ್ದರೆಂದು ಆಶ್ಚರ್ಯವಾಗುತ್ತದೆ.
ಯಾರಿಗಾದರೂ ಕೆಲವು ಪ್ರಶ್ನೆಗಳೇಳುತ್ತವೆ.
ಅ) ಹಿಂದೂಗಳು ಹೆಚ್ಚು ಹೆಚ್ಚು ಸೇರಿ ಕಣಿವೆಯ ಕಣಿವೆಯ ಜನಸಂಖ್ಯೆಯನ್ನು ಬದಲಾಯಿಸಲು ೪೦ ಹೆಕ್ಟೇರ್ ಭೂಮಿ ಸಾಕೇ ?
ಆ) ಜನಸಂಖ್ಯಾ ಹೆಚ್ಚಳದ ವಾದವನ್ನು ಮುಂದಿಡುತ್ತಿರುವ ಈ ಕಣಿವೆಯ ಮುಸ್ಲಿಮರು ಜಮ್ಮು-ಕಾಶ್ಮೀರದ ಹಿಂದೂಗಳಿಗೆ ಕಣಿವೆಯಲ್ಲಿ ಪ್ರವೇಶವಿಲ್ಲ ಎಂದು ಪರೋಕ್ಷವಾಗಿ ಹೇಳುತ್ತಿದ್ದಾರೆಯೇ ?
ಜಮ್ಮು-ಕಾಶ್ಮೀರದ ಪ್ರಜಾಪ್ರತಿನಿಧಿಪತ್ರ ಪಡೆದ ಹಿಂದುವು ಸಾಂವಿಧಾನಿಕವಾಗಿ ಆ ರಾಜ್ಯದ ಯಾವ ಕಡೆ ಬೇಕಾದರೂ ಭೂಮಿಯನ್ನು ಕೊಂಡುಕೊಳ್ಳಬಹುದು. ಹಾಗಾದರೆ ಆ ಜಾಗವು ಅಮರನಾಥದ ಸುತ್ತಲೂ ಆಗಿರಬಾರದೇಕೆ ? ಆ ಹಿಂದೂಗಳು ಆ ಜಾಗದಲ್ಲಿ ಭೂಮಿಯನ್ನು ಹೊಂದಲಾರರೆಂದು ಕಣಿವೆಯ ಮುಸ್ಲಿಮರು ಹೇಳುತ್ತಿರುವರೇ ? ಅವರ ಮಾತಿನ ಅರ್ಥವೇನು ? ಅವರು ಏನನ್ನು ತಿಳಿಸಲು ಬಯಸುತ್ತಿದ್ದಾರೆ ? ಪರಿಸರ ರಕ್ಷಣೆಯ ನೆಪದಲ್ಲಿ ಹಿಂದೂಗಳು ಆ ಜಾಗದಲ್ಲಿ ತಳ ಊರದಂತೆ ತಡೆಯುತ್ತಿರುವರೇ ?
ಕಾಶ್ಮೀರೀ ಮುಸ್ಲಿಮರು ಮಾಡುವ ಇನ್ನೊಂದು ವಾದವೆಂದರೆ ೩೭೦ನೇ ಕಲಮಿನ ಪ್ರಕಾರ ಯಾವುದೇ ಹೊರಗಿನವರಿಗೆ ಜಮ್ಮು-ಕಾಶ್ಮೀರಿನಲ್ಲಿ ಭೂಮಿ ಪಡೆಯುವ ಹಕ್ಕಿಲ್ಲ. ಆದ್ದರಿಂದ, ಶ್ರೈನ್ ಬೋರ್ಡ್‌ಗೆ ಭೂಮಿ ನೀಡಲಾಗದು ಎಂಬುದು ಅವರ ವಾದ. ಅವರ ಈ ವಾದಕ್ಕೆ ಕಾರಣ ಹೊರಗಿನವರಾದ ಜಮ್ಮು-ಕಾಶ್ಮೀರ ರಾಜ್ಯದ ರಾಜ್ಯಪಾಲರು ಆ ಶ್ರೈನ್ ಬೋರ್ಡ್‌ನ ಅದ್ಯಕ್ಷರು.
ಇಲ್ಲಿ ಯಾರೂ ಮೂಕರಲ್ಲ. ಭೂಮಿಯನ್ನು ಹಸ್ತಾಂತರ ಮಾಡುತ್ತಿರುವುದು ಜಮ್ಮು-ಕಾಶ್ಮೀರ ಸರ್ಕಾರವೇ ಹುಟ್ಟುಹಾಕಿರುವ ಜಮ್ಮು-ಕಾಶ್ಮೀರದ ಅಮರನಾಥ ಶ್ರೈನ್ ಬೋರ್ಡ್‌ಗೆ. ಮತ್ತು ಹಸ್ತಾಂತರವಾಗುತ್ತಿರುವುದು ಆ ಬೋರ್ಡ್‌ನ ಚೇರ್‌ಮೆನ್‌ಗಲ್ಲ.
ವಾದದ ಹೊರಪದರನ್ನು ನೋಡಿದ ಬಳಿಕ ಈಗ ಒಳಪದರವನ್ನು ನೋಡೋಣ : ಮುಫ್ತಿ ಮೊಹಮದ್ ಸಯೀದ್ - ಗುಲಾಂ ನಬಿ ಆಜಾದರ ಸಮ್ಮಿಶ್ರ ಸರ್ಕಾರದ ಮೊದಲ ಮೂರು ವರ್ಷಗಳಲ್ಲಿ ಈ ಮೂಲ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿತ್ತು ಮತ್ತು ಹಸಿರು ನಿಶಾನೆ ನೀಡಲಾಯಿತು. ಮುಫ್ತಿ ಮೊಹಮದ್ ಸಯೀದ್‌ರ ಮಂತ್ರಿಮಂಡಲದಲ್ಲಿನ ಅಋಣ್ಯ ಖಾತೆ ಸಚಿವರಾದ ಖಾಜಿ ಮೊಹಮ್ಮದ್ ಅಫ್ಜಲ್ ಮತ್ತು ಕಾನೂನು ಸಚಿವರಾದ ಮುಜಫರ್ ಹುಸೇನ್ ಬೇಗ್‌ರವರೇ ಇದಕ್ಕೆ ಹಸಿರು ನಿಶಾನೆಯನ್ನು ನೀಡಿದವರು. ಆಜಾದ್‌ರವರು ತಮ್ಮ ಮೂರು ವರ್ಷಗಳ ಎರಡನೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮೇಲೆ ಅದಕ್ಕೆ ಕೊನೆಯದಾಗಿ ಹಸಿರು ನಿಶಾನೆ ತೋರಿಸಲಾಯಿತು.
ಮುಫ್ತಿ ಸಯೀದ್ ನೇತೃತ್ವದ ಇದೇ ಪಿಡಿಪಿ ಸರ್ಕಾರಕ್ಕೆ ಯಾವುದೇ ತಕರಾರು ಇರಲಿಲ್ಲ. ಆದರೆ, ಹಿಜ್ಬುಲ್ ಮುಜಾಹಿದ್ದೀನ್ ಮುಂತಾದ ಭಯೋತ್ಪಾದಕ ಸಂಘಟನೆಗಳು ಇದರ ಪರವಾಗಿಲ್ಲವೆಂದು ತಿಳಿದ ಕೂಡಲೇ ಅದೇ ಪಿಡಿಪಿ ಸರ್ಕಾರವು - ಬರುವ ಅಸೆಂಬ್ಲಿ ಚುನಾವಣೆಯಲ್ಲಿ ಮುಸ್ಲಿಮರ ಭಾವನೆಗಳಿಗೆ ಘಾಸಿಯಾದೀತೆಂದು, ಅದರಿಂದ ಅವರ ಓಟುಗಳು ಕೈತಪ್ಪಿಹೋಗಬಹುದೆಂಬ ಭಯದಿಂದ ಹಿಂದೆಗೆಯಿತು.
ಇದು ಚುನಾವಣೆಯ ವರ್ಷವಾದ್ದರಿಂದ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಇತರ ಪ್ರಾದೇಶಿಕ ಪಕ್ಷಗಳು, ಪಿಡಿಪಿಯೊಂದೇ ಇದರ ರಾಜಕೀಯ ಲಾಭವನ್ನು ತೆಗೆದುಕೊಳ್ಳುವುದನ್ನು ನೋಡಿ ಸುಮ್ಮನೆ ಇರಲಾರರು. ಅವರು ಅಖಾಡಾಕ್ಕಿಳಿದರು ಮತ್ತು ಸ್ಥಾನೀಯ ಮುಸ್ಲಿಮರನ್ನು ಮೂರ್ಖರನ್ನಾಗಿಸಿ ಅವರ ಭಾವನೆಗಳನ್ನು ಬಡಿದೆಬ್ಬಿಸಿದರು. ಉಳಿದುದು ಕಾಂಗ್ರೆಸ್. ಚುನಾವಣೆಯ ವರ್ಷದಲ್ಲಿ ಕಾಂಗ್ರೆಸ್ ಇದರ ಲಾಭವನ್ನು ಪಡೆದುಕೊಂಡೇ ತೀರುತ್ತದೆ.
ಆಜಾದ್‌ರು ಇದಕ್ಕಾಗಿ ಸ್ವಲ್ಪವೂ ತಡಮಾಡಲಿಲ್ಲ. ತಮ್ಮ ಮಂತ್ರಿಮಂಡಲದ ನಿರ್ಣಯವನ್ನು ಹಿಂದಕ್ಕೆ ಪಡೆದರು. ಅವರು ಅಲ್ಲಿಗೇ ನಿಲ್ಲಲಿಲ್ಲ. ಇದೂ ಒಂದು ಬಗೆಯ ತುಷ್ಟೀಕರಣವೇ ! ಇದು ನಿಜವಾದ ಕಥೆ.
ಇದು ಮುಫ್ತಿ ಸಯೀದ್‌ರ ವೋಟ್‌ಬ್ಯಾಂಕ್ ಸೆಳೆಯುವ ತಂತ್ರ. ಅವರು ದೇಶದಲ್ಲಿನ ಲಕ್ಷಾಂತರ ಹಿಂದೂಗಳ ಭಾವನೆಗಳೊಂದಿಗೆ ರಾಜಕೀಯ ಚದುರಂಗದಾಟವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಇದು ಅವರ ರಾಜಕೀಯ ಶೈಲಿ.
ಈಗ ನಮಗೆ ನಿಜವಾದ ಕಥೆ ತಿಳಿದಿದೆ. ಆದರೆ ಅಲ್ಲಿಗೆ ಯಾತ್ರೆ ಮಾಡಬಯಸುವ ಹಿಂದೂ ಯಾತ್ರಿಕರ ಗತಿಯೇನು ? ಅವರು ತಮ್ಮ ಧರ್ಮವನ್ನು ಸಂಪೂರ್ಣ ರಕ್ಷಣೆ, ಅಭಿಮಾನ ಮತ್ತು ಗೌರವದಿಂದ ಅನುಸರಿಸಲು ಮೂಲಭೂತ ಹಕ್ಕುಗಳಿಲ್ಲವೇ ?
ಹಿಂದೂಗಳಿಗೆ ಸ್ವಲ್ಪವೂ ನಾಚಿಕೆಯಿಲ್ಲವೇ ? ಅವಮಾನ ಎನಿಸುವುದಿಲ್ಲವೇ ? ೮೦ ಶೇಕಡಾ ಹಿಂದುಗಳೇ ತುಂಬಿರುವ, ಹಿಂದೂಗಳೇ ಬಹುಸಂಖ್ಯಾತರಾಗಿರುವ ಈ ದೇಶದಲ್ಲಿ ಹಿಂದೂಗಳು ಸುಲಭವಾಗಿ ಅಮರನಾಥ ದರ್ಶನ ಮಾಡಲಾರರೇ ? ಅದಕ್ಕಾಗಿ ಒಳ್ಳೆ ವ್ಯವಸ್ಥೆಯನ್ನು ಬಯಸಲಾರರೇ ? ಇಂತಹದು ನಡೆಯುವುದು ಭಾರತದಲ್ಲಿ ಮಾತ್ರ. ಇಲ್ಲಿ ಬಹುಸಂಖ್ಯಾತ ಹಿಂದೂಗಳು ಅಲ್ಪಸಂಖ್ಯಾತರಿಗೋಸ್ಕರ ತ್ಯಾಗ ಮಾಡುತ್ತಾರೆ. ಏಕೆಂದರೆ ಇಲ್ಲಿನ ರಾಜಕಾರಿಣಿಗಳು ಮುಸ್ಲಿಂ ತುಷ್ಟೀಕರಣಕ್ಕೆ ನಿರತರಾಗಿದ್ದಾರೆ. ಅದಕ್ಕಾಗಿ ಹಿಂದೂಗಳು ಬೆಲೆ ತೆರುತ್ತಾರೆ.
ನ್ಯಾಷನಲ್ ಕಾನ್ಫರೆನ್ಸ್ ನಾಯಕರಾದ ಓಮರ್ ಅಬ್ದುಲ್ಲಾ ದೂರದರ್ಶನದ ಚರ್ಚೆಯಲ್ಲಿ ಈ ಬಗೆಗೆ - ಈ ಯಾತ್ರೆಯು ವರ್ಷಗಳಿಂದ ನಡೆಯುತ್ತಿದ್ದು ಈಗೇಕೆ ಭೂಮಿ ಮತ್ತು ಸವಲತ್ತುಗಳು? ಎಂದು ಕೇಳಿದರು. ಅವರ ಮಾತಿನ ಒಳ ಅರ್ಥವೇನು ?
ಆದರೆ, ಹಜ್ ಯಾತ್ರೆಯ ಬಗೆಗೆ ಅವರು ಇಂತಹ ಮಾತುಗಳನ್ನಾಡುವುದನ್ನು ನಾವು ಯಾವತ್ತೂ ಕೇಳಿಲ್ಲ. ಪ್ರತಿ ವರ್ಷ ಕಾಶ್ಮೀರ ಮತ್ತು ಭಾರತ ಮತ್ತು ಉಳಿದ ಕಡೆಗಳಲ್ಲಿನ ಮುಸ್ಲಿಮರಿಗೆ ಹಜ್‌ಗಾಗಿ ಒಳ್ಳೆಯ ಸವಲತ್ತುಗಳು ಮತ್ತು ಸಬ್ಸಿಡಿ ಬೇಕು. ಆದರೆ, ಅಮರನಾಥ ಯಾತ್ರಿಕರಿಗೆ ಒಳ್ಳೆಯ ಸವಲತ್ತುಗಳನ್ನು ನೀಡುವ ವ ವಿಷಯ ಬಂದಾಗ ಮಾತ್ರ ವಿವಾದವಾಗುತ್ತದೆ !
ಮಳೆಯ ಅಬ್ಬರ, ಹಿಮಪಾತ, ಭೂಕುಸಿತ ಮತ್ತು ಪ್ರತಿಕೂಲ ಹವಾಮಾನವು ೧೯೯೬ರಯಾತ್ರೆಯ ಸಮಯದಲ್ಲಿ ೨೫೦ ಯಾತ್ರಿಕರನ್ನು ಬಲಿತೆಗೆದುಕೊಂಡಿತು. ಆದರೆ, ಓಮರ್ ಅಬ್ದುಲ್ಲಾರಿಗೆ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವ ತುರುಸು.
ಕೆಲವರು ಹೀಗೆ ವಾದ ಮಾಡಬಹುದು - ಗಲಾಟೆ ಮಾಡಿದ್ದು ಕಣಿವೆಯ ಮುಸ್ಲಿಮರಲ್ಲ. ಆದರೆ, ರಾಜಕೀಯ ಪಕ್ಷಗಳು ಮತ್ತು ಭಯೋತ್ಪಾದಕ ಸಂಘಟನೆಗಳು ಈ ಭೂಮಿ ಹಸ್ತಾಂತರಕ್ಕೆ ವಿರೋಧ ವ್ಯಕ್ತಪಡಿಸಿದರೆಂದು. ಮತ್ತು ಜನರು ಬೀದಿಗಿಳಿಯುವಂತೆ ಮಾಡಿದ್ದು ಇವರೇ ಎಂದು.
ಈ ವಾದವನ್ನು ನಾನು ಒಪ್ಪಿಬಿಡಬಹುದು. ಆದರೆ ಕಣಿವೆಯ ಜನರು ಮಾಡಿದ ಕೆಲಸಗಳನ್ನು ಅಲ್ಲಗಳೆಯಲಾದೀತೇ ? ಅವರು ಯಾವಾಗಲೂ ಈ ಮೂಲಭೂತ ಶಕ್ತಿಗಳಿಗೆ ಬೆಂಬಲ ನೀಡಲಾರರು. ಮತ್ತು ಅದೇ ಸಮಯಕ್ಕೆ ಸಾಚಾತನವನ್ನು ಸಾಬೀತುಪಡಿಸಲಾರರು.
ಹಿಂದೆ ೧೯೮೯-೯೦ರಲ್ಲಿ ಅವರು ಇದೇ ಕೆಲಸವನ್ನು ಮಾಡಿದ್ದರು. ಆಗ ನಡೆದ ಹಿಂದೂಗಳ ಸಾಮೂಹಿಕ ಮಾರಣಹೋಮದಲ್ಲಿ ಇವರು - ಒಂದೋ ಮೂಕಪ್ರೇಕ್ಷಕರಾಗಿದ್ದರು ಇಲ್ಲವೇ ಬಾಯಿಮಾತಿನ ಸಮರ್ಥಕರಾಗಿದ್ದರು. ಅವರು ಒಳ್ಳೆಯ ನಾಗರೀಕರಾಗಬಯಸಿದರೆ, ಈ ವಿನಾಶಕಾರೀ ಶಕ್ತಿಗಳ ವಿರುದ್ಧ ದನಿಯೆತ್ತಬೇಕು ಮತ್ತು ಈ ಹುಚ್ಚುತನವನ್ನು ನಿಲ್ಲಿಸಬೇಕಾದುದು ಆವಶ್ಯಕ.
ಅವರು ಪ್ರಾಮಾಣಿಕವಾಗಿ ಶಾಂತಿಯನ್ನು ಬಯಸುವುದಾದರೆ, ಅವರು ಎದ್ದುನಿಲ್ಲಬೇಕು ಮತ್ತು ಈ ಭಯೋತ್ಪಾದಕರನ್ನು(ಆ ಸಂಘಟನೆಗಳನ್ನು ಮತ್ತು ಅದರ ಪ್ರಮುಖರನ್ನು) ಬಹಿಷ್ಕರಿಸಬೇಕು. ಅವರಿದನ್ನು ಬಯಸುವುದಿಲ್ಲವಾದರೆ ಆ ತತ್ತ್ವಗಳಂತೆ ಅದು ಹುಚ್ಚುತನಕ್ಕೆ ಸಮನಾದುದು ಮತ್ತು ಅವರನ್ನು ಆ ಕೆಲಸಗಳಿಗೆ ಜವಾಬ್ದಾರರನ್ನಾಗಿಸಬೇಕು.
ಒಂದು ರಾಷ್ಟ್ರದಲ್ಲಿ ತುಷ್ಟೀಕರಣ ಯಾವತ್ತಿಗೂ ಒಳ್ಳೆಯದಲ್ಲ. ಅದರಲ್ಲಿಯೂ, ವಿಭಿನ್ನ ಸಂಸ್ಕೃತಿ ಮತ್ತು ಪದ್ಧತಿಗಳನ್ನು ಹೊಂದಿರುವ ಭಾರತದಂತಹ ರಾಷ್ಟ್ರದಲ್ಲಿ ಇದು ನಡೆಯಲೇಕೂಡದು. ಅದು ಶಾಬಾನೋ ಪ್ರಕರಣದಲ್ಲಿ ಸಂವಿಧಾನವನ್ನು ತಿದ್ದುವ ಕೆಲಸವೇ ಆಗಿರಬಹುದು ಅಥವಾ ರುಬಯ್ಯಾ ಸಯೀದ್ ಅಪಹರಣ ಪ್ರಕರಣದಲ್ಲಿ ಭಯೋತ್ಪಾದಕರ ಬಿಡುಗಡೆಯೇ ಇರಬಹುದು, Iಅ - ೮೧೪ ವಿಮಾನ ಅಪಹರಣವಾದಾಗಿನ ವಿನಾಶಕಾರೀ ಭಯೋತ್ಪಾದಕರ ಬಿಡುಗಡೆಯೇ ಇರಬಹುದು, ೩೭೦ನೇ ತಾತ್ಕಾಲಿಕ ಕಲಮಿನ ಮುಂದುವರಿಕೆಯೇ ಇರಬಹುದು - ಈ ಎಲ್ಲ ಕೆಲಸಗಳೂ ದೇಸವನ್ನು ಒಂದು ದಿನ ವಿನಾಶಕ್ಕೆ ದೂಡುತ್ತವೆ.
ಜಾತ್ಯತೀತತೆ ಹಾಗೂ ಪ್ರಜಾಪ್ರಭುತ್ವವನ್ನು ಆಧರಿಸಿರುವ ಮತ್ತು ಎಲ್ಲರಿಗೂ ಒಳ್ಳೆಯದನ್ನು ಬಯಸುವ ರಾಷ್ಟ್ರದಲ್ಲಿ ಇಂತಹ ತುಷ್ಟೀಕರಣಗಳಿಗೆ ಯಾವತ್ತೂ ಅವಕಾಶ ನೀಡಬಾರದು. ಈ ದೇಶದ ನಾಯಕರು ಮತ್ತು ಪ್ರಜೆಗಳು ಈ ಬಗೆಗೆ ಎಚ್ಚರ ವಹಿಸಬೇಕು.
(ಆಂಗ್ಲ ಮೂಲ - ಲಲಿತ್ ಕೌಲ್ )
No comments:
Post a Comment