Swaagatam

स्वागतम्

Wednesday, March 4, 2009

ಕಾಶ್ಮೀರದ ತಾಲಿಬಾನೀಕರಣ
ಲೆಫ್ಟಿನೆಂಟ್ ಕರ್ನಲ್ ಎಸ್. ಕೆ. ಸಿನ್ಹಾರವರು ಜಮ್ಮು-ಕಾಶ್ಮೀರದ ಮಾಜಿ ರಾಜ್ಯಪಾಲರು(೨೦೦೩-ಮೇ ೨೦೦೮). ಅವರ ಕಾಲದಲ್ಲೇ ಅಮರನಾಥ ಪ್ರವಾಸಿಗರಿಗೆ ತಾತ್ಕಾಲಿಕ ವಸತಿಯನ್ನು ಕಲ್ಪಿಸುವ ಯೋಜನೆ ರೂಪುಗೊಂಡಿತ್ತು. ದಿ ವೀಕ್ನಲ್ಲಿ ಪ್ರಕಟವಾದ ಅವರ ಸಂದರ್ಶನದ ಆಯ್ದ ಭಾಗ ಇಲ್ಲಿದೆ -

* ನೀವೇಕೆ ಅಮರನಾಥ ಯಾತ್ರೆಯ ಅವಧಿಯನ್ನು ವಿಸ್ತರಸಿದಿರಿ ?
೨೦೦೩ರ ವರೆಗೂ ಯಾತ್ರೆ ಒಂದು ತಿಂಗಳಿನದೇ ಆಗಿತ್ತು. ೨೦೦೪ರಲ್ಲಿ ಹಿಂದೂ ಪಂಚಾಂಗದಂತೆ ಆ ವರ್ಷ ಮಲಮಾಸವಿತ್ತು. ಅಂದರೆ ಎರಡು ಶ್ರಾವಣಗಳಿದ್ದುವು. ಆದ್ದರಿಂದ, ಶ್ರಾವಣಮಾಸದಲ್ಲಿ ನಡೆಯುವ ಈ ಯಾತ್ರ್ರೆಯ ಅವಧಿಯನ್ನು ವಿಸ್ತರಿಸಿದುದು ಸಹಜವೇ ಆಗಿತ್ತು. ಮತ್ತು ಸಂಘಟಕರಿಗೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಯಾತ್ರಿಕರನ್ನು ವ್ಯವಸ್ಥಿತವಾಗಿ ದರ್ಶನ ಪಡೆಯುವಂತೆ ಮಾಡಲು ಹೆಚ್ಚಿನ ಅವಧಿ ಸಹಕಾರಿಯಾಗುತ್ತದೆ. ನಿತಿಷ್ ಸೇನ್ ಗುಪ್ತಾ ಕಮಿಟಿ(೧೯೯೬) ಮತ್ತು ಲೆಫ್ಟಿನೆಂಟ್ ಜನರಲ್ ಜಿ.ಆರ್.ಮುಖರ್ಜಿ ಕಮಿಟಿ(೨೦೦೦)ಗಳೂ ಇದನ್ನೇ ಬಯಸಿದ್ದವು.

* ಕರಣ್ ಸಿಂಗ್‌ರವರು ರಾಜ್ಯಪಾಲರಾದ ಎನ್.ಎನ್.ವೋಹ್ರಾರವರ ಪದಚ್ಯತಿಯನ್ನು ಬಯಸುತ್ತಾರೆ. ನೀವಿದನ್ನು ಬಯಸುವಿರಾ ?
ವೋಹ್ರಾ ನನ್ನ ಗೆಳೆಯ. ಆದರೆ, ನಿಜಸಂಗತಿಯೆಂದರೆ ಈ ಎಲ್ಲ ಸಮಸ್ಯೆಗಳು ಶುರುವಾಗಿದ್ದು ಅವರ ಅಧಿಕಾರಾವಧಿಯಲ್ಲೇ. ಭೂಮಿಯನ್ನು ವಾಪಸ್ ಪಡೆದದ್ದೂ ಅವರೇ. ಇದು ವಿಶಿಷ್ಟವಾದ ಭೂದಾನವೇನೂ ಆಗಿರಲಿಲ್ಲ. ಅನೇಕರು ಕಾಶ್ಮೀರದ ಅರಣ್ಯಪ್ರದೇಶವನ್ನು ತಮ್ಮದಾಗಿಸಿಕೊಂಡಿದ್ದಾರೆ. ಮೊಬೈಲ್ ಟವರ್‌ಗಳನ್ನು ಹೂಳಲು ರಿಲೆಯನ್ಸ್‌ಗೆ ಭೂಮಿ ನೀಡಲಾಗಿದೆ. ಆದರೆ, ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕರಿಗೆ ಹಿಂದೂಗಳು ತಮ್ಮ ಧಾರ್ಮಿಕ ಆಚರಣೆಗಳನ್ನು ಅನುಸರಿಸಲು ಭೂಮಿ ನೀಡಬಾರದೆಂದು ಬೊಬ್ಬೆ ಹಾಕುತ್ತಾರೆ. ಅನೇಕ ಹಜ್ ಕಾಂಪ್ಲೆಕ್ಸ್‌ಗಳು ತಲೆ ಎತ್ತಿವೆ. ಆದರೆ, ಅಮರನಾಥದ ಯಾತ್ರ್ರೆಯನ್ನು ಸುಗಮಗೊಳಿಸಲು ವ್ಯವಸ್ಥೆಗಳನ್ನು ಸೃಷ್ಟಿಸಬಾರದೇಕೆ ?

* ಕಾಶ್ಮೀರೀ ಮುಸ್ಲಿಮರನ್ನು ತೀವ್ರವಾದಿಗಳೆಂದು ಚಿತ್ರಿಸಲಾಗಿತಿರುವುದೇಕೆ ?
ಈಗ ಕಾಶ್ಮೀರದಲ್ಲಿ ಧಾರ್ಮಿಕ ಅಸಹಿಷ್ಣುತೆ ಇದೆ. ಕಾಶ್ಮೀರಿ ಪಂಡಿತರ ಸಾಮೂಹಿಕ ಮಾರಣಹೋಮವಾದಾಗ ಯಾರೂ ಮಾತನಾಡಲಿಲ್ಲ. ಪ್ರತ್ಯೇಕತಾವಾದಿಗಳಿಂದ ಕಾಶ್ಮೀರದ ತಾಲಿಬಾನೀಕರಣವಾಗಿದೆ. ಸೆಕ್ಯುಲರ್‌ವಾದಿಗಳು ಸಯ್ಯದ್ ಆಲಿ ಶಾ ಗಿಲಾನಿಯ ಕುಟಿಲ ರಾಜಕೀಯವನ್ನು ಎಂದೂ ಟೀಕಿಸುವುದಿಲ್ಲ.

* ಹುರಿಯತ್ ನಾಯಕರನ್ನು ದೆಹಲಿಗೆ ಮಾತುಕತೆಗಾಗಿ ಆಹ್ವಾನಿಸುವುದರಿಂದ ಪರಿಸ್ಥಿತಿ ತಿಳಿಯಾದೀತೇ ?
ಹುರಿಯತ್‌ನಲ್ಲಿ ಎರಡು ಗುಂಪುಗಳಿವೆ - ಮಧ್ಯಸ್ಥರೆಂದು ತಮ್ಮನ್ನು ತಾವು ಕರೆದುಕೊಳ್ಳುವವರು ಮತ್ತು ತೀವ್ರಗಾಮಿಗಳೆಂದು ತಮ್ಮನ್ನು ತಾವು ಕರೆದುಕೊಳ್ಳುವವರು. ಒಟ್ಟಾಗಿ ಅವರೆಲ್ಲಾ ಕೋಮುವಾದಿಗಳು ಮತ್ತು ರಾಷ್ಟ್ರವಿರೋಧಿಗಳು. ವಿದೇಶೀ ಪ್ರವಾಸಿಗರು ಅಮರನಾಥ ಯಾತ್ರೆಗೆ ಬಂದರೆ ಅವರಿಗೆ ಯಾವುದೇ ಆಕ್ಷೇಪವಿಲ್ಲ. ಭಾರತೀಯ ಹಿಂದೂಗಳು ಅಲ್ಲಿಗೆ ಭೇಟಿಕೊಟ್ಟರೆ ಅವರಿಗೆ ಅದೇನೋ ಕಸಿವಿಸಿ.

* ಪಿಡಿಪಿ ಮೃದುವಾಗುವುದೇ ?
ಪಿಡಿಪಿಯ ಮುಫ್ತಿ ಮೊಹಮ್ಮದ್ ಸಯೀದ್ ರಾಷ್ಟ್ರವಿರೋಧಿ ಮತ್ತು ಕೋಮುವಾದಿ. ಅವರು ಮುಖ್ಯಮಂತ್ರಿಯಾಗುವ ಮೊದಲೂ ಅವರ ಪ್ರಸಿದ್ಧಿ ಸಂಶಯಾತ್ಮಕವಾಗಿತ್ತು. ೧೯೮೦ರಲ್ಲಿ ಕಾಶ್ಮೀರದಲ್ಲಿ ಹಿಂದೂ ದೇವಾಲಯಗಳ ನಾಶವಾದಾಗ ಅವರೇನೂ ಮಾಡಲಿಲ್ಲ. ಅವರ ಮಗಳ ಅಪಹರಣವೂ ಒಂದು ನಾಟಕವೇ.

* ಪಿಡಿಪಿಯೇ ಈ ಭೂಮಿ ಹಸ್ತಾಂತರಕ್ಕೆ ಒಪ್ಪಿಗೆ ಕೊಟ್ಟಿತ್ತು. ಇದು ವಿವಾದವಾಗುವ ಲಕ್ಷಣಗಳು ಕಂಡುಬಂದಾಗ ಅದು ಸೆಕ್ಯುಲರ್ ಮುಖವಾಡ ಧರಿಸಿತೇ ?
ಪಿಡಿಪಿ ರಾಷ್ಟ್ರವಿರೋಧಿ ಮತ್ತು ಪ್ರತ್ಯೇಕತಾವಾದಿ ಸಂಘಟನೆ. ಅದು ಯಾವತ್ತೂ ಮೋಸದ ಆಟವನ್ನೇ ಆಡುತ್ತದೆ. ಮುಫ್ತಿಯವರು ಎಂತಹವರೆಂದರೆ - ಇವತ್ತಿಗೂ ಭಯೋತ್ಪಾದಕರ ಮನೆಯವರಿಗೆ ಪೆನ್ಶನ್ ನೀಡುವ ಏಕೈಕ ರಾಷ್ಟ್ರವೆಂದರೆ ಭಾರತ.

* ಕಾಶ್ಮೀರದ ವಿವಾದದ ಬಗೆಗೆ ನೆಹರುರವರ ಧೋರಣೆಗಳ ತಳಹದಿ ಸಡಿಲಗೊಳ್ಳುತ್ತಿದೆಯೇ ?
ನೆಹರು ಒಳ್ಳೆಯ ವ್ಯಕ್ತಿ. ಆದರೆ, ಅವರ ಅನೇಕ ಆಲೋಚನೆಗಳು ಸೋಲನ್ನಪ್ಪಿದವು. ಮುಜಫ್ಫರಾಬಾರ್‌ಅನ್ನು ಮೂರು ಬಾರಿ ಆಕ್ರಮಿಸುವ ಸದವಕಾಶ ಲಭಿಸಿತ್ತು. ನೆಹರೂರವರು ನಮ್ಮನ್ನು ತಡೆದರು ಮತ್ತು ಹಿಂಬರುವಂತೆ ಆದೇಶಿಸಿದರು. ಸೈನದಲ್ಲಿನ ಮೂಗುತೂರಿಸುವಿಕೆ ಮತ್ತು ರಾಜನೀತಿಯ ಹೆಜ್ಜೆಗಳು ಸೋಲನ್ನಪ್ಪಿದವು.

No comments: